ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ನರೇಂದ್ರ ಮೋದಿ (Narendra Modi) ಮೊದಲ ಬಾರಿಗೆ ಜು.8ರಂದು ರಷ್ಯಾ ಪ್ರವಾಸ (PM Modi Russia Visit) ಕೈಗೊಳ್ಳಲಿದ್ದಾರೆ. ಜುಲೈ 8ರಿಂದ 10ರವರೆಗೆ ನರೇಂದ್ರ ಮೋದಿ ಅವರು ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅದರಲ್ಲೂ, ಉಕ್ರೇನ್ ಹಾಗೂ ರಷ್ಯಾ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅವರು ರಷ್ಯಾಗೆ ತೆರಳುತ್ತಿದ್ದಾರೆ. ಜುಲೈ 10ರಂದು ನರೇಂದ್ರ ಮೋದಿ ಅವರು ಆಸ್ಟ್ರಿಯಾಗೆ ಭೇಟಿ ನೀಡಲಿದ್ದಾರೆ. ಕಳೆದ 41 ವರ್ಷಗಳಲ್ಲಿಯೇ ಆಸ್ಟ್ರಿಯಾಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎನಿಸಿದ್ದಾರೆ.
ಜುಲೈ 8 ಹಾಗೂ 9ರಂದು ನರೇಂದ್ರ ಮೋದಿ ಅವರು ಮಾಸ್ಕೋದಲ್ಲಿ ಇರಲಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಭೇಟಿ ವೇಳೆ ಉಭಯ ರಾಷ್ಟಗಳು ರಕ್ಷಣೆ, ಅನಿಲ ಮತ್ತು ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
Official announcement by Indian Govt: PM Modi to visit Russia, Austria from July 8th to 10th pic.twitter.com/005oC36jDZ
— Sidhant Sibal (@sidhant) July 4, 2024
ಪ್ರಧಾನಿ ಮೋದಿ ಇತ್ತೀಚೆಗೆ ಇಟಲಿಯಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ (G7 Summit)ಯಲ್ಲಿ ಪಾಲ್ಗೊಂಡಿದ್ದರು. ಇದರ ಬಳಿಕ ರಷ್ಯಾ ಪ್ರವಾಸ ಮಹತ್ವ ಪಡೆದುಕೊಂಡಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿತ್ ಪುಟಿನ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದರು. ಇದೀಗ ಪ್ರಧಾನಿ ಮೋದಿ ರಷ್ಯಾ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲಿದೆ. ಹಲವಾರು ರಕ್ಷಣಾ ಖರೀದಿಗಳಿಗಾಗಿ ಭಾರತವು ರಷ್ಯಾವನ್ನು ಹೆಚ್ಚು ಅವಲಂಬಿಸಿರುವುದರಿಂದ ರಷ್ಯಾವು ಹಲವಾರು ವಿಷಯಗಳಿಗೆ ಚೀನಾದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದನ್ನು ಭಾರತ ಬಯಸುವುದಿಲ್ಲ.
ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತವನ್ನು ಮಾತ್ರ ಪ್ರಬಲ ಮಧ್ಯವರ್ತಿಯಾಗಿ ಕಾಣುವುದರಿಂದ ಈ ಭೇಟಿಯು ಪಶ್ಚಿಮಕ್ಕೆ ಉಪಯುಕ್ತವಾಗಬಹುದು ಎಂದು ಮೂಲಗಳು ಹೇಳುತ್ತವೆ. ಪ್ರಧಾನಿ ಮೋದಿ 2022ರಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಶೃಂಘಸಭೆಯಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು.
ಈ ಹಿಂದೆ ಎನ್‌ಎಸ್‌ಎ ದೋವಲ್ ಕೈಗೆತ್ತಿಕೊಂಡ ರಕ್ಷಣೆ, ಚೀನಾ ಅಂಶ ಮತ್ತು ಉಕ್ರೇನ್‌ನಲ್ಲಿ ಮಧ್ಯಸ್ಥಿಕೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ಈಗ ಉನ್ನತ ಮಟ್ಟದಲ್ಲಿ ನಡೆಯಲಿವೆ, ಆದರೆ ನಿರ್ಣಾಯಕ ಅಂಶವಾಗಿ ಮಾರ್ಪಟ್ಟಿರುವ ಭಾರತ-ರಷ್ಯಾ ಬಾಂಧವ್ಯದ ಮೇಲೆ ಎಲ್ಲರ ಕಣ್ಣುಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜೂನ್ 13ರಂದು ಇಟಲಿಯಲ್ಲಿ ಆಯೋಜಿಸಿದ್ದ ಜಿ7 ಶೃಂಗಸಭೆ (G7 Summit)ಯಲ್ಲಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Cabinet Committees: ಸಂಪುಟ ಸಮಿತಿಗಳನ್ನು ರಚಿಸಿದ ಕೇಂದ್ರ; ಭದ್ರತಾ ಸಮಿತಿಗೆ ಮೋದಿಯೇ ಮುಖ್ಯಸ್ಥ!