Site icon Vistara News

PM Modi Russia Visit: ರಷ್ಯಾದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ; ಕಣ್ಮನ ಸೆಳೆದ ಭಾರತೀಯ ನೃತ್ಯ ವೈಭವ

PM Modi Russia Visit

ಮಾಸ್ಕೋ: ಮೂರು ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಸೋಮವಾರ ರಷ್ಯಾಗೆ ಬಂದಿಳಿದಿದ್ದಾರೆ(PM Modi Russia Visit). 22ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲೆಂದು ರಷ್ಯಾ(Russia)ಗೆ ತೆರಳಿದಿರುವ ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಅಲ್ಲಿನ ಭಾರತೀಯರು ಮತ್ತು ರಷ್ಯಾ ಪ್ರಜೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೋದಿಗೆ ಸ್ವಾಗತ ಕೋರಿದರು.

ಸಾಂಸ್ಕೃತಿಕ ನೃತ್ಯದ ಮೂಲಕ ಎರಡೂ ಸಮುದಾಯದ ಕಲಾವಿದರು ಮೋದಿಯನ್ನು ಬರಮಾಡಿಕೊಂಡಿದ್ದಾರೆ. ಹುಡುಗಿಯರ ತಂಡವೊಂದು ರಾಜಸ್ಥಾನಿ ಹಾಡು ರಂಗೀಲೋ ಮಾರೋ ಡೋಲ್ನಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮತ್ತೊಂದೆಡೆ ಯುವಕರ ತಂಡ ವಂದೇ ಮಾತರಂ ಘೋಷಣೆ ಕೂಗಿದರು. ಇನ್ನೊಂದು ಕಡೆ ಯುವಕರು ಡೋಲು ಬಾರಿಸಿ ಸಂಭ್ರಮಿಸಿದರು.

ಇನ್ನು ಮೋದಿ ಮಾಸ್ಕೋದಲ್ಲಿರುವ ಕಾರ್ಲ್‌ಟನ್‌ ಹೊಟೇಲ್‌ ತಲುಪುತ್ತಿದ್ದಂತೆ ಅವರನ್ನು ನೋಡಲು ಅನೇಕ ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು ಜಮಾಯಿಸಿದ್ದರು. ಇದೇ ವೇಳೆ ಮೋದಿ ಮಕ್ಕಳು ಮತ್ತು ಭಾರತೀಯರ ಜೊತೆ ಸಂವಹನ ನಡೆಸಿದರು.

ಇನ್ನು ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್‌ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರು ಸೋಮವಾರ ನರೇಂದ್ರ ಮೋದಿ ಅವರಿಗೆ ಔತಣ ಕೂಡ ಏರ್ಪಡಿಸಿದ್ದಾರೆ. ಮಂಗಳವಾರ ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

Exit mobile version