Site icon Vistara News

PM Modi US Visit: ಜನಗಣಮನ ಮೊಳಗುವಾಗ ಮಳೆಯಲ್ಲೇ ನಿಂತು ಗೌರವ ಸಲ್ಲಿಸಿದ ಮೋದಿ; ನಮೋ ಎಂದ ಜನ

Narendra Modi Stands In Rain For National Anthem

PM Narendra Modi stands for National Anthem amid rain in Washington

ವಾಷಿಂಗ್ಟನ್‌: ನರೇಂದ್ರ ಮೋದಿ ಅವರನ್ನು ಟೀಕಿಸುವವರು, ಅವರ ಸರ್ಕಾರದ ನೀತಿಗಳನ್ನು ವಿರೋಧಿಸುವವರು ಕೂಡ ಮೋದಿ ಅವರ ದೇಶಪ್ರೇಮ, ದೇಶದ ಮೇಲೆ ಅವರು ಇಟ್ಟಿರುವ ಗೌರವವನ್ನು ಮೆಚ್ಚುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ನರೇಂದ್ರ ಮೋದಿ ಅವರು ಅಮೆರಿಕದ ವಾಷಿಂಗ್ಟನ್‌ನಲ್ಲಿ (PM Modi US Visit) ರಾಷ್ಟ್ರಗೀತೆ ಮೊಳಗುವಾಗ ಮಳೆಯ ಮಧ್ಯೆಯೇ ನಿಂತು ಗೌರವ ಸಲ್ಲಿಸಿದ್ದಾರೆ.

ಹೌದು, ಜೂನ್‌ 21ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ಮೋದಿ ಅವರು ವಾಷಿಂಗ್ಟನ್‌ ಡಿಸಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರು ಇಳಿಯುತ್ತಲೇ ರಾಷ್ಟ್ರಗೀತೆ ಮೊಳಗಿತು. ಮಳೆ ಬರುತ್ತಿರುವುದನ್ನೂ ಲೆಕ್ಕಿಸದ ಮೋದಿ ಅವರು ಜನಗಣಮನಕ್ಕೆ ಗೌರವ ಸಲ್ಲಿಸಿದರು. ಇನ್ನು, ಈ ವಿಡಿಯೊ ವೈರಲ್‌ ಆಗಿದ್ದು, ಮೋದಿ ಅವರ ದೇಶಪ್ರೇಮವನ್ನು ಜನ ಕೊಂಡಾಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೊ

ಇಂದ್ರದೇವನ ಆಶೀರ್ವಾದ ಎಂದ ಮೋದಿ

ವಾಷಿಂಗ್ಟನ್‌ ಡಿಸಿಗೆ ಆಗಮಿಸುತ್ತಲೇ ಮಳೆ ಬಂದಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. “ವಾಷಿಂಗ್ಟನ್‌ ಡಿಸಿ ತಲುಪಿದೆ. ಇಲ್ಲಿಗೆ ಬರುತ್ತಲೇ ಇಂದ್ರದೇವನ ಆಶೀರ್ವಾದ ದೊರೆತಿರುವುದು ಮತ್ತಷ್ಟು ವಿಶೇಷವಾಗಿದೆ. ಇದರ ಜತೆಗೆ ಅನಿವಾಸಿ ಭಾರತೀಯರು ಸ್ವಾಗತಿಸಿರುವುದು ಕೂಡ ವಿಶೇಷ ಎನಿಸಿದೆ” ಎಂದು ಮೋದಿ ಟ್ವೀಟ್‌ ಮಾಡಿದರು.

ಇದನ್ನೂ ಓದಿ: PM Modi US Visit: ಬೈಡೆನ್‌ಗೆ ಮೋದಿ ನೀಡಿದ ವಿಶೇಷ ಉಡುಗೊರೆಗೂ, ಮೈಸೂರಿಗೂ ಇದೆ ನಂಟು

ಮೋದಿಗೆ ಉಡುಗೊರೆ ನೀಡಿದ ಬೈಡೆನ್‌

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ನರೇಂದ್ರ ಮೋದಿ ಅವರಿಗೆ ಹಳೆಯ ಕಾಲದ ಕೊಡಕ್‌ ಕ್ಯಾಮೆರಾ, ಖ್ಯಾತ ಕವಿ ರಾಬರ್ಟ್‌ ಫ್ರಾಸ್ಟ್ ಅವರ ಕವನ ಸಂಕಲನ ಸೇರಿ ಹಲವು ಉಡುಗೊರೆಗಳನ್ನು ನೀಡಿದ್ದಾರೆ. ಇನ್ನು, ನರೇಂದ್ರ ಮೋದಿ ಅವರು ಬೈಡೆನ್‌ ಅವರಿಗೆ ವಿಶೇಷ ಪೆಟ್ಟಿಗೆಯೊಂದನ್ನು ಉಡುಗೊರೆ ನೀಡಿದರು. ಆ ಪೆಟ್ಟಿಗೆ ತಯಾರಿಸಲು ಕರ್ನಾಟಕದ ಮೈಸೂರಿನ ಗಂಧದ ಮರವನ್ನು ಬಳಸಿದ್ದು, ಜೈಪುರದಲ್ಲಿ ಇದನ್ನು ತಯಾರಿಸಲಾಗಿದೆ. ಪೆಟ್ಟಿಗೆಯಲ್ಲಿ ಪೂಜಾ ಸಾಮಗ್ರಿಗಳು, ಬೆಳ್ಳಿಯಲ್ಲಿ ತಯಾರಿಸಿದ ಗಣೇಶನ ಮೂರ್ತಿ ಹಾಗೂ ಕೋಲ್ಕೊತಾದಲ್ಲಿ ತಯಾರಿಸಿದ ಹಣತೆ, ತಾಮ್ರದ ಪತ್ರಗಳು ಇವೆ.

Exit mobile version