Site icon Vistara News

Maldives: ಭಾರತದ ಯುದ್ಧವಿಮಾನ ಹಾರಿಸುವ ತಾಕತ್ತು ನಮ್ಮ ಪೈಲಟ್‌ಗಳಿಗಿಲ್ಲ ಎಂದ ಮಾಲ್ಡೀವ್ಸ್, ಎಂಥಾ ದುಸ್ಥಿತಿ!

Maldives

Pilots Incapable Of Flying Aircraft Donated By India: Maldives Minister

ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೆಲ ತಿಂಗಳ ಹಿಂದೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ (Maldives Tourism) ಭಾರಿ ಹೊಡೆತ ಬಿದ್ದಿದೆ. ಇಷ್ಟಾದರೂ, ಚೀನಾ ಯೋಜನೆ, ದುಡ್ಡಿನ ಮುಲಾಜಿನಿಂದಾಗಿ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್‌ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ, “ಭಾರತವು ಮಾಲ್ಡೀವ್ಸ್‌ಗೆ ನೀಡಿರುವ ಮೂರು ಯುದ್ಧವಿಮಾನಗಳನ್ನು ನಿರ್ವಹಿಸುವ ಪೈಲಟ್‌ಗಳೇ ನಮ್ಮಲ್ಲಿಲ್ಲ” ಎಂಬುದಾಗಿ ಮಾಲ್ಡೀವ್ಸ್‌ ತಿಳಿಸಿದೆ. ಇದು ಮಾಲ್ಡೀವ್ಸ್‌ (Maldives) ಸೇನೆಯ ಅದಕ್ಷತೆಗೆ ನಿದರ್ಶನ ಎಂದು ಹೇಳಲಾಗುತ್ತಿದೆ.

ಮಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಸ್ಸನ್‌ ಮೌಮೂನ್‌, “ಭಾರತ ನೀಡಿದ ಮೂರು ವಿಮಾನಗಳನ್ನು ಹಾರಿಸುವ ಕೌಶಲವು ನಮ್ಮ ಪೈಲಟ್‌ಗಳಿಗೆ ಇಲ್ಲ. ಅಂತಹ ಪರವಾನಗಿ ಹೊಂದಿರುವ ಪೈಲಟ್‌ಗಳು ಮಾಲ್ಡೀವ್ಸ್‌ ಸೇನೆಯಲ್ಲಿ ಇಲ್ಲ” ಎಂದು ಹೇಳಿದ್ದಾರೆ. ಇದುವರೆಗೆ ಮಾಲ್ಡೀವ್ಸ್‌ನಲ್ಲಿದ್ದ ಭಾರತದ ಯೋಧರು ವಿಮಾನಗಳನ್ನು ನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಯೋಧರು ಭಾರತಕ್ಕೆ ವಾಪಸಾಗಿದ್ದಾರೆ. ಭಾರತವು ಅವುಗಳನ್ನು ದೇಣಿಗೆ ನೀಡಿದ ಕಾರಣ ಯುದ್ಧವಿಮಾನಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಆದರೆ, ಇವುಗಳನ್ನು ನಿಭಾಯಿಸುವ ಕೌಶಲವೂ ಮಾಲ್ಡೀವ್ಸ್‌ ವಾಯುಪಡೆ ಪೈಲಟ್‌ಗಳಿಗೆ ಇಲ್ಲ ಎಂಬುದು ಬಯಲಾಗಿದೆ.

ಭಾರತೀಯರ ಭೇಟಿ ಕುಸಿತ

ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್‌ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.

ಮಾಲ್ಡೀವ್ಸ್‌ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ. ಅಲ್ಲದೆ, ಭಾರತದ ಮನವೊಲಿಸಲು ಯತ್ನಿಸುತ್ತಿದೆ.

ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್‌ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್‌ ಎದುರಿಸುತ್ತಿದೆ.

ಇದನ್ನೂ ಓದಿ: Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Exit mobile version