ನವದೆಹಲಿ: ಗುಂಪು ಘರ್ಷಣೆ, ಹೊಡೆದಾಟ, ದೇಶವಿರೋಧಿ ಘೋಷಣೆ, ಪ್ರತಿಭಟನೆ ಹೀಗೆ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ದಿಲ್ಲಿಯ(Delhi) ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ (JNU) ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ(physical abuse) ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಉಪನ್ಯಾಸಕನ ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘ(Students Union) ಒತ್ತಾಯಿಸಿದೆ. ಆರೋಪಿ ಉಪನ್ಯಾಸಕ ಸಂತ್ರಸ್ತೆಗೆ ಪೋನ್ ಕರೆ, ಮೆಸೇಜ್ ಮಾಡುವುದು, ಪೋಲಿ ಜೋಕ್‌ಗಳನ್ನು ಕಳುಹಿಸುವುದು, ಏಕಾಂತದಲ್ಲಿ ಭೇಟಿಯಾಗುವಂತೆ ಒತ್ತಾಯಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೇ ಅದಕ್ಕೆ ನಿರಾಕರಿಸಿದರೆ ಫೈಲ್ ಮಾಡೋದಾಗಿಯೂ ಬೆದರಿಕೆಯನ್ನೊಡ್ಡಿದ್ದ. ಕೊನೆಗೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಆಕೆ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾಳೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ನವದೆಹಲಿ: ಗುಂಪು ಘರ್ಷಣೆ, ಹೊಡೆದಾಟ, ದೇಶವಿರೋಧಿ ಘೋಷಣೆ, ಪ್ರತಿಭಟನೆ ಹೀಗೆ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ (JNU) ಉಪನ್ಯಾಸಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ(physical abuse) ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಉಪನ್ಯಾಸಕನ ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘ(Students Union) ಒತ್ತಾಯಿಸಿದೆ. ಆರೋಪಿ ಉಪನ್ಯಾಸಕ ಸಂತ್ರಸ್ತೆಗೆ ಪೋನ್ ಕರೆ, ಮೆಸೇಜ್ ಮಾಡುವುದು, ಪೋಲಿ ಜೋಕ್‌ಗಳನ್ನು ಕಳುಹಿಸುವುದು, ಏಕಾಂತದಲ್ಲಿ ಭೇಟಿಯಾಗುವಂತೆ ಒತ್ತಾಯಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೇ ಅದಕ್ಕೆ ನಿರಾಕರಿಸಿದರೆ ಫೈಲ್ ಮಾಡೋದಾಗಿಯೂ ಬೆದರಿಕೆಯನ್ನೊಡ್ಡಿದ್ದ. ಕೊನೆಗೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಆಕೆ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾಳೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಏ.10ರಂದು ಸಂತ್ರಸ್ತ ವಿದ್ಯಾರ್ಥಿನಿ ವಿವಿಯ ಆಂತರಿಕ ದೂರುಗಳ ಸಮಿತಿ(ICC)ಗೆ ದೂರು ನೀಡಿದ್ದಳು. ಇದಾದ ಬಳಿಕ ಆಕೆಯ ಕೆಲವು ಸಹಸಪಾಠಿಗಳೂ ಕೂಡ ಉಪನ್ಯಾಸಕನಿಂದ ತಮಗಾಗುತ್ತಿರುವ ಮಾನಸಿಕ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. ಎರಡೂ ದೂರುಗಳನ್ನು ಗಂಭೀರಾಗಿ ಪರಿಗಣಿಸದೇ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿದ್ಯಾರ್ಥಿಗಳ ಸಂಘಟನೆ ದೂರಿದೆ. ಘಟನೆ ಬಗ್ಗೆ ICC ತಕ್ಷಣ ಉಪನ್ಯಾಸಕನ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಆತನನ್ನು ಅಮಾನತಗೊಳಿಸಬೇಕೆಂದು ಒತ್ತಾಯಿಸಿದೆ.
ಇನ್ನು ವಿದ್ಯಾರ್ಥಿ ಸಂಘದ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲು ಆ ಉಪನ್ಯಾಸಕ ಮತ್ತು ICC ನಿರಾಕರಿಸಿದೆ. ICC ಪ್ರಭಾವಿಗಳ ರಕ್ಷಣಗೆ ಪಣತೊಟ್ಟು ನಿಂತಿದೆ. ಹೀಗಾಗಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಕೆಲವು ದಿನಗಳ ಹಿಂದೆ ವಿದ್ಯಾರ್ಥಿ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಾಗಲೂ ಇದೇ ರೀತಿಯ ನಿರ್ಲಕ್ಷ್ಯ ವ್ಯಕ್ತವಾಗಿತ್ತು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ತಿಂಗಳು ನಾಲ್ವರು ವಿದ್ಯಾರ್ಥಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸುಮಾರು 10ದಿನಗಳ ಕಾಲ ವಿವಿಯ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.
ಜೆಎನ್‌ಯುವಿನಲ್ಲಿ ಕಳೆದ ತಿಂಗಳು ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಕ್ಷಗಳು ಜಯಭೇರಿ ಬಾರಿಸಿದ್ದವು. ಮತ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಎಬಿವಿಪಿ (ABVP) ಮುಂದಿದ್ದು, ನಂತರ ಅದನ್ನು ಹಿಂದಿಕ್ಕಿದ ಎಡಪಕ್ಷಗಳು ಮತ್ತೊಮ್ಮೆ ವಿಶ್ವವಿದ್ಯಾಲಯದಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದವು. ವಿದ್ಯಾರ್ಥಿ ಸಂಘದ ಎಲ್ಲಾ ನಾಲ್ಕು ಹುದ್ದೆಗಳನ್ನು ಎಡಪಕ್ಷಗಳು ಬಾಚಿಕೊಂಡಿವೆ. ಆ ಮೂಲಕ ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಭರವಸೆಯನ್ನು ಹುಸಿಗೊಳಿಸಿವೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ ಯಾವಾಗಲೂ ವಿವಾದದಿಂದ ಕೂಡಿದ್ದಾಗಿದ್ದು, ಅಂತಾರಾಷ್ಟ್ರೀಯ ಗಮನ ಸೆಳೆಯುತ್ತದೆ.
ಇದನ್ನೂ ಓದಿ:Pakistan: “ಭಾರತ ಸೂಪರ್ ಪವರ್‌ಪುಲ್ ರಾಷ್ಟ್ರ..ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ”; ಹೀಗಂದಿದ್ದು ಯಾರು ಗೊತ್ತಾ?
4 ವರ್ಷಗಳ ಕೋವಿಡ್ ವಿರಾಮದ ನಂತರ ನಡೆದ ಚುನಾವಣೆಯಲ್ಲಿ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್) ಒಳಗೊಂಡ ಯುನೈಟೆಡ್ ಲೆಫ್ಟ್ ಮೈತ್ರಿ ಅಭ್ಯರ್ಥಿಗಳು, ಆರ್‌ಎಸ್‌ಎಸ್-ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸ್ಪರ್ಧಿಸಿದ್ದರು. ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಉಮೇಶ್ ಚಂದ್ರ 2,118 ಮತಗಳನ್ನು ಪಡೆದರೆ, ಎಡಪಕ್ಷ ಅಭ್ಯರ್ಥಿ ಧನಂಜಯ್ 3,100 ಮತಗಳನ್ನು ಪಡೆದಿದ್ದರು.