ನ್ಯೂಯಾರ್ಕ್: ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫ್ಯಾನ್. ಅವರು ಭಾರತಕ್ಕೆ ಯಾವುದು ಒಳಿತೋ ಅದನ್ನು ಮಾಡಲು ಬಯಸಿದ್ದಾರೆ ಎಂದು ಟ್ವಿಟರ್ ಮಾಲಿಕ, ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ. ಇಂದು ಅಮೆರಿಕ ಭೇಟಿಯಲ್ಲಿರುವ (PM Modi US Visit) ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದ ಬಳಿಕ ಅವರು ಹೀಗೆಂದರು.
ಮೋದಿಯವರು ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಭಾರತಕ್ಕೆ ಮುಂದಿನ ವರ್ಷ ನಾನು ಆಗಮಿಸಲಿದ್ದೇವೆ. ಹೊಸ ಕಂಪನಿಗಳನ್ನು ದೇಶಕ್ಕೆ ಸ್ವಾಗತಿಸುವಲ್ಲಿ ಮೋದಿ ಉತ್ಸುಕರಾಗಿದ್ದಾರೆ. ನಾನು ಮೋದಿಯವರ ಅಭಿಮಾನಿಯಾಗಿದ್ದೇನೆ. ಸ್ಟಾರ್‌ಲಿಂಕ್ ಕಂಪನಿಯನ್ನು ಭಾರತಕ್ಕೆ ತರಲು ನನಗೆ ಇಷ್ಟವಿದೆ ಎಂದು ಮಸ್ಕ್ ನುಡಿದರು.
ಭಾರತದ ಭವಿಷ್ಯದ ಬಗ್ಗೆ ನನಗೆ ಕಾತರವಿದೆ. ಯಾವುದೇ ದೊಡ್ಡ ದೇಶಗಳಿಗಿಂತ ಭಾರತಕ್ಕೆ ಹೆಚ್ಚಿನ ಸಾಧ್ಯತೆಯಿದೆ. ನನ್ನ ಮತ್ತು ಮೋದಿ ಭೇಟಿ ನಂತರ ನಾನು ಗ್ರಹಿಸಿದ್ದು ಏನೆಂದರೆ, ಅವರಿಗೆ ನಿಜಕ್ಕೂ ಭಾರತದ ಬಗ್ಗೆ ಕಾಳಜಿಯಿದೆ. ಹೊಸ ಕಂಪನಿಗಳ ಆಗಮನದ ಬಗ್ಗೆ ಅವರು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅವರ ಮತ್ತು ನನ್ನ ಭೇಟಿ ಅದ್ಭುತವಾಗಿತ್ತು. ಕೆಲವರ್ಷಗಳ ಹಿಂದೆ ಅವರು ನನ್ನ ಫ್ರೀಮಾಂಟ್ ಫ್ಯಾಕ್ಟರಿಗೆ ಭೇಟಿ ಕೊಟ್ಟಿದ್ದರು ಎಂದರು.
ಇದನ್ನೂ ಓದಿ: PM Modi US Visit: ಅಮೆರಿಕಕ್ಕೆ ಬಂದಿಳಿದ ಮೋದಿ; ಭರ್ಜರಿ ಸ್ವಾಗತ ನೀಡಿದ ಜನರು