ನವದೆಹಲಿ: 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ರೋಗಿಗಳು ಈಗ ಮೃತ ದಾನಿಯಿಂದ ಅಂಗಗಳನ್ನು ಸ್ವೀಕರಿಸಲು ನೋಂದಾಯಿಸಿಕೊಳ್ಳಬಹುದು(Receiving Organs From Donor). ಈ ಸಂಬಂಧ ಇದ್ದ ನಿಯಮಗಳಲ್ಲಿ ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿದೆ ಎಂದು ಹೇಳಲಾಗುತ್ತಿದೆ. ಅಗತ್ಯವಿರುವ ರೋಗಿಗಳು ಅಂಗಗಳನ್ನು ಸ್ವೀಕರಿಸಲು ಯಾವುದೇ ರಾಜ್ಯದಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು. ಇದಕ್ಕೆ ನೆರವಾಗುವಂತೆ ವಸತಿ ಮಾನದಂಡವನ್ನು ತೆಗೆದುಹಾಕಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯು ಶಿಫಾರಸು ಮಾಡಿದೆ ಎಂದು ಹೇಲಾಗುತ್ತಿದೆ(Organ Donation).
ಈ ರೀತಿಯ ಅಂಗಗಳನ್ನು ದಾನವಾಗಿ ಪಡೆಯಲು ನೋಂದಣಿ ಮಾಡಿಕೊಳ್ಳುವ ಯಾವುದೇ ರೋಗಿಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಬಾರದು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ. ಒಂದೊಮ್ಮೆ ಶುಲ್ಕಕ್ಕೆ ಮುಂದಾದರೆ, ಅದು 2014ರ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಿದ್ದಾಗ್ಯೂ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ ನೋಂದಣಿಗಾಗಿ 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ಶುಲ್ಕವನ್ನು ಪಡೆದುಕೊಳ್ಳಲಾಗುತ್ತಿದೆ ಎಂಬ ವರದಿಗಳಿವೆ.
ಇದನ್ನೂ ಓದಿ: Organ Donation | ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿದ ಕುಟುಂಬ; ಗೌರವ ನಮನ ಸಲ್ಲಿಸಿದ ಆಸ್ಪತ್ರೆ ಸಿಬ್ಬಂದಿ
65 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ರೋಗಿಗಳು ಮೃತ ದಾನಿಗಳಿಂದ ಅಂಗಾಗಗಳನ್ನು ದಾನವಾಗಿ ಪಡೆದುಕೊಳ್ಳಲು ಬೇಕಾಗಿರುವ ನಿಯಮಗಳಲ್ಲಿ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶಖ ಕಸಿ ಸಂಸ್ಥೆ(NOTTO) ಹಲವು ಪರಿಷ್ಕರಣೆಗಳನ್ನು ಮಾಡಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಹಿರಿಯ ರೋಗಿಗಳಿಗೆ ಅಂಗಾಂಗ ದಾನ ಪಡೆಯಲು ಅಡ್ಡಿಯಾಗಿದ್ದ ಅನೇಕ ನಿಯಮಗಳನ್ನು ಬದಲಿಸಿ, ಅನುಕೂಲಕ ಕಲ್ಪಿಸಲಾಗಿದೆ.