Site icon Vistara News

Parliament Session: ರಾಜ್ಯಸಭೆಯಲ್ಲಿ ಮತ್ತೊಮ್ಮೆ ಜಗದೀಪ್ ಧನಕರ್-ಜಯಾ ಬಚ್ಚನ್ ಜಟಾಪಟಿ! ಈ ವಿಡಿಯೊ ನೋಡಿ

Parliament Session

ನವದೆಹಲಿ: ರಾಜ್ಯಸಭೆ ಕಲಾಪದ(Parliament Session) ವೇಳೆ ಇಂದು ಮತ್ತೊಮ್ಮೆ ಸಭಾಧ್ಯಕ್ಷ ಜಗದೀಪ್ ಧನಕರ್(Jagdeep Dhakhar) ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌(Jaya Amitabh Bachchan) ನಡುವೆ ಮತ್ತೊಮ್ಮೆ ಜಟಾಪಟಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೊನೆಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ(Sonia Gandhi) ಸೇರಿದಂತೆ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡಿದ ಘಟನೆಗೆ ಸಂಸತ್‌ ಸಾಕ್ಷಿಯಾಯ್ತು.

ಸಭಾಧ್ಯಕ್ಷ ಧನ್‌ಕರ್‌ ಅವರು ಜಯಾ ಬಚ್ಚನ್‌ ಅವರನ್ನು ಮಾತನಾಡುವಂತೆ ಹೇಳಿದರು. ಗೌರವನೀತ ಜಯಾ ಅಮಿತಾಬ್‌ ಬಚ್ಚನ್‌ ಅವರು ಇದೀಗ ಮಾತನಾಡಲಿದ್ದಾರೆ. ಮ್ಯಾಡಮ್‌ ಪ್ರಾರಂಭಿಸಿ ಎಂದು ಧನ್‌ಕರ್‌ ಹೇಳುತ್ತಿದ್ದಂತೆ ಈ ಗಲಾಟೆ ಶುರುವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜಯಾ, “ನಾನು ಜಯಾ ಅಮಿತಾಬ್‌ ಬಚ್ಚನ್‌ ಮಾತನಾಡುತ್ತಿದ್ದೇನೆ. ನಾನು ಒಬ್ಬ ಕಲಾವಿದೆ. ಒಬ್ಬ ವ್ಯಕ್ತಿಯ ವರ್ತನೆ, ಭಾವನೆ ನನಗೆ ಅರ್ಥವಾಗುತ್ತದೆ. ಕ್ಷಮಿಸಿ ನಿಮ್ಮ ಮಾತಿನ ಧಾಟಿ ಸರಿಯಿಲ್ಲ ಎಂದು ಹೇಳಿದರು.

ಮುಂದುವರೆದು “ನಾವು ಸಹೋದ್ಯೋಗಿಗಳು ಸರ್. ನೀವು ಕುರ್ಚಿಯ ಮೇಲೆ ಕುಳಿತಿರಬಹುದು, ಆದರೆ ಪಾಠ ಮಾಡಲು ನಾವು ಮಕ್ಕಳಲ್ಲ. ಇದು ಶಾಲೆಯಲ್ಲ ಎಂದು ಕಡುವಾಗಿ ಹೇಳಿದರು.

ತಾಳ್ಮೆ ಕಳೆದುಕೊಂಡ ಧನ್‌ಕರ್‌

ಜಯಾ ಜೀ ದಯವಿಟ್ಟು ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ. ಜಯಾ ಜೀ, ನೀವು ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದೀರಿ. ನಿಮಗೆ ಗೊತ್ತಾ, ಒಬ್ಬ ನಟ ನಿರ್ದೇಶಕನಿಗೆ ಒಳಪಟ್ಟಿರುತ್ತಾನೆ. ಪ್ರತಿದಿನ ನಾನು ಹೇಳಲು ಬಯಸುವುದಿಲ್ಲ. ನನಗೆ ಪಾಠ ಮಾಡಲು ಇಷ್ಟವಿಲ್ಲ. ನೀವು ನನ್ನ ಮಾತಿನ ಧಾಟಿ ಬಗ್ಗೆ ಮಾತನಾಡುತ್ತಿದ್ದೀರಾ? ನೀವು ಪ್ರಸಿದ್ಧರಾಗಿರಬಹುದು, ಆದರೆ ಸಭಾ ಮರ್ಯಾದೆಯನ್ನು ಅರ್ಥಮಾಡಿಕೊಳ್ಳಬೇಕು. ನೀವು ಮಾತ್ರ ಸದನಕ್ಕೆ ಖ್ಯಾತಿಯನ್ನು ತರುತ್ತೀರಿ ಎಂದು ನೀವು ಭಾವಿಸುತ್ತೀರಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದಾದ ಬಳಿಕ ಧನ್‌ಕರ್‌ ಕ್ಷಮೆಯಾಚಿಸಬೇಕೆಂದು ಜಯಾ ಬಚ್ಚನ್‌ ಪಟ್ಟು ಹಿಡಿದರು. ಕೊನೆಗೆ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದು, ಸಭಾತ್ಯಾಗ ಮಾಡಿದರು.

ಸದನದ ಹೊರಗೂ ಜಯಾ ಕಿಡಿ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಚ್ಚನ್, ಸಭಾಪತಿಯವರು ಬಳಸಿದ ಸ್ವರವನ್ನು ನಾನು ಆಕ್ಷೇಪಿಸಿದೆ. ನಾವು ಶಾಲಾ ಮಕ್ಕಳಲ್ಲ. ನಮ್ಮಲ್ಲಿ ಕೆಲವರು ಹಿರಿಯ ನಾಗರಿಕರು. ನಾನು ಧ್ವನಿಯಿಂದ ಅಸಮಾಧಾನಗೊಂಡಿದ್ದೇನೆ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕರು ಮಾತನಾಡಲು ಎದ್ದು ನಿಂತಾಗ, ಅವರು ಮೈಕ್ ಅನ್ನು ಸ್ವಿಚ್ ಆಫ್ ಮಾಡಿದರು. ಅವರು ಇದನ್ನು ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಜಯಾ ಬಚ್ಚನ್‌ ಯೂಟರ್ನ್‌; ಮೊನ್ನೆ ಅಮಿತಾಭ್‌ ಹೆಸರಿನಿಂದ ಗುರುತಿಸಿದ್ದಕ್ಕೆ ಗರಂ ಆಗಿದ್ದವರು ಸ್ವತಃ ಪತಿಯ ಹೆಸರು ಉಲ್ಲೇಖಿಸಿದರು!

Exit mobile version