Site icon Vistara News

POSC Act: ಪಾಶ್‌ ಕಾಯಿದೆಯಡಿಯಲ್ಲಿ ಜಿಲ್ಲಾ ಅಧಿಕಾರಿಗಳ ನೇಮಕ; ಸುಪ್ರೀಂ ಖಡಕ್‌ ಅದೇಶ

8 votes cast in Chandigarh mayoral election were Valid Says Supreme Court

ಹೊಸದಿಲ್ಲಿ: ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ (POSH act) ಅಡಿಯಲ್ಲಿ ಜಿಲ್ಲಾ ಅಧಿಕಾರಿಗಳನ್ನು ಎಲ್ಲಾ ಕಡೆ ತಕ್ಷಣವೇ ನೇಮಿಸುವಂತೆ ಸುಪ್ರೀಂ ಕೋರ್ಟ್‌ (supreme court) ಆದೇಶ ನೀಡಿದೆ.

ನಾಲ್ಕು ವಾರಗಳಲ್ಲಿ ತಮ್ಮ ಪ್ರಾದೇಶಿಕ ವ್ಯಾಪ್ತಿಯೊಳಗೆ ಪ್ರತಿ ಜಿಲ್ಲೆಗೆ ಜಿಲ್ಲಾ ಅಧಿಕಾರಿಯ ನೇಮಕವನ್ನು ಖುದ್ದಾಗಿ ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಎಲ್ಲ ಕೇಂದ್ರ, ರಾಜ್ಯ ಸರ್ಕಾರಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ನೇತೃತ್ವದ ಪೀಠ ನಿರ್ದೇಶನ ನೀಡಿದೆ. ಪಾಶ್‌ ಸಮಿತಿಗೆ ಜಿಲ್ಲಾ ಅಧಿಕಾರಿಯು ಪ್ರಮುಖ ಕಾರ್ಯಕಾರಿಯಾಗಿರುತ್ತಾರೆ.

ಹಲವಾರು ರಾಜ್ಯಗಳು ಈಗ ಅಸ್ತಿತ್ವದಲ್ಲಿರುವ ಅಧಿಕಾರಶಾಹಿಯ ಚೌಕಟ್ಟಿನೊಳಗೆ ಈ ಕಾನೂನಿನ ಸಾಂಸ್ಥಿಕ ಅವಶ್ಯಕತೆಗಳನ್ನು “ಬಲವಂತವಾಗಿ ಹೊಂದಿಸಲು” ಪ್ರಯತ್ನಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ವಿಷಾದಿಸಿದೆ. ನಿರ್ದಿಷ್ಟವಾಗಿ ಜಿಲ್ಲಾ ಅಧಿಕಾರಿಗಳನ್ನು ನೇಮಿಸಲು ವಿಫಲವಾದರೆ, ಇತರ ಅಂಶಗಳ ಜೊತೆಗೆ ಸ್ಥಳೀಯ ಸಮಿತಿಗಳು ಮತ್ತು ನೋಡಲ್ ಅಧಿಕಾರಿಗಳ ನೇಮಕಾತಿಯ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ದೂರು ಕಾರ್ಯವಿಧಾನ ಮತ್ತು ದೊಡ್ಡ ಚೌಕಟ್ಟು ಎಷ್ಟೇ ಪರಿಣಾಮಕಾರಿಯಾಗಿದ್ದರೂ, ಅಧಿಕಾರಿಗಳು ಸರಿಯಾಗಿ ನೇಮಕಗೊಳ್ಳದಿದ್ದರೆ ಅಸಮರ್ಪಕವಾಗಿ ಉಳಿಯುತ್ತದೆ. ಆದ್ದರಿಂದ, ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲೂ ಎಲ್ಲಾ ಸಮಯದಲ್ಲೂ ಅಧಿಸೂಚಿತ ಜಿಲ್ಲಾ ಅಧಿಕಾರಿಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠವು ನಿರ್ದೇಶಿಸಿದೆ.

POSH ಕಾಯಿದೆಯ ಯೋಜನೆಯನ್ನು ಉಲ್ಲೇಖಿಸಿದ ಪೀಠ, ಜಿಲ್ಲಾ ಅಧಿಕಾರಿಯ ಪಾತ್ರವು ಪ್ರಮುಖವಾಗಿದೆ ಎಂದು ಗಮನಿಸಿದೆ. “ಕಾಯ್ದೆಯ ಅನುಷ್ಠಾನದಲ್ಲಿ ಹಲವಾರು ಅಂಶಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. POSH ಕಾಯಿದೆಗೆ ಸಂಬಂಧಿಸಿದ ಸಮನ್ವಯ ಮತ್ತು ಹೊಣೆಗಾರಿಕೆಯ ವಿಷಯದಲ್ಲಿ ಹೇಳುವುದಾದರೆ, ಇವರೇ ಪ್ರಮುಖ. POSH ಕಾಯಿದೆಯ ನಿಬಂಧನೆಗಳು ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಅಧಿಕಾರಿಗಳ ಪಾತ್ರದ ಮೇಲೆ ಒತ್ತು ನೀಡಬೇಕು; ಅವರಿಗೆ ಮಾರ್ಗದರ್ಶನ ನೀಡಲು, ತರಬೇತಿ ನೀಡಲು ಮತ್ತು ಸಂವೇದನಾಶೀಲಗೊಳಿಸಲು ಪ್ರಯತ್ನ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

2013ರಲ್ಲಿ ಬಂದ ಈ ಕಾನೂನಿನ ಅನುಷ್ಠಾನದಲ್ಲಿ ಹಲವಾರು ಲೋಪದೋಷಗಳು ಮತ್ತು ಅನುಷ್ಠಾನದ ವಿವಿಧ ಮಾದರಿಗಳ ಹಿನ್ನೆಲೆಯಲ್ಲಿ POSH ಕಾಯಿದೆಯ ಪರಿಣಾಮಕಾರಿ ಅನುಷ್ಠಾನವನ್ನು ಕೋರಿ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (ಪಿಐಎಲ್‌ಗಳು) ವಿಚಾರಣೆ ನಡೆಸುತ್ತಿದೆ. ಪೀಠದ ಪ್ರಕಾರ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸಲು ಆಂತರಿಕ ಅಥವಾ ಸ್ಥಳೀಯ ಸಮಿತಿಗಳನ್ನು ರಚಿಸುವಲ್ಲಿ ವಿಫಲವಾದರೆ ಉದ್ಯೋಗದಾತರಿಂದ ದಂಡವನ್ನು ಸಂಗ್ರಹಿಸಲು ಜಿಲ್ಲಾ ಅಧಿಕಾರಿಗಳಿಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಲು POSH ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕಿದೆ.

ಸಂಸ್ಥೆಯು 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದರೆ ಕಾನೂನಿನ ಅಡಿಯಲ್ಲಿ ಪಾಶ್‌ ಕಾಯಿದೆಯಡಿ ಆಂತರಿಕ ಸಮಿತಿಯನ್ನು (IC) ಸ್ಥಾಪಿಸಬೇಕು. ಗ್ರಾಮೀಣ ಅಥವಾ ಬುಡಕಟ್ಟು ಪ್ರದೇಶದಲ್ಲಿ ಪ್ರತಿ ಬ್ಲಾಕ್, ತಾಲೂಕು, ತಹಸಿಲ್ ಮತ್ತು ನಗರ ಪ್ರದೇಶದಲ್ಲಿ ವಾರ್ಡ್ ಅಥವಾ ಪುರಸಭೆ, ದೂರುಗಳನ್ನು ಸ್ವೀಕರಿಸಲು ಮತ್ತು ಅದನ್ನು ಸಂಬಂಧಿಸಿದ ಎಲ್‌ಸಿಗೆ ರವಾನಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವ ಕಾರ್ಯವನ್ನು ಜಿಲ್ಲಾ ಅಧಿಕಾರಿಗೆ ವಹಿಸಲಾಗಿದೆ. ಎಲ್‌ಸಿ ವಿಚಾರಣೆ ನಡೆಸಿದ ನಂತರ, ಅದರ ವರದಿಯನ್ನು ಜಿಲ್ಲಾ ಅಧಿಕಾರಿ ಮತ್ತು ಉದ್ಯೋಗದಾತರಿಗೆ ಸಲ್ಲಿಸಬೇಕು, ಕ್ರಮಕ್ಕೆ ಶಿಫಾರಸು ಮಾಡಬೇಕು. ಪ್ರತಿ ಉದ್ಯೋಗದಾತರೂ ಈ ಕುರಿತು ವಾರ್ಷಿಕ ವರದಿಯನ್ನು ಜಿಲ್ಲಾ ಅಧಿಕಾರಿಗೆ ನೀಡಬೇಕು ಎಂದು ಕಾಯಿದೆಯಲ್ಲಿದೆ.

ಇದನ್ನೂ ಓದಿ: Pocso case: ʼʼಎರಡು ನಿಮಿಷದ ಸುಖಕ್ಕಾಗಿ…ʼʼ: ಹುಡುಗಿಯರಿಗೆ ಕಲ್ಕತ್ತಾ ಹೈಕೋರ್ಟ್‌ ಕಿವಿಮಾತು!

Exit mobile version