ನವದೆಹಲಿ: ಕೋಲ್ಕಾತ್ತಾದ ಆರ್‌ಜಿ ಕರ್ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಬರ್ಬರ ಕೊಲೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಈ ಮಧ್ಯೆ ಬೆಚ್ಚಿ ಬೀಳಿಸುವ ಅಂಶವೊಂದು ಬಹಿರಂಗಗೊಂಡಿದ್ದು, ದೇಶದಲ್ಲಿ ಸರಾಸರಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ (Physical Abuse) ಎನ್ನುವ ವಿಚಾರ ಬೆಳಕಿಗೆ ಬಂದಿದೆ. 2017 ಮತ್ತು 2022ರ ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ಸುಮಾರು 86 ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ಪರಿಚಿತರಿಂದಲೇ ದೌರ್ಜನ್ಯ ನಡೆದಿದೆ ಎನ್ನುವುದು ಮತ್ತುಷ್ಟು ಭಯ ಹುಟ್ಟು ಹಾಕಿದೆ.
ಪ್ರತಿ ಗಂಟೆಗೊಮ್ಮೆ ನಡೆಯುವ ನಾಲ್ಕು ಅತ್ಯಾಚಾರ ಪ್ರಕರಣಗಳ ಪೈಕಿ ಮೂರರಲ್ಲಿ ಪರಿಚಿತ ವ್ಯಕ್ತಿಯೇ ದೌರ್ಜನ್ಯ ಎಸಗಿರುವುದನ್ನು ಅಂಕಿ-ಅಂಶ ಬಹಿರಂಗಪಡಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau-NCRB)ದ ವಾರ್ಷಿಕ ವರದಿಯ ಪ್ರಕಾರ, 2017 ಮತ್ತು 2022ರ ನಡುವೆ ಭಾರತದಲ್ಲಿ ಒಟ್ಟು 1.89 ಲಕ್ಷ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಕನಿಷ್ಠ 1.79 ಲಕ್ಷ ಪ್ರಕರಣಗಳಲ್ಲಿ ಅತ್ಯಾಚಾರಿ ಪರಿಚಿತ ವ್ಯಕ್ತಿಯೇ ಆಗಿದ್ದು, 9,670 ಪ್ರಕರಣಗಳಲ್ಲಿ ಸಂತ್ರಸ್ತೆಗೆ ಅತ್ಯಾಚಾರಿಯ ಬಗ್ಗೆ ಮಾಹಿತಿ ಇರಲಿಲ್ಲ.
This is NCRB data. 97% of all rapes are done by known men – with friends or romantic partners making up for a lion's share.
— Wanderer (@Bhikhshu) August 15, 2024
So, girls need to look into their own choices of what kind of chapris they like to hang out with & put their trust on, instead of blaming "unknown" men. https://t.co/harzK6oO86 pic.twitter.com/Sxl3A78O0E
ಸಂತ್ರಸ್ತರ ಪೈಕಿ 18ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂದರೆ 1.89 ಲಕ್ಷ ಸಂತ್ರಸ್ತೆಯರ ಪೈಕಿ ಈ ವಯೋಮಾನದವರ ಸಂಖ್ಯೆ 1.13 ಲಕ್ಷ. ಇನ್ನು ಪ್ರತಿದಿನ ದಾಖಲಾಗಿ 86 ಪ್ರಕರಣಗಳಲ್ಲಿ 52 ಮಂದಿ 18ರಿಂದ 30 ವರ್ಷದೊಳಗಿನವರು.
ಉದ್ಯೋಗ ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?
ಭಾರತದಾದ್ಯಂತ ವರದಿಯಾದ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಬಹಳ ಕಡಿಮೆಯಾದರೂ ಈ ಅಂಕಿ-ಅಂಶಗಳೂ ಗಾಬರಿ ತರಿಸುತ್ತವೆ. ಪ್ರತಿದಿನ ಸರಾಸರಿ ಓರ್ವ ಮಹಿಳೆ ಉದ್ಯೋಗದ ಸ್ಥಳ ಅಥವಾ ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತ್ತಾರೆ ಎನ್‌ಸಿಆರ್‌ಬಿ ತಿಳಿಸಿದೆ. ಎನ್‌ಸಿಆರ್‌ಬಿ 2014ರಿಂದ ಕಚೇರಿಗಳಲ್ಲಿ ನಡೆಯುತ್ತಿರುವ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಮಾಹಿತಿ ಕಲೆ ಹಾಕುತ್ತಿದೆ.
ಆರಂಭದ ವರ್ಷಗಳಲ್ಲಿ (2014, 2015) ಎರಡು ವಿಭಾಗಗಳ ಮೂಲಕ ಈ ಅಂಕಿ ಅಂಶವನ್ನು ಕಲೆ ಹಾಕಲಾಗುತ್ತಿತ್ತು. ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎನ್ನುವ ಎರಡು ವಿಭಾಗಗಳನ್ನು ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಬಳಿಕ ಇವೆರಡನ್ನು ಸಂಯೋಜಿಸಿ ʼಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯʼ ಒಂಬ ಒಂದೇ ವಿಭಾಗದಲ್ಲಿ ಮಾಹಿರಿ ಸಂಗ್ರಹಿಸಿಡಲಾಗುತ್ತಿದೆ.
2014-2022ರ ಮಧ್ಯೆ ಉದ್ಯೋಗದ ಸ್ಥಳಗಳಲ್ಲಿ ಕನಿಷ್ಠ 4,231 ಲೈಂಗಿಕ ದೌರ್ಜನ್ಯ ಪ್ರಕರಗಳು ವರದಿಯಾಗಿವೆ. ಕಚೇರಿ ಆವರಣದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾದರೆ ಕೆಲಸಕ್ಕೆ ಸಂಬಂಧಿಸಿದ ಇತರ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. 2017ರ ನಂತರ ಪ್ರತಿ ವರ್ಷ 400ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
2014, 2015 ಮತ್ತು 2016ರಲ್ಲಿ ಎನ್‌ಸಿಆರ್‌ಬಿ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನಡೆದ ಅತ್ಯಾಚಾರಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. ಮೂರು ವರ್ಷಗಳಲ್ಲಿ ಇಂತಹ 1,795 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಂತರ ಈ ವರದಿಯಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಜತೆಗೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಸೇರಿಸಲಾಯಿತು.
ಕಾನೂನು ಏನು ಹೇಳುತ್ತದೆ?
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರ ಪ್ರಕಾರ 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಎಲ್ಲ ಕಚೇರಿ / ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸಲು ಆಂತರಿಕ ಸಮಿತಿಗಳನ್ನು (Internal Committees) ರಚಿಸುವುದನ್ನು ಕಡ್ಡಾಯ. ಸಂತ್ರಸ್ತ ಮಹಿಳೆ ಅಥವಾ ಆಕೆಯ ಪರವಾಗಿ ಆಪ್ತರು ಲೈಂಗಿಕ ಕಿರುಕುಳದ ಲಿಖಿತ ದೂರು ಸಲ್ಲಿಸಬಹುದು.
ಇದನ್ನೂ ಓದಿ: Kolkata Doctor Murder Case: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ಏನಿರುತ್ತೆ? ಏನಿರಲ್ಲ?