ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎರಡು ದಿನಗಳ ಕಾಲ ಫ್ರಾನ್ಸ್ (France) ಭೇಟಿ ಪೂರೈಸಿದ್ದಾರೆ. ಈ ವೇಳೆ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ (French President Emmanuel Macron) ಅವರು ಪ್ರಧಾನಿ ಮೋದಿ ಅವರಿಗೆ ಪ್ಯಾರಿಸ್‌ನ ಲಾವ್ರೆ ಮ್ಯೂಸಿಯಮ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು(Dinner). ಈ ಔತಣಕೂಟ ಕೂಡ ಹಲವಾರು ಕಾರಣಗಳಿಂದಾಗಿ ವಿಶೇಷ ಎನಿಸಿತು. ಫ್ರಾನ್ಸ್ ನ್ಯಾಷನಲ್ ದಿನವಾದ ಜುಲೈ 14ರಂದು ನಡೆಯಿತಲ್ಲದೇ, 1953ರಲ್ಲಿ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಅವರ ಬಳಿಕ ಲಾವ್ರೆ ಮ್ಯೂಸಿಯಮ್‌ನಲ್ಲಿ ವಿದೇಶ ಗಣ್ಯರಿಗೆ ಔತಣಕೂಟ ಏರ್ಪಡಿಸಿದ್ದರೆ ಅದು ಮೋದಿ ಅವರಿಗೆ ಮಾತ್ರವೇ ಆಗಿದೆ. ಇದೇ ವೇಳೆ, ಆಸ್ಕರ್ ವಿಜೇತ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ಜೈ ಹೋ ಹಾಡನ್ನು (Jai Ho Song) ಎರಡು ಬಾರಿ ಹಾಡಲಾಯಿತು! ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ(PM Modi France Visit).
An incredible moment as the world echoes India's greatness.
— Jyotiraditya M. Scindia (@JM_Scindia) July 16, 2023
Jai Ho 🇮🇳 pic.twitter.com/PXJK54Okf0
ಡಿನ್ನರ್ ವೇಳೆ ಬ್ಯಾಂಡ್‌ನವರು ಎ ಆರ್ ರೆಹಮಾನ್ ಅವರ ಆಸ್ಕರ್ ವಿಜೇತ ಹಾಡನ್ನು ಹಾಡುತ್ತಿರುವಂತೆ ಮ್ಯಾಕ್ರನ್ ಮತ್ತು ಪಿಎಂ ಮೋದಿ ಪ್ರದರ್ಶನವನ್ನು ವೀಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರೂ ನಾಯಕರು ಹಾಡನ್ನು ಆಸ್ವಾದಿಸುತ್ತಾ, ಮಧ್ಯೆ ನಗುವನ್ನು ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಫ್ರೆಂಚ್ ಅಧ್ಯಕ್ಷರು ಹಾಡುಗಳ ಬೀಟ್‌ಗಳನ್ನು ಆನಂದಿಸುತ್ತಿರುವಾಗ ಟೇಬಲ್ ಅನ್ನು ಬಡಿಯುತ್ತಿರುವುದನ್ನೂ ಕಾಣಬಹುದು. ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ, ರಾತ್ರಿಯ ಊಟದ ವೇಳೆ ಎರಡು ಬಾರಿ ಈ ಹಾಡನ್ನು ಪ್ಲೇ ಮಾಡಲಾಯಿತು.
ಜೈ ಹೋ ವಿಶೇಷತೆ ಮಾತ್ರವಲ್ಲದೇ, ಡಿನ್ನರ್‌ಗೆ ಸಿದ್ಧಪಡಿಸಲಾದ ಮೆನು ಕೂಡ ಗಮನ ಸೆಳೆಯುವಂತಿತ್ತು. ಈ ಮೆನು ಫ್ರಾನ್ಸ್‌ನ ರಾಷ್ಟ್ರಧ್ವಜದ ಬಣ್ಣಗಳ ಬದಲಿಗೆ ಭಾರತೀಯ ತ್ರಿವರ್ಣವನ್ನು ಒಳಗೊಂಡಿತ್ತು. ಇದರ ಜೊತೆಗೆ, ಪ್ರಧಾನ ಮಂತ್ರಿ ಮೋದಿ ಅವರಿಗಾಗಿ ವಿಶೇಷವಾಗಿ ಸಸ್ಯಾಹಾರಿ ಮೆನುವನ್ನು ಸಿದ್ಧಪಡಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: PM Modi France Visit: ವಿದೇಶದಲ್ಲಿ ಮೋದಿ ತಮಿಳು ಪ್ರೇಮ; ಫ್ರಾನ್ಸ್‌ನಲ್ಲೂ ವಣಕ್ಕಮ್, ತಲೈವಾ ಪದ ಬಳಕೆ
ಕಳೆದ 25 ವರ್ಷಗಳಲ್ಲಿ ಜಗತ್ತು ಅನೇಕ ಏರಿಳಿತಗಳು ಮತ್ತು ಸವಾಲಿನ ಸಮಯವನ್ನು ಎದುರಿಸಿದೆ. ಆದರೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ಆಳವಾಗಿ ಬೆಳೆಯುತ್ತಲೇ ಇದೆ. ನಾವು ಪರಸ್ಪರ ತಿಳಿವಳಿಕೆ, ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಸುದೀರ್ಘ ಮತ್ತು ಮಹತ್ವದ ಪ್ರಯಾಣವನ್ನು ಮಾಡಿದ್ದೇವೆ. ಅಧ್ಯಕ್ಷ ಮ್ಯಾಕ್ರನ್ ಅವರ ವೈಯಕ್ತಿಕ ಪ್ರಯತ್ನಗಳಿಂದಾಗಿ ನಮ್ಮ ಬಾಂಧವ್ಯಗಳು ಪ್ರತಿಯೊಂದು ದಿಕ್ಕಿನಲ್ಲೂ ಮುನ್ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಔತಣಕೂಟದಲ್ಲಿ ಹೇಳಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.