Site icon Vistara News

G20 Summit 2023: ‘ಟ್ರೆಷರ್ ಚೆಸ್ಟ್‌’ನಲ್ಲಿ ವಿಶ್ವ ನಾಯಕರು, ಅವರ ಪತ್ನಿಗೆ ಮೋದಿ ಕೊಟ್ಟ ಗಿಫ್ಟ್ ಏನು?

Treasure Chest

ನವದೆಹಲಿ: ದಿಲ್ಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಜಿ20 ಶೃಂಗ ಸಭೆಯಲ್ಲಿ (G20 Summit 2023) ಪಾಲ್ಗೊಂಡ ವಿಶ್ವ ನಾಯಕರಿಗೆ ಭಾರತವು ಅತ್ಯುತ್ತಮ ರೀತಿಯಲ್ಲಿ ಆತಿಥ್ಯವನ್ನು ನೀಡಿತು. ಇದಕ್ಕಾಗಿ ವಿಶ್ವ ನಾಯಕರಿಂದ ಗುಣಗಾನವೂ ವ್ಯಕ್ತವಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿಶ್ವ ನಾಯಕರು (World Leaders) ಮತ್ತು ಅವರ ಪತ್ನಿಯರಿಗೆ (Wives of World Leaders) ಟ್ರೇಷರ್ ಚೆಸ್ಟ್(ಖಜಾನೆ ಪೆಟ್ಟಿಗೆ – Treasure Chest)ನಲ್ಲಿ ಗಿಫ್ಟ್‌ಗಳ (Gifts) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಯಾವ ನಾಯಕರಿಗೆ ಏನೆಲ್ಲ ಗಿಫ್ಟ್‌ಗಳು ದೊರೆತಿವೆ, ಆ ಗಿಫ್ಟ್‌ಗಳ ಹಿನ್ನೆಲೆ ಇತ್ಯಾದಿ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.

ವಿಶ್ವ ನಾಯಕರ ಪತ್ನಿಗೆ ಮೋದಿ ಗಿಫ್ಟ್!

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಗೆ ಪ್ರಧಾನಿ ಟೈಮ್‌ಲೆಸ್ ಎನಿಸಿರುವ ಬನಾರಸಿ ಶಾಲನ್ನು ಉಡುಗೊರೆಯಾಗಿ ನೀಡಿದರೆ, ಅರ್ಜೆಂಟೀನಾ ಅಧ್ಯಕ್ಷರ ಪತ್ನಿ ಮಾರ್ಸೆಲಾ ಲುಚೆಟ್ಟಿ ಅವರಿಗೆ ಕರಕುಶಲ ಚಿತ್ತಾರ ಹೊಂದಿರುವ ಎಬೊನಿ ಜಾಲಿ ಪೆಟ್ಟಿಗೆಯಲ್ಲಿ ಬನಾರಸಿ ರೇಶ್ಮೆ ಶಾಲನ್ನು ನೀಡಲಾಗಿದೆ. ಅದೇ ರೀತಿ, ಬ್ರೆಜಿಲ್ ಅಧ್ಯಕ್ಷರ ಪತ್ನಿ ಹಾಗ ಆಸ್ಟ್ರೇಲಿಯಾದ ಪ್ರಧಾನಿಯ ಪತ್ನಿಗೆ ಕಾಶ್ಮೀರಿ ಪಾಶ್ರಿನಾ ಶಾಲನ್ನು ಗಿಫ್ಟ್ ಆಗಿ ನೀಡಲಾಗಿದೆ. ಇನ್ನು ಜಪಾನ್ ಪ್ರಧಾನಿ ಪತ್ನಿ ಯುಕೋ ಕಿಶಿದಾ ಅವರಿಗೆ ಕಾಂಜೀವರಂ ಶಾಲನ್ನು ಮತ್ತು ಇಂಡೋನೇಷಿಯಾದ ಪ್ರಥಮ ಮಹಿಳೆ ಇರಿಯಾನಾ ಜೋಕೊ ವಿಡೋಡೊ ಅವರಿಗೆ ಮುಗಾ ರೇಶ್ಮೆಯಿಂದ ಮಾಡಲಾದ ಅಸ್ಸಾಂ ಶಾಲನ್ನು ಕಾಣಿಕೆಯಾಗಿ ನೀಡಲಾಯಿತು. ಈ ಎಲ್ಲ ಗಿಫ್ಟ್‌ಗಳನ್ನು ವಿಶಿಷ್ಟ ಟ್ರೇಷರ್ ಚೆಸ್ಟ್‌ನಲ್ಲಿ ನೀಡಲಾಗಿದೆ.

ಏನಿದು ಟ್ರೇಷರ್ ಚೆಸ್ಟ್?

ಟ್ರೇಷರ್ ಚೆಸ್ಟ್‌ ಅನ್ನು ಭಾರತೀಯ ಭಾಷೆಯಲ್ಲಿ ಸರಳವಾಗಿ ಕಾಣಿಕೆ ಪೆಟ್ಟಿಗೆ ಅಥವಾ ಸಂದೂಕು ಎಂದು ಹೇಳಬಹುದು. ಆದರೆ, ಈ ಪೆಟ್ಟಿಗೆ ಮಹತ್ವದ ಕಲಾಕೃತಿಯಾಗಿರುತ್ತದೆ. ಕಾಣಿಕೆಯಾಗಿ ನೀಡಿರುವ ಈ ಪೆಟ್ಟಿಗೆಯನ್ನು ಶೀಶಮ್ (ಭಾರತೀಯ ರೋಸ್‌ವುಡ್) ಬಳಸಿ ಕೈಯಿಂದ ರಚಿಸಲಾಗಿದೆ. ಇದು ಅದರ ಶಕ್ತಿ, ಬಾಳಿಕೆ, ವಿಶಿಷ್ಟವಾದ ಧಾನ್ಯದ ಮಾದರಿಗಳು ಮತ್ತು ಶ್ರೀಮಂತ ಬಣ್ಣಕ್ಕಾಗಿ ಮೌಲ್ಯಯುತವಾಗಿದೆ. ಈ ಬಾಕ್ಸ್, ಮರದ ಮೇಲೆ ಕೆತ್ತಿದ ಹಿತ್ತಾಳೆಯ ಪಟ್ಟಿಯನ್ನು ಹೊಂದಿದ್ದು, ನೋಡಲು ನಯನಮನೋಹರವಾಗಿದೆ.

ಈ ಸುದ್ದಿಯನ್ನೂ ಓದಿ: G20 Summit 2023: ಜಿ20 ಶೃಂಗ ಮುಗಿದರೂ ಕೆನಡಾ ಪ್ರಧಾನಿ ಇನ್ನೂ ಭಾರತದಲ್ಲೇ ಇದ್ದಾರೆ ಏಕೆ?

ನಾಯಕರಿಗೇನು ಗಿಫ್ಟ್ ಕೊಟ್ಟರು ಮೋದಿ?

ರೆಡ್ ಗೋಲ್ಡ್ ಎಂದೇ ಹೆಸರಾಗಿರುವ ಕಾಶ್ಮೀರಿ ಕೇಸರಿ, ಜಗತ್ತಿನ ಅತಿ ಹೆಚ್ಚು ಬೆಲೆ ಬಾಳುವ ಟೀ ಎಂದು ಖ್ಯಾತವಾಗಿರುವ ಪೆಕೋ ಡಾರ್ಜಿಲಿಂಗ್ ಟೀ ಮತ್ತು ದಕ್ಷಿಣ ಭಾರತದ ವಿಸಿಷ್ಟ ನೀಲಗಿರಿ ಟೀ, ಅರಕು ವ್ಯಾಲಿಯಲ್ಲಿ ಬೆಳೆಯಲಾಗುವ ಅರಕು ಕಾಫಿ ಗಿಫ್ಟ್ ನೀಡಲಾಗಿದೆ. ಅಲ್ಲದೇ, ಜಗತ್ತಿನ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿರುವ ಸುಂದರ್‌ಬನ್‌ನಲ್ಲಿ ದೊರೆಯುವ ಮ್ಯಾಂಗ್ರೋವ್ ಜೇನು, ಕುರಕುಶಲತೆಯಿಂದ ಗಮನ ಸೆಳೆಯುವ ಕಾಶ್ಮೀರಿ ಶಾಲು, ಉತ್ತರ ಪ್ರದೇಶದ ಪ್ರಸಿದ್ಧ ಝೀಘ್ರಾಣಾ ಅತ್ತರ್, ಖಾದಿ ಸ್ಕಾರ್ಫ್, ಜಿ20 ಪ್ರೆಸಿಡೆನ್ಸಿ ಸ್ಮರಣಾರ್ಥ ಬಿಡುಗಡೆ ಮಾಡಲಾದ ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ಹೊಂದಿರುವ ಕಾಯಿನ್ ಬಾಕ್ಸ್‌ಗಳನ್ನು ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡ ಎಲ್ಲ ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ.

ವಿಶ್ವ ನಾಯಕರಿಗೆ ನೀಡಲಾಗಿರುವ ಎಲ್ಲ ಕಾಣಿಕೆಗಳು ಭಾರತದ ಹಿರಿಮೆಯನ್ನು ಹೆಚ್ಚಿಸುವ ಹೆಗ್ಗುರುತಗಳಾಗಿವೆ. ಕೈಯಿಂದ ತಯಾರಿಸಲಾದ ಕರಕುಶಲ ವಸ್ತುಗಳು, ಪ್ರಾದೇಶಿಕವಾಗಿ ವಿಶಿಷ್ಟವಾಗಿ ಪೇಯಗಳು ಹಾಗೂ ದೇಶದ ಸಾಂಸ್ಕೃತಿಕ ಹೆಮ್ಮೆಯನ್ನು ಸಾರುವ ವಸ್ತುಗಳನ್ನು ಉಡುಗೋರೆಯಾಗಿಯಾಗಿ ನೀಡಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version