ವಾಷಿಂಗ್ಟನ್: ಅಮೆರಿಕ ಭೇಟಿಯಲ್ಲಿರುವ ಪ್ರಧಾನ ಮಂತ್ರಿ (PM Modi US Visit) ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ (Jil Biden) ಬುಧವಾರ ಶ್ವೇತಭವನದಲ್ಲಿ ಬರಮಾಡಿಕೊಂಡರು.
ಅಧ್ಯಕ್ಷರು, ಪ್ರಥಮ ಮಹಿಳೆ ಮತ್ತು ಪ್ರಧಾನ ಮಂತ್ರಿಗಳು ಆತ್ಮೀಯ ಭೋಜನ ಕೂಟದಲ್ಲಿ ಒಟ್ಟುಗೂಡಿದರು ಮತ್ತು ಭಾರತದ ವಿವಿಧ ಪ್ರದೇಶಗಳ ಸಂಗೀತದ ಬ್ಯಾಂಡ್‌ನ ಸಂಗೀತವನ್ನು ಆಲಿಸಿ ಆನಂದಿಸಿದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ʼʼಯುಎಸ್ ಅಧ್ಯಕ್ಷ ಜೋ ಬೈಡೆನ್, ಪ್ರಥಮ ಮಹಿಳೆ ಜಿಲ್ ಬೈಡೆನ್ ಮತ್ತು ಪಿಎಂ ಮೋದಿ ಅವರು ಭಾರತದ ಹಲವೆಡೆಯ ಸಂಗೀತವನ್ನು ಭಾರತದ ಬ್ಯಾಂಡ್ ಮೂಲಕ ಆನಂದಿಸಿದರು. DMV ಆಧಾರಿತ ಭಾರತೀಯ ನೃತ್ಯ ಸ್ಟುಡಿಯೊ ಆದ ʼಸ್ಟುಡಿಯೋ ಧೂಮ್ʼನ ಯುವ ನೃತ್ಯಗಾರರು ಹೊಸ ಪೀಳಿಗೆಯ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಭಾರತೀಯ ನೃತ್ಯ ಪ್ರದರ್ಶನ ನೀಡಿದರುʼʼ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಇದಕ್ಕೂ ಮುನ್ನ ಮೋದಿಯವರು ಕೌಶಲ್ಯಾಭಿವೃದ್ಧಿ ಕುರಿತ ಸಂವಾದವೊಂದರಲ್ಲಿ ಮೋದಿ ಭಾಗವಹಿಸಿದರು. ಇದರಲ್ಲಿ ಪ್ರಥಮ ಮಹಿಳೆ ಜಿಲ್ ಬೈಡೆನ್ ಕೂಡ ಭಾಗವಹಿಸಿದ್ದರು.
ಮೋದಿಯವರು ನಿನ್ನೆಯಿಡೀ ನ್ಯೂಯಾರ್ಕ್‌ನಲ್ಲಿ ವಿವಿಧ ರಂಗಗಳ ತಜ್ಞರನ್ನು ಭೇಟಿಯಾಗಿದ್ದರು. ನಂತರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 9ನೇ ಅಂತರರಾಷ್ಟ್ರೀಯ ನಿಮಿತ್ತ ವಿಶೇಷ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯುಎನ್ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ನಂತರ ವಿಶೇಷ ವಿಮಾನದಲ್ಲಿ ವಾಷಿಂಗ್ಟನ್‌ಗೆ ಆಗಮಿಸಿದರು.
ಇದನ್ನೂ ಓದಿ: PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗಾಭ್ಯಾಸ ಹೇಗಾಯಿತು? ಫೋಟೊಗಳು ಇಂತಿವೆ