Site icon Vistara News

Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

physical abuse

ಭೋಪಾಲ್‌: ಆತ ಅಕ್ಷರಶಃ ಒಂದು ಅಕ್ಷರ ಓದಲೂ ಬರೆಲು ಬಾರದ ಅನಕ್ಷರಸ್ಥ. ಆದರೆ ತಾನು ನಡೆಸುತ್ತಿದ್ದ ಹೀನಕೃತ್ಯಕ್ಕೆ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡಿದ್ದ ಎಂದರೆ ಒಂದು ಕ್ಷಣಕ್ಕೆ ಎಂಥವರಾದರೂ ಆತನ ಮಾತಿಗೆ ತಲೆದೂಗಲೇ ಬೇಕು. ಆಧುನಿಕ ತಂತ್ರಜ್ಞಾನ ಇಂತಹ ಕ್ರಿಮಿನಲ್‌ಗಳಿಗೆ ಹೇಗೆ ಸಹಾಯ ಆಗ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ವಾಯಿಸ್‌ ಚೇಜಿಂಗ್‌ ಆಪ್‌(Voice Changing App) ಬಳಸಿಕೊಂಡು ವಿದ್ಯಾರ್ಥಿನಿಯರಿಗೆ ಬಲೆ ಬೀಸಿ ಅವರ ಮೇಲೆ ಅತ್ಯಾಚಾರ(Physical Abuse) ಎಸಗುತ್ತಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಧ್ಯಪ್ರದೇಶದ ಸಿಧಿಯಲ್ಲಿ ಈ ಘಟನೆ ನಡೆದಿದ್ದು, ಬೃಜೇಶ್‌ ಕುಶ್ವಾಹ್‌ ಎಂಬಾತ ಬಂಧಿತ ಆರೋಪಿ. ಈತ ವಾಯಿಸ್‌ ಚೇಂಜಿಂಗ್‌ ಆಪ್‌ ಬಳಸಿಕೊಂಡು ತನ್ನನ್ನು ತಾನು ಉಪನ್ಯಾಸಕಳೆಂದು ಹೇಳಿಕೊಂಡು ವಿದ್ಯಾರ್ಥಿನಿಯರಿಗೆ ಕರೆ ಮಾಡುತ್ತಿದ್ದ. ಮಹಿಳೆಯರ ಧ್ವನಿಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಸ್ಕಾಲರ್‌ಶಿಪ್‌ ಪಡೆಯಲು ಅಹಾಯ ಮಾಡುವುದಾಗಿ ವಿದ್ಯಾರ್ಥಿನಿಯರನ್ನು ನಂಬಿಸುತ್ತಾನೆ. ಯಾರೂ ಇಲ್ಲದ ಸ್ಥಳಕ್ಕೆ ಬರುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸುವ ಈತ ಅಲ್ಲಿ ಯುವಕನೋರ್ವ ನಿಮ್ಮನ್ನು ತನ್ನ ಬಳಿಕ ಕರೆದೊಯ್ಯಲು ಬರುತ್ತಾನೆ ಎಂದು ಹೇಳುತ್ತಾನೆ. ಆತನ ಮಾತನ್ನು ನಂಬಿದ ಬಾಲಕಿಯರು ಹಾಗೆಯೇ ಮಾಡುತ್ತಾರೆ. ಅವರನ್ನು ಕಾಡಿಗೆ ಎಳೆದೊಯ್ದು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ತ ಯುವತಿ ಹೇಳಿದ್ದಾಳೆ.

ಇನ್ನು ಕುಶ್ವರಾನ ಜಾಲಕ್ಕೆ ಇದುವರೆಗೆ 7 ಜನ ಆದಿವಾಸು ಕಾಲೇಜು ವಿದ್ಯಾರ್ಥಿನಿಯರು ಬಲಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿ ಕುಶ್ವಾಹ ಹೆಲ್ಮೆಟ್ ಧರಿಸುತ್ತಿದ್ದ. ಅಲ್ಲದೇ ಕೈಗಳಿಗೆ ಗ್ಲೌಸ್ ಧರಿಸುತ್ತಿದ್ದ. ಇದರಿಂದಾಗಿ ಸಂತ್ರಸ್ತೆಯರಿಗೆ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದಾಖಲಾದ ದೂರುಗಳಲ್ಲಿ ಆತ ಗ್ಲೌಸ್ ಧರಿಸುತ್ತಿದ್ದ ಎಂಬ ವಿಷಯದಿಂದ, ಆತ ಸಿಕ್ಕಿಬಿದ್ದಿದ್ದಾನೆ. ಆರೋಪಿ ಈ ಹಿಂದೆ ಮಹಾರಾಷ್ಟ್ರದ ಗಿರಣಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಗ್ಲೌಸ್ ಧರಿಸುತ್ತಿದ್ದ ಎಂದು ತಿಳಿದು ಬಂದಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಆರೋಪಿಗಳಿಂದ ಇನ್ನೂ ಹೆಚ್ಚಿನ ದೌರ್ಜನ್ಯಗಳಾಗಿವೆಯೇ ಎಂದು ತನಿಖೆ ನಡೆಸಲು 9 ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಕುಶ್ವಾಹಾ ಸೇರಿ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ. ಸಿಧಿ ಜಿಲ್ಲಾಡಳಿತ ಬುಲ್ಡೋಜರ್ ಬಳಸಿ ಆರೋಪಿಗಳ ಮನೆಯನ್ನು ಧ್ವಂಸಗೊಳಿಸಿದೆ. ಇನ್ನು ಮೊಬೈಲ್‌ ಆಪ್‌ಗಳ ಬಗ್ಗೆ ಎಚ್ಚರವಹಿಸುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೋ ಓದಿ: Fire Accident: ಗುಜರಾತ್‌ ಅಗ್ನಿ ದುರಂತ; ಸಾವಿನ ಸಂಖ್ಯೆ 32ಕ್ಕೆ ಏರಿಕೆ; SIT ತನಿಖೆಗೆ ಆದೇಶ

Exit mobile version