Site icon Vistara News

PM Modi US Visit: ಬೈಡೆನ್‌ಗೆ ಮೋದಿ ನೀಡಿದ ವಿಶೇಷ ಉಡುಗೊರೆಗೂ, ಮೈಸೂರಿಗೂ ಇದೆ ನಂಟು

Modi Gifts Joe Biden

PM Modi US Visit: Modi's gift to Biden has a connection with Mysore

ವಾಷಿಂಗ್ಟನ್:‌ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ (PM Modi US Visit) ನರೇಂದ್ರ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರನ್ನು ಭೇಟಿಯಾದರು. ಬೈಡೆನ್‌ ದಂಪತಿಯು ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಮೋದಿ ಅವರು ಬೈಡೆನ್‌ ಅವರಿಗೆ ವಿಶೇಷ ಉಡುಗೊರೆ ನೀಡಿದ್ದು, ಉಡುಗೊರೆಗೂ, ಮೈಸೂರಿಗೂ ನಂಟಿರುವುದು ಹೆಚ್ಚಿನ ಮಹತ್ವ ಪಡೆದಿದೆ.

ಹೌದು, ನರೇಂದ್ರ ಮೋದಿ ಅವರು ಬೈಡೆನ್‌ ಅವರಿಗೆ ವಿಶೇಷ ಪೆಟ್ಟಿಗೆಯೊಂದನ್ನು ಉಡುಗೊರೆ ನೀಡಿದ್ದಾರೆ. ಆ ಪೆಟ್ಟಿಗೆ ತಯಾರಿಸಲು ಕರ್ನಾಟಕದ ಮೈಸೂರಿನ ಗಂಧದ ಮರವನ್ನು ಬಳಸಿದ್ದು, ಜೈಪುರದಲ್ಲಿ ಇದನ್ನು ತಯಾರಿಸಲಾಗಿದೆ. ಪೆಟ್ಟಿಗೆಯಲ್ಲಿ ಪೂಜಾ ಸಾಮಗ್ರಿಗಳು, ಬೆಳ್ಳಿಯಲ್ಲಿ ತಯಾರಿಸಿದ ಗಣೇಶನ ಮೂರ್ತಿ ಹಾಗೂ ಕೋಲ್ಕೊತಾದಲ್ಲಿ ತಯಾರಿಸಿದ ಹಣತೆ, ತಾಮ್ರದ ಪತ್ರಗಳು ಇವೆ.

ಬೈಡೆನ್‌ ಪತ್ನಿಗೆ ಡೈಮಂಡ್‌ ಗಿಫ್ಟ್

ಇದರ ಜತೆಗೆ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧಕ್ಕೆ 75 ವರ್ಷ ತುಂಬಿದ ಸ್ಮರಣಾರ್ಥ ಮೋದಿ ಅವರು ಪರಿಸರ ಸ್ನೇಹಿ, 7.5 ಕ್ಯಾರೆಟ್‌ನ ಗ್ರೀನ್‌ ಡೈಮಂಡ್‌ಅನ್ನು ಜಿಲ್‌ ಬೈಡೆನ್‌ ಅವರಿಗೆ ಉಡುಗೊರೆ ನೀಡಿದರು. ‌

ಇದನ್ನೂ ಓದಿ: PM Modi US Visit: ರಾಗಿ ಕೇಕ್‌, ಮಶ್ರೂಮ್;‌ ಜೋ ಬೈಡೆನ್‌ ಜತೆ ಮೋದಿ ಸವಿದ ವಿಶೇಷ ತಿನಿಸುಗಳು ಯಾವವು?

ಮೋದಿಗೆ ವಿಶೇಷ ಭೋಜನ ವ್ಯವಸ್ಥೆ

ಜೋ ಬೈಡೆನ್‌ ಹಾಗೂ ಅವರ ಪತ್ನಿ ಜಿಲ್‌ ಬೈಡೆನ್‌ ಅವರು ಮೋದಿ ಅವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಲೆಮನ್‌-ಡಿಲ್‌ ಯೊಗರ್ಟ್‌ ಸಾಸ್‌, ಕ್ರಿಸ್ಪ್‌ಡ್‌ ಮಿಲೆಟ್‌ ಕೇಕ್‌, ಸಮ್ಮರ್‌ ಸ್ಕ್ವಾಶಸ್‌, ಕಾಂಪ್ರೆಸ್ಡ್‌ ಕಲ್ಲಂಗಡಿ, ಟ್ಯಾಂಗಿ ಅವೊಕಾಡೊ ಸಾಸ್‌, ಸ್ಟಫ್ಡ್‌ ಪೋರ್ಟೊಬೆಲ್ಲೋ ಮಶ್ರೂಮ್‌, ಕ್ರೀಮಿ ಸ್ಯಾಫ್ರನ್‌-ಇನ್‌ಫ್ಯೂಸ್ಡ್‌ ರಿಸೊಟ್ಟೊ, ರೋಸ್‌ ಆ್ಯಡ್‌ ಕಾರ್ಡಮಮ್-ಇನ್‌ಫ್ಯೂಸ್ಡ್‌ ಸ್ಟ್ರಾಬೆರಿ ಶಾರ್ಟ್‌ಕೇಕ್‌ ಸೇರಿ ಹಲವು ತಿನಿಸುಗಳನ್ನು ಮೋದಿ ಸವಿದರು. ಹಾಗೆಯೇ, ಅಮೆರಿದಕ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಅವರೇ ವಿಶೇಷ ಮುತುವರ್ಜಿ ವಹಿಸಿ ಮೋದಿ ಅವರಿಗೆ ವಿಶೇಷ ಮೆನು ತಯಾರಿಸಿದ್ದರು ಎಂದು ತಿಳಿದುಬಂದಿದೆ.

Exit mobile version