ಪಟನಾ: ನಿತೀಶ್ ಕುಮಾರ್ ಅವರು ಆರ್‌ಜೆಡಿ ಮೈತ್ರಿ ತೊರೆದು, ಎನ್‌ಡಿಎ ಸೇರಿದ ಬಳಿಕ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವು ಬಲಿಷ್ಠವಾಗಿದೆ. ಹಾಗಾಗಿ, ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ (Narendra Modi) ಅವರು ಭರ್ಜರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಭಾನುವಾರ (ಏಪ್ರಿಲ್ 7) ಬಿಹಾರದ ನವಾಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಕಳೆದ 10 ವರ್ಷಗಲ್ಲಿ ನಾವು ನೀಡಿದ ಆಡಳಿತವು ಬರೀ ಟ್ರೈಲರ್ ಆಗಿದೆ. ಇನ್ನೂ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದರು.
“ಕಳೆದ 10 ವರ್ಷದಲ್ಲಿ ಭಾರತವು ಗಣನೀಯವಾಗಿ ಏಳಿಗೆ ಹೊಂದಿದೆ. ಮುಂದಿನ ದಿನಗಳಲ್ಲೂ ನಾವು ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಒಗ್ಗೂಡಿ ಕೆಲಸ ಮಾಡೋಣ. ನಾವು ಯಾರೂ ಇಂತಹ ಸುವರ್ಣ ಅವಕಾಶವನ್ನು ಕೈಚೆಲ್ಲುವುದು ಬೇಡ. ಮೋದಿಯಿಂದಾಗಿ ಈಗ ಭಾರತದ ಬಗ್ಗೆ ಜಗತ್ತು ಮೆಚ್ಚುಗೆಯ ಮಾತುಗಳನ್ನು ಆಡುತ್ತಿಲ್ಲ. ನೀವು ನೀಡಿದ ಒಂದು ಮತದಿಂದಾಗಿ ಇಂತಹ ಸಮಯ ಬಂದಿದೆ” ಎಂದು ಹೇಳಿದರು.
#WATCH | Addressing a public rally in Nawada, Bihar Prime Minister Narendra Modi says, "Modi had guaranteed that a grand temple of Ram Lalla will be built in Ayodhya and today the peak of the grand Ram temple is touching the sky…The Ram temple whose construction Congress and… pic.twitter.com/TESrOqmZTl
— ANI (@ANI) April 7, 2024
ನಾನು ಹುಟ್ಟಿರುವುದೇ ನಿಮಗಾಗಿ
“ನಾನು ಹುಟ್ಟಿರುವುದೇ ದೇಶದ ಜನರಿಗಾಗಿ” ಎಂದು ಮೋದಿ ಹೇಳಿದರು. “ಬಡತನ ನಿರ್ಮೂಲನೆಗಾಗಿ ಕಳೆದ 10 ವರ್ಷಗಳಿಂದ ಶ್ರಮಿಸಿದ ಫಲವಾಗಿ ಇಂದು ಕೋಟ್ಯಂತರ ಜನ ಬಡತನದಿಂದ ಹೊರಬಂದಿದ್ದಾರೆ. ನಾನು ಕೂಡ ನಿಮ್ಮ ಹಾಗೆಯೇ, ಬಡ ಕುಟುಂಬದ ಹಿನ್ನೆಲೆಯಿಂದ ಬಂದವನಾದ ಕಾರಣ ಬಡತನದ ನೋವು ನನಗೆ ಗೊತ್ತಿದೆ. ಇದುವರೆಗಿನ ಆಡಳಿತವು ಬರೀ ಟ್ರೈಲರ್ ಆಗಿದೆ. ಅದು ಕೇವಲ ರನ್‌ವೇ ಆಗಿದೆ. ಇನ್ನು ಟೇಕ್ ಆಫ್ ಆಗುವುದು ಬಾಕಿ ಇದೆ” ಎಂದು ತಿಳಿಸಿದರು.
ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ
ಇಂಡಿಯಾ ಒಕ್ಕೂಟದ ವಿರುದ್ಧವೂ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. “ಪ್ರತಿಪಕ್ಷಗಳ ಒಕ್ಕೂಟವು ದೇಶದ ಏಳಿಗೆಯನ್ನು ಬಯಸುವುದಿಲ್ಲ. ಮೋದಿ ನೀಡುವ ಗ್ಯಾರಂಟಿಗಳನ್ನು ಬ್ಯಾನ್ ಮಾಡಬೇಕು ಎಂಬುದಾಗಿ ಇಂಡಿಯಾ ಒಕ್ಕೂಟದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಅಷ್ಟಕ್ಕೂ ಮೋದಿ ಗ್ಯಾರಂಟಿಗಳಿಂದ ನೀವೇಕೆ ಹೆದರಿದ್ದೀರಿ? ನಿಮಗೇಕೆ ಮೋದಿ ಗ್ಯಾರಂಟಿ ಕಂಡರೆ ಅಷ್ಟು ಭಯ” ಎಂಬುದಾಗಿ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಾಂಗ್ ಕೊಟ್ಟರು.
ರಾಮಮಂದಿರ ಕನಸು ನನಸು
ರಾಮಮಂದಿರ ನಿರ್ಮಾಣದ ಕುರಿತು ಕೂಡ ರ‍್ಯಾಲಿಯಲ್ಲಿ ಮೋದಿ ಪ್ರಸ್ತಾಪಿಸಿದರು. “ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಲಾಗುವುದು ಎಂಬುದಾಗಿ ನಾನು ಭರವಸೆ ನೀಡಿದ್ದೆ. ಅದರಂತೆ, ರಾಮನ ಜನ್ಮಭೂಮಿಯಲ್ಲಿ ಇಂದು ರಾಮಮಂದಿರ ತಲೆ ಎತ್ತಿ ನಿಂತಿದೆ. ಕಾಂಗ್ರೆಸ್, ಆರ್‌ಜೆಡಿ ಸೇರಿ ಹಲವರು ರಾಮಮಂದಿರ ನಿರ್ಮಾಣವನ್ನು ತಡೆಯಲು ಯತ್ನಿಸಿದರು. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನು ವಿರೋಧಿಸಿದರು. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದವರನ್ನು ಪಕ್ಷದಿಂದ 6 ವರ್ಷಗಳವರೆಗೆ ಉಚ್ಚಾಟಿಸಿದರು” ಎಂಬುದಾಗಿ ಮೋದಿ ಟೀಕಿಸಿದರು.
ಇದನ್ನೂ ಓದಿ: Lok Sabha Election 2024: ಏಪ್ರಿಲ್ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್ ಶೋ