Site icon Vistara News

Indian fishermen: 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ, ಇನ್ನಿಬ್ಬರು ಅಲ್ಲೇ ಉಳಿದಿದ್ದೇಕೆ?

Indian Fishermen

ನವದೆಹಲಿ: ತಮ್ಮ ದೇಶದ ಜೈಲಿನಲ್ಲಿ 198 ಭಾರತೀಯ ಮೀನುಗಾರರನ್ನು (Indian fishermen) ಪಾಕಿಸ್ತಾನ (Pakistan) ಸರ್ಕಾರವು ಬಿಡುಗಡೆ ಮಾಡಿದೆ. ಈಗ ಬಿಡುಗಡೆಯಾಗುತ್ತಿರುವವ ಮೀನುಗಾರರು ಅರಬ್ಬೀ ಸಮುದ್ರದಲ್ಲಿ ಜಗ ಗಡಿ ದಾಟಿದ ಕಾರಣಕ್ಕೆ ಬಂಧನಕ್ಕೊಳಗಾದವರಾಗಿದ್ದಾರೆ. ಸೌಹಾರ್ದತೆಯ ಪ್ರತೀಕವಾಗಿ ಪಾಕಿಸ್ತಾನ ಸರ್ಕಾರವು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಕರಾಜಿಯ ಮಾಲಿರ್‌ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದ್ದು, ಅವರ ಗುರುವಾರ ಲಾಹೋರ್‌ಗೆ ತೆರಳುವ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ ಅವರು ಭಾರತಕ್ಕೆ ವಾಪಸಾಗಲಿದ್ದಾರೆಂದು ಪಾಕಿಸ್ತಾನದ ದಿ ನ್ಯೂಸ್ ವರದಿ ಮಾಡಿದೆ. ಬಿಡುಗಡೆಯಾಗುತ್ತಿರುವ ಮೊದಲ ತಂಡವು ಸುಮಾರು 200 ಮೀನುಗಾರರನ್ನು ಹೊಂದಿತ್ತು. ಆದರೆ, ಈ ತಂಡದ ಪೈಕಿ ಇಬ್ಬರ ಮೀನುಗಾರರು ತೀವ್ರ ಅನಾರೋಗ್ಯಪೀಡಿತರಾಗಿರುವುದರಿಂದ ಅವರು ಪ್ರಯಾಣ ಮಾಡುತ್ತಿಲ್ಲ. ಉಳಿದ 198 ಮೀನುಗಾರರನ್ನು ಮಾತ್ರವೇ ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಉಳಿದ ಮೀನುಗಾರರ ತಂಡವನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ರಿಲೀಸ್ ಆಗಲಿದ್ದಾರೆ. ಮೀನುಗಾರರು ತಪ್ಪಾಗಿ ಜಲ ಗಡಿಯನ್ನು ದಾಟಿ ಉಭಯ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಬಂದು ಬಿಡುತ್ತಾರೆ. ಅಂಥ ಸಂದರ್ಭದಲ್ಲಿ ಭದ್ರಾತ ಪಡೆಗಳು, ಗಡಿ ದಾಟಿ ಬಂದ ಮೀನುಗಾರರನ್ನು ಬಂಧಿಸುತ್ತವೆ. ಮತ್ತೆ ಸ್ವಲ್ಪ ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡುತ್ತವೆ. ಈ ಕ್ರಮ ಉಭಯ ದೇಶಗಳ ಕಡೆಯಿಂದಲೂ ನಡೆಯುತ್ತದೆ.

ಇದನ್ನೂ ಓದಿ: ಪಾಕಿಸ್ತಾನ ಸಚಿವ ಬಿಲಾವಲ್ ಭುಟ್ಟೊ ಗೋವಾ ಭೇಟಿ: 600 ಭಾರತೀಯ ಮೀನುಗಾರರಿಗೆ ಸಿಕ್ತು ಗುಡ್​ನ್ಯೂಸ್​!

ಈಗ ಬಿಡುಗಡೆಯಾಗಿರುವ ಭಾರತೀಯ ಮೀನುಗಾರರಿಗೆ ಸಾರಿಗೆ ಸೌಲಭ್ಯವನ್ನು ಇಧೀ ಫೌಂಡೇಷನ್ ನೀಡುತ್ತಿದೆ. ಲಾಹೋರ್‌ವರೆಗೂ ಅವರ ಸುರಕ್ಷಿತ ಪ್ರಯಾಣದ ಹೊಣೆಯನ್ನು ಈ ಫೌಂಡೇಷನ್ ಹೊತ್ತುಕೊಂಡಿದೆ. ಲಾಹೋರ್‌ಗೆ ಬಂದ ಬಳಿಕ ಈ ಮೀನುಗಾರರನ್ನು ಫೆಡರ್ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಅವರನ್ನು ವಾಘಾ ಗಡಿಯವರೆಗೂ ಕರೆದುಕೊಂಡು ಬರಲಾಗುತ್ತದೆ. ಇದರೊಂದಿಗೆ ಮೀನುಗಾರರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version