ಪ್ಯಾರಿಸ್, ಫ್ರಾನ್ಸ್: ಭಾರತವು (India) ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ(Developed Nation) ಸಂಕಲ್ಪದಲ್ಲಿ ಫ್ರಾನ್ಸ್ (France) ದೇಶವನ್ನು ತನ್ನ ಸ್ವಾಭಾವಿಕ ಪಾಲುದಾರ ರಾಷ್ಟ್ರವಾಗಿ ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಜಂಟಿ ಹೇಳಿಕೆ ಬಿಡುಗಡೆ ಮೊದಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ (French President Emmanuel Macron) ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ (Bastille day parade) ಭಾಗವಹಿಸಿದ್ದರು(PM Modi France Visit).
ನಾವು ಉಭಯ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತಿದ್ದೇವೆ. ಹಿಂದಿನ 25 ವರ್ಷಗಳ ಭದ್ರ ಬುನಾದಿಯ ಆಧಾರದ ಮೇಲೆ ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹಾಕಿಕೊಳ್ಳಲಾಗುತ್ತಿದೆ. ಭಾರತದ ಜನರುಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ತೆಗೆದುಕೊಂಡಿದ್ದಾರೆ. ಈ ಪ್ರಯಾಣದಲ್ಲಿ, ನಾವು ಫ್ರಾನ್ಸ್ ಅನ್ನು ನೈಸರ್ಗಿಕ ಪಾಲುದಾರರಾಗಿ ನೋಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಎರಡು ದಿನಗಳ ಕಾಲ ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪ್ಯಾರಿಸ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಪ್ರಯತ್ನಗಳಲ್ಲಿ ಫ್ರಾನ್ಸ್ ಮಹತ್ವದ ಪಾಲುದಾರ ರಾಷ್ಟ್ರವಾಗಿದೆ. ಅದು ಜಲಾಂತರ್ಗಾಮಿ ನೌಕೆಗಳು ಅಥವಾ ಭಾರತೀಯ ನೌಕಾಪಡೆಯ ಹಡಗುಗಳೇ ಆಗಿರಲಿ, ಒಟ್ಟಾಗಿ ನಾವು ನಮ್ಮದು ಮಾತ್ರವಲ್ಲದೆ ಇತರ ಸ್ನೇಹಪರ ದೇಶಗಳ ಅವಶ್ಯಕತೆಗಳನ್ನು ಪೂರೈಸಲು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG) ರಫ್ತು ಮಾಡಲು ಇಂಡಿಯನ್ ಆಯಿಲ್ ಮತ್ತು ಫ್ರಾನ್ಸ್‌ನ ಟೋಟಲ್ ಕಂಪನಿಯ ನಡುವಿನ ದೀರ್ಘಾವಧಿಯ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಇದು ನಮ್ಮ ಶುದ್ಧ ಇಂಧನ ಪರಿವರ್ತನೆಯ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi France Visit: ಫ್ರೆಂಚ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿಂಗ್
ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಮಾತಾನಾಡಿ, ನಾವು ಯುವಕರನ್ನು ಮರೆಯಲು ಸಾಧ್ಯವಿಲ್ಲ. 2030 ರ ವೇಳೆಗೆ ಫ್ರಾನ್ಸ್ 30,000 ಫ್ರೆಂಚ್ ವಿದ್ಯಾರ್ಥಿಗಳನ್ನು ಭಾರತಕ್ಕೆ ಕಳುಹಿಸಲು ಬಯಸುತ್ತೇವೆ. ಹಾಗೆಯೇ, ಫ್ರಾನ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಯುವ ಭಾರತೀಯರಿಗೆ ನಾವು ಅನುಕೂಲಕರ ವೀಸಾ ನೀತಿಯನ್ನು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.