Site icon Vistara News

Physical Abuse: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬರ್ಬರ ಕೊಲೆ; ದೇಹದ ತುಂಡುಗಳನ್ನು ರೈಲಿನಲ್ಲಿ ಪಾರ್ಸೆಲ್‌

Physical abuse

ಇಂಧೋರ್‌: ಬೀದಿ ಕಾಮುಕರ ಕಾಟ ದಿನೇದಿನೇ ಹೆಚ್ಚಾಗುತ್ತಲೇ ಇದೆ. ತಮ್ಮ ತೃಷೆಯನ್ನು ತೀರಿಸಿಕೊಳ್ಳಲು ಎಂಥಾ ನೀಚ ಮಟ್ಟಕ್ಕಾದರೂ ಕಾಮುಕರು ಇಳಿಯುತ್ತಾರೆ. ಒಂದು ವೇಳೆ ತಮ್ಮ ಕೃತ್ಯಕ್ಕೆ ಅಡ್ಡಿಯಾದರೆ ಆ ಮಹಿಳೆಯನ್ನೇ ಬರ್ಬರವಾಗಿ ಕೊಲೆಗೈಯುವ ಪ್ರಕರಣಗಳೂ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಎಳೆದೊಯ್ದ 60 ವರ್ಷದ ಕಾಮುಕ ಅತ್ಯಾಚಾರ(Physical Abuse) ಎಸಗಿ ಹತ್ಯೆ ಮಾಡಿದ ಭೀಕರ ಘಟನೆ(Viral News) ಉಜ್ಜೈನಿಯಲ್ಲಿ ನಡಿದಿದೆ

ಘಟನೆ ವಿವರ:

ಪತಿಯೊಂದಿಗೆ ಜಗಳ ಮಾಡಿ ಹೊರಬಂದಿದ್ದ ಮಹಿಳೆಗೆ ಆಶ್ರಯ ಕೊಡುವ ನೆಪದಲ್ಲಿ 60ರ ಕಾಮುಕ ಆಕೆಯನ್ನು ರೈಲು ನಿಲ್ದಾಣದ ಪಕ್ಕದಲ್ಲೇ ಇರುವ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಪಾಪಿ ಆಕೆಯನ್ನು ಹತ್ಯೆ ಮಾಡಿ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಹಾಕಿದ್ದಾನೆ. ಇದಷ್ಟೇ ಅಲ್ಲದೇ ಬಳಿಕ ಎರಡು ರೈಲಿನಲ್ಲಿ ಮೃತದೇಹ ತುಂಡುಗಳನ್ನು ಪಾರ್ಸೆಲ್ ಮಾಡಿದ್ದಾನೆ. ಇನ್ನು ಆರೋಪಿಯನ್ನು 60 ವರ್ಷ ಕಮಲೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ಅವರ ಹೆಡೆಮುರಿಕಟ್ಟಿದ್ದಾರೆ.

ಜೂನ್ 6ರಂದು ಈ ಘಟನೆ ನಡೆದಿದ್ದು, ಪತಿಯೊಂದಿಗೆ ಜಗಳ ಮಾಡಿದ 36 ವರ್ಷದ ಮಹಿಳೆ ಉಜ್ಜೈನಿ ರೈಲು ನಿಲ್ದಾಣದಲ್ಲಿ ಕುಳಿತಿದ್ದಳು. ಮಥುರಾಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ಮಹಿಳೆಗೆ ಆಶ್ರಯ ನೀಡುವ ನೆಪದಲ್ಲಿ ಬಂದ ಕಮಲೇಶ್‌ ಪಟೇಲ್‌ ಆಕೆಯನ್ನು ಪಕ್ಕದಲ್ಲೇ ಇರುವ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿ ಆಕೆಗೆ ತಿನ್ನುವ ಊಟದಲ್ಲಿ ನಿದ್ದೆ ಮಾತ್ರೆ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆದರೆ ನಿದ್ದೆಯ ಮಂಪರಿನಲ್ಲಿದ್ದ ಆಕೆ ಅತ್ಯಾಚಾರ ಪ್ರತಿಭಟಿಸಿದ್ದಾಳೆ. ಆಗ ಕೋಪದಲ್ಲಿ ಕಮಲೇಶ್ ಪಟೇಲ್ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದಾನೆ. ಸರಿಸುಮಾರು 4 ಗಂಟೆಗೂ ಹೆಚ್ಚು ಕಾಲ ಮಹಿಳೆಯ ದೇಹ ಹತ್ತರಿಸಿದ ಕಮಲೇಶ್ ಪಟೇಲ್‌, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ. ಬಳಿಕ ರೈಲು ನಿಲ್ದಾಣಕ್ಕೆ ತೆರಳಿ ಎರಡು ರೈಲುಗಳಲ್ಲಿ ಆಕೆಯ ಮೃತದೇಹದ ತುಂಡುಗಳನ್ನು ಇಟ್ಟು ಪರಾರಿಯಾಗಿದ್ದಾನೆ.

ಇನ್ನು ಜೂನ್ 10 ರಂದು ಉತ್ತರಖಂಡ ರಿಷಿಕೇಶಿ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಮಹಿಳೆಯ ಕೈ ಕಾಲುಗಳು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಹಿಳೆಯ ದೇಹದ ಇತರ ಭಾಗಗಳು ಸಿಕ್ಕಿವೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ರೈಲು ಹಾದು ಬಂದ ಎಲ್ಲಾ ನಿಲ್ದಾಣಗಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಪತ್ತೆ ಹಚ್ಚಿದ ಪೊಲೀಸರು ಕಮಲೇಶ್ ಪಟೇಲ್ ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಹಿಂದೆಯೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shashi Tharoor Controversy: ಉತ್ತರಪ್ರದೇಶದ ಬಗ್ಗೆ ಶಶಿ ತರೂರ್‌ ಹೇಳಿದ್ದೇನು ಗೊತ್ತಾ?; ಭಾರೀ ವಿವಾದಕ್ಕೀಡಾಗ್ತಿದೆ ಈ ಪೋಸ್ಟ್‌

Exit mobile version