Site icon Vistara News

PM Narendra Modi: ಮಕ್ಕಳನ್ನು ಪ್ರಾಂಕ್‌ ಮಾಡಿದ ಪ್ರಧಾನಿ ಮೋದಿ! ವಿಡಿಯೋ ವೈರಲ್

pm narendra modi

ರಾಂಚಿ: ಜಾರ್ಖಂಡ್‌ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಅಲ್ಲಿನ ರಾಜ್ಯಪಾಲರ ಭವನದಲ್ಲಿ ನಿನ್ನೆ ಮಕ್ಕಳೊಂದಿಗೆ ಮಗುವಾಗಿ ಬೆರೆತರು. ಈ ಸಂದರ್ಭದಲ್ಲಿ ಮಕ್ಕಳನ್ನು ಅವರು ಪ್ರಾಂಕ್‌ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್ (Viral video) ಆಗುತ್ತಿದೆ. ‌

ಜಾರ್ಖಂಡ್‌ನ ರಾಂಚಿಯಲ್ಲಿರುವ ಗವರ್ನರ್‌ ಹೌಸ್‌ನಲ್ಲಿ ತಮ್ಮನ್ನು ಭೇಟಿ ಮಾಡಲು ಬಂದ ಮಕ್ಕಳ ಮುಂದೆ ಅವರು ಮಗುವೇ ಆದರು. ಮಕ್ಕಳ ಕಿವಿಗಳನ್ನು ಹಿಡಿದು ಒಂದಕ್ಕೊಂದು ತಾಕಿಸುವ ಆಟವಾಡಿದರು. ಹಣೆಯ ಮೇಲೆ ನಾಣ್ಯವನ್ನು ಅಂಟಿಸಿ ಅದನ್ನು ಮಾಯ ಮಾಡುವ ಮ್ಯಾಜಿಕ್‌ ಅನ್ನೂ ಮಾಡಿ ತೋರಿಸಿದರು. ನಂತರ ಮಕ್ಕಳು ನಾಣ್ಯ ಕಾಣದೆ ಅಚ್ಚರಿಗೊಂಡಾದ ದೊಡ್ಡದಾಗಿ ನಕ್ಕುಬಿಟ್ಟರು.

ಪ್ರಧಾನ ಮಂತ್ರಿ ಮೋದಿಯವರ ಈ ವಿಡಿಯೋವನ್ನು ಅವರ ಇನ್‌ಸ್ಟಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‌ಇದಕ್ಕೆ ಮೋದಿ ʼʼನನ್ನ ಎಳೆಯ ಗೆಳೆಯರ ಜೊತೆಗೆ ಕೆಲವು ಮರೆಯಲಾಗದ ಕ್ಷಣಗಳುʼʼ ಎಂದು ಕ್ಯಾಪ್ಷನ್‌ ಕೂಡ ಹಾಕಿದ್ದಾರೆ.

ಇದನ್ನು ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ನೋಡಿದ್ದು, ಲೈಕ್‌ ಮಾಡಿದ್ದಾರೆ. ʼʼಮೋದಿ ಮಕ್ಕಳೊಂದಿಗೂ, ದೊಡ್ಡವರೊಂದಿಗೆ ಯಾವುದೇ ಭೇದ ತೋರಿಸದೆ ಬೆರೆಯುತ್ತಾರೆʼʼ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋದಲ್ಲಿರುವ ಮಕ್ಕಳನ್ನು ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೂ ಹೋಲಿಸಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: PM Narendra Modi: ರಾಹುಲ್ ಗಾಂಧಿ ಮೂರ್ಖರ ಸರದಾರ! ಪಿಎಂ ನರೇಂದ್ರ ಮೋದಿ ವಾಗ್ದಾಳಿ

Exit mobile version