Site icon Vistara News

ಪ್ರಧಾನಿ ಮೋದಿ ಸಂದರ್ಶನ: ಜಿ20 ಶೃಂಗದಿಂದ ಸಕಾರಾತ್ಮಕ ಪರಿಣಾಮ, 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ

PM Narendra Modi

ನವದೆಹಲಿ: ಮುಂದಿನ ವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಭಾರತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ”ಭಾರತವು 20247ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ(India Developed Nation). ಭ್ರಷ್ಟಾಚಾರ (Corruption), ಜಾತೀಯತೆ (Casteism) ಮತ್ತು ಕೋಮುವಾದಕ್ಕೆ (Communalism) ದೇಶದಲ್ಲಿ ಜಾಗವಿಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಜಿ20 ಶೃಂಗಸಭೆಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿ, ”ಜಾಗತಿಕ ಕಾರ್ಯಕ್ರಮದ ಭಾರತದ ಅಧ್ಯಕ್ಷತೆಯಿಂದ ಹಲವಾರು ಪರಿಣಾಮಗಳು “ಅವರ ಹೃದಯಕ್ಕೆ ಹತ್ತಿರವಾಗಿವೆ” ಎಂದು ಹೇಳಿದರು. ”ಭಾರತದ ಜಿ20 ಅಧ್ಯಕ್ಷತೆಯಿಂದ ಸಾಕಾಷ್ಟು ಸಕಾರಾತ್ಮಕ ಪರಿಣಾಮಗಳಾಗಿವೆ. ಈ ಪೈಕಿ ಕೆಲವು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನದ ಆಯ್ದು ಭಾಗ….

ಜಿ20 ಭಾರತೀಯ ಅಧ್ಯಕ್ಷತೆಯ ಪರಿಣಾಮ

-ಒಂದು ಲಕ್ಷಕ್ಕೂ ಅಧಿಕ ವಿದೇಶ ಗಣ್ಯರು ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ನಮ್ಮ ಭಿನ್ನ ಜನಸಂಖ್ಯೆ ಮತ್ತು ವೈವಿಧ್ಯತೆಗೆ ಸಾಕ್ಷಿಯಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ಅಭಿವೃದ್ಧಿಯನ್ನು ಜನರನ್ನು ಸಶಕ್ತಗೊಳಿಸುತ್ತಿದೆ ಎಂಬುದನ್ನು ಕಣ್ಣಾರೆ ಕಂಡಿದ್ದಾರೆ.
-ಮಾನವ-ಕೇಂದ್ರಿತ ವಿಧಾನಕ್ಕೆ ಬದಲಾವಣೆಯು ಜಾಗತಿಕವಾಗಿ ಪ್ರಾರಂಭವಾಗಿದೆ ಮತ್ತು ನಾವು ವೇಗವರ್ಧಕದ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ.
-ಭಾರತದ ಜಿ20 ಅಧ್ಯಕ್ಷತೆಯು ತೃತೀಯ ಜಗತ್ತು ಎಂದು ಕರೆಯಲಾಗುವ ದೇಶಗಳಲ್ಲಿ ಆತ್ಮವಿಶ್ವಾಸದ ಬೀಜಗಳನ್ನು ಬಿತ್ತಿದೆ.

ಜಿ20 ಎದುರಿಸುತ್ತಿರುವ ಸವಾಲಗಳು ಮತ್ತು ಮುಂದಿನ ಜಿ20 ಅಧ್ಯಕ್ಷೀಯ ರಾಷ್ಟ್ರ ಬ್ರೆಜಿಲ್

-ಎರಡನೇ ಮಹಾಯುದ್ಧ ಬಳಿಕ ಹೊಸ ಜಗತ್ತಿನ ಅನುಕ್ರಮ ಕಂಡಂತೆ, ಕೋವಿಡ್ ನಂತರದಲ್ಲಿ ಹೊಸ ಜಗತ್ತಿನ ಸಮೀಕರಣವನ್ನು ನಾವು ಕಾಣುತ್ತಿದ್ದೇವೆ. ಪ್ರಭಾವ ಮತ್ತು ಪ್ರಭಾವದ ಮಾನದಂಡಗಳು ಬದಲಾಗುತ್ತಿವೆ ಮತ್ತು ಇದನ್ನು ಗುರುತಿಸಬೇಕಾಗಿದೆ.
-ಭಾರತದಲ್ಲಿ ದಾರಿ ತೋರಿದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮಾದರಿಯು ಲೋಕಕಲ್ಯಾಣಕ್ಕೆ ಮಾರ್ಗದರ್ಶಿ ಸೂತ್ರವೂ ಆಗಬಹುದು. ಜಿಡಿಪಿಯಯ ಗಾತ್ರವನ್ನು ಲೆಕ್ಕಿಸದೆ, ಪ್ರತಿಯೊಬ್ಬರ ಧ್ವನಿ ಪರಿಗಣನೆಯು ಮುಖ್ಯವಾಗಬೇಕು.
-ನಾನು ಯಾವುದೇ ದೇಶಕ್ಕೆ ಅವರ ಜಿ20 ಅಧ್ಯಕ್ಷರ ಅವಧಿಯಲ್ಲಿ ಏನು ಮಾಡಬೇಕೆಂದು ಸಲಹೆ ನೀಡುವುದು ಸರಿಯಲ್ಲ. ನನ್ನ ಸ್ನೇಹಿತ ಅಧ್ಯಕ್ಷ ಲೂಲಾ (ಬ್ರೆಜಿಲ್ ಅಧ್ಯಕ್ಷ) ಅವರ ಸಾಮರ್ಥ್ಯಗಳು ಮತ್ತು ದೂರದೃಷ್ಟಿಯನ್ನು ನಾನು ಗೌರವಿಸುತ್ತೇನೆ ಮತ್ತು ಅವರಿಗೆ ಮತ್ತು ಬ್ರೆಜಿಲ್ ಜನರಿಗೆ ಉತ್ತಮ ಯಶಸ್ಸನ್ನು ಬಯಸುತ್ತೇನೆ.

ಆಫ್ರಿಕಾ ಯೂನಿಯನ್ ಜಿ20 ಶಾಶ್ವತ ಸದಸ್ಯರಾಗುವ ಕುರಿತು…

-ನಮ್ಮ ಜಿ20ಪ್ರೆಸಿಡೆನ್ಸಿಯ ಥೀಮ್ – ‘ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’. ಇದು ಕೇವಲ ಘೋಷಣೆಯಾಗಿರದೆ ಸಮಗ್ರ ತತ್ತ್ವಜ್ಞಾನವಾಗಿದ್ದು, ಅದು ನಮ್ಮ ಸಾಂಸ್ಕೃತಿಕ ನೀತಿಯಿಂದ ಹೊರಹೊಮ್ಮಿದೆ.
-ಜಾಗತಿಕ ಮಟ್ಟದಲ್ಲಿಯೂ ನಮಗೆ ಮಾರ್ಗದರ್ಶನ ನೀಡುವ ವಿಧಾನ ಇದು. ತಮ್ಮ ಧ್ವನಿ ಕೇಳುತ್ತಿಲ್ಲ ಎಂದು ಭಾವಿಸುವವರ ಸೇರ್ಪಡೆಗಾಗಿ ನಾವು ಕೆಲಸ ಮಾಡುತ್ತೇವೆ.
-ಗಾತ್ರ, ಆರ್ಥಿಕತೆ ಅಥವಾ ಪ್ರದೇಶವನ್ನು ಲೆಕ್ಕಿಸದೆ ಪ್ರತಿಯೊಂದು ದೇಶದ ಧ್ವನಿಯನ್ನು ಮುಖ್ಯವಾಗಿ ಪರಿಗಣಿಸಬೇಕು.
-ಮಹಾತ್ಮ ಗಾಂಧಿ, ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಕ್ವಾಮೆ ಎನ್ಕ್ರುಮಾ ಅವರ ಮಾನವೀಯ ದೃಷ್ಟಿ ಮತ್ತು ಆದರ್ಶಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ.
-2015ರಲ್ಲಿ ಭಾರತ-ಆಫ್ರಿಕಾ ಫೋರಮ್ ಶೃಂಗಸಭೆ, ಭಾರತದಲ್ಲಿ ನಡೆಯುತ್ತಿರುವ ಆಫ್ರಿಕಾದ ಹೊರಗಿನ ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಮೊದಲ ಶೃಂಗಸಭೆ ಇತ್ಯಾದಿಗಳಂತವುಗಳ ಮೂಲಕ ಭಾರತ ಮತ್ತು ಆಫ್ರಿಕಾ ಸಂಬಂಧವನ್ನು ಹೆಚ್ಚು ಗಟ್ಟಿಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ದೇಶಾದ್ಯಂತ ಜಿ20 ಸಭೆಗಳು….

-ಕೆಲವು ದೇಶಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಒಲಿಂಪಿಕ್ಸ್‌ನಂತಹ ಉನ್ನತ ಮಟ್ಟದ ಜಾಗತಿಕ ಸಭೆಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡ ಅನೇಕ ನಿದರ್ಶನಗಳನ್ನು ನಾವು ಈ ಹಿಂದೆ ಗಮನಿಸಿದ್ದೇವೆ. ಈ ಬೃಹತ್ ಸಭೆಗಳು ಧನಾತ್ಮಕ ಮತ್ತು ಪರಿವರ್ತನೆಯ ಪ್ರಭಾವವನ್ನು ಹೊಂದಿವೆ.
-ದುರದೃಷ್ಟವಶಾತ್, ಹಿಂದಿನ ಸರ್ಕಾರಗಳ ಸಮಯದಲ್ಲಿ ದೆಹಲಿಯ ವಿಜ್ಞಾನ ಭವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರವೇ ಸಭೆ, ಸಮಾರಂಭಗಳನ್ನು ಆಯೋಜಿಸಲಾಗುತ್ತಿತ್ತು.
-ನಮ್ಮ ಜನರ ಸಾಮರ್ಥ್ಯಗಳಲ್ಲಿ ನನಗೆ ಅಪಾರ ನಂಬಿಕೆ ಇದೆ. ನಾನು ಸಾಂಸ್ಥಿಕ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ವೇದಿಕೆ ಮತ್ತು ಅವಕಾಶವನ್ನು ನೀಡಿದಾಗ ಸಾಮಾನ್ಯ ನಾಗರಿಕರು ಮಾಡುವ ಸಾಹಸಗಳನ್ನು ನೇರವಾಗಿ ನೋಡುವ ಅವಕಾಶವನ್ನು ನಾನು ಹೊಂದಿದ್ದೇನೆ.
-ನೀವು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ, ಈ ವರ್ಷಗಳಲ್ಲಿ ನಾವು ಪ್ರತಿಯೊಂದು ಪ್ರದೇಶದ ಜನರನ್ನು ನಂಬಿದ್ದೇವೆ. ಗೋವಾದಲ್ಲಿ 8ನೇ ಬ್ರಿಕ್ಸ್ ಶೃಂಗಸಭೆ, ಜೈಪುರದಲ್ಲಿ 2ನೇ FIPIC ಶೃಂಗಸಭೆ, ಹೈದರಾಬಾದ್‌ನಲ್ಲಿ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆ ಇತ್ಯಾದಿ ಸಭೆಗಳನ್ನು ನಡೆಸಿದ ಹಲವು ಉದಾಹರಣೆಗಳಿವೆ.
-ನಮ್ಮ ಜಿ20 ಪ್ರೆಸಿಡೆನ್ಸಿ ಅವಧಿ ಮುಗಿಯುವ ಹೊತ್ತಿಗೆ, ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 60 ನಗರಗಳಲ್ಲಿ 220 ಕ್ಕೂ ಹೆಚ್ಚು ಸಭೆಗಳು ನಡೆದಿವೆ.
-ನಾವು ಕೇವಲ ಎಲ್ಲ ರಾಜ್ಯಗಳಲ್ಲಿ ಸಭೆಗಳನ್ನು ಮಾತ್ರವೇ ಮಾಡುತ್ತಿಲ್ಲ. ಬದಲಿಗೆ, ಪ್ರತಿ ರಾಜ್ಯವು ಪ್ರತಿನಿಧಿಗಳ ಮನಸ್ಸಿನಲ್ಲಿ ತಮ್ಮ ವಿಶಿಷ್ಟ ಸಾಂಸ್ಕೃತಿಕ ಮುದ್ರೆಯನ್ನು ಬಿಡುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದು ಭಾರತದ ಅದ್ಭುತ ವೈವಿಧ್ಯತೆಯ ಕಲ್ಪನೆಯನ್ನು ಜಗತ್ತಿಗೆ ನೀಡುತ್ತಿದೆ.
-ಜಿ20ಗೆ ಸಂಬಂಧಿಸಿದ ಚಟುವಟಿಕೆಗಳ ವಿಕೇಂದ್ರೀಕರಣದ ಹಿಂದೆ ಆಳವಾದ ಯೋಜನೆಗಳಿವೆ, ಆಲೋಚನೆಗಳಿವೆ. ನಾವು ನಮ್ಮ ಜನರು, ನಮ್ಮ ಸಂಸ್ಥೆಗಳು ಮತ್ತು ನಮ್ಮ ನಗರಗಳಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಹೂಡಿಕೆ ಮಾಡುತ್ತಿದ್ದೇವೆ.

ಕಾಶ್ಮೀರ, ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಮತ್ತು ಪಾಕಿಸ್ತಾನ, ಚೀನಾದಿಂದ ಆಕ್ಷೇಪ….

-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರತವು ಜಿ20 ಸಭೆಗಳನ್ನು ಆಯೋಜಿಸಿತ್ತು. ಇದಕ್ಕೆ ಪಾಕಿಸ್ತಾನ ಮತ್ತು ಚೀನಾಗಳು ಆಕ್ಷೇಪಿದ್ದವು. ಈ ಕುರಿತು ಕೇಳಿದಾಗ ಮೋದಿ, ”ಒಂದು ವೇಳೆ ನಾವು ಆ ಸ್ಥಳಗಳಲ್ಲಿ ಸಭೆಗಳನ್ನು ನಡೆಸುವುದನ್ನು ತಪ್ಪಿಸಿದ್ದರೆ ಅಂತಹ ಪ್ರಶ್ನೆಯು ಮಾನ್ಯವಾಗಿರುತ್ತದೆ ಎಂದು ಹೇಳಿದರು.
-ನಮ್ಮದು ವಿಶಾಲ, ಸುಂದರ ಮತ್ತು ವೈವಿಧ್ಯಮಯ ರಾಷ್ಟ್ರವಾಗಿದೆ. ಜಿ20 ಶೃಂಗ ಆಯೋಜಿಸಿರುವಾಗ, ಅದರ ಸಭೆಗಳು ನಮ್ಮ ದೇಶದ ಪ್ರತಿಯೊಂದು ಭಾಗದಲ್ಲೂ ನಡೆಯುವುದು ಸಹಜವಲ್ಲವೇ?

ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ಭಾರತವು ನೆಚ್ಚಿನ ತಾಣ….

-ಜನರು ನಮಗೆ ನಿರ್ಣಾಯಕ ಆದೇಶವನ್ನು ನೀಡಿದ್ದಾರೆ. ನಮ್ಮದು ಇದು ಸ್ಥಿರ ಸರ್ಕಾರ, ಊಹಿಸಬಹುದಾದ ನೀತಿಗಳು ಮತ್ತು ಒಟ್ಟಾರೆ ದಿಕ್ಕಿನಲ್ಲಿ ಸ್ಪಷ್ಟತೆಗೆ ಕಾರಣವಾಗಿದೆ.
-ಈ ಸ್ಥಿರತೆಯೇ ಕಳೆದ ಒಂಬತ್ತು ವರ್ಷಗಳಲ್ಲಿ ಹಲವಾರು ಸುಧಾರಣೆಗಳನ್ನು ಕಾರಣವಾಯಿತು ಮತ್ತು ಬೆಳವಣಿಗೆಯು ನೈಸರ್ಗಿಕ ಉಪ-ಉತ್ಪನ್ನವಾಗಿದೆ.
-ದೀರ್ಘಕಾಲದವರೆಗೂ ಭಾರತವು 1 ಶತಕೋಟಿಗೂ ಹೆಚ್ಚು ಹಸಿದ ಹೊಟ್ಟೆಗಳ ರಾಷ್ಟ್ರವೆಂದು ಗ್ರಹಿಸಲ್ಪಟ್ಟಿದೆ. ಆದರೆ ಈಗ, ಭಾರತವನ್ನು 1 ಬಿಲಿಯನ್‌ಗಿಂತಲೂ ಹೆಚ್ಚು ಮಹತ್ವಾಕಾಂಕ್ಷೆಯ ಮನಸ್ಸುಗಳು, 2 ಬಿಲಿಯನ್‌ಗಿಂತಲೂ ಹೆಚ್ಚು ಕೌಶಲ್ಯಪೂರ್ಣ ಕೈಗಳು ಮತ್ತು ನೂರಾರು ಮಿಲಿಯನ್ ಯುವಜನರ ರಾಷ್ಟ್ರವಾಗಿ ನೋಡಲಾಗುತ್ತಿದೆ.

ಜಾಗತಿಕ ದಕ್ಷಿಣದ ದೇಶಗಳಲ್ಲಿ ಸಾಲದ ಬಿಕ್ಕಟ್ಟು ಮತ್ತು ಪುನರ್‌ರಚನೆಯ ಕುರಿತು

-ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಅಥವಾ ಆ ಪರಿಸ್ಥಿತಿಯನ್ನು ಎದುರಿಸಿರುವ ದೇಶಗಳು ಆರ್ಥಿಕ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿವೆ.
-ಸಾಲದ ಬಿಕ್ಕಟ್ಟಿನಿಂದಾಗಿ ಕೆಲವು ದೇಶಗಳು ಕಠಿಣ ಸಮಯವನ್ನು ಎದುರಿಸುತ್ತಿರುವುದನ್ನು ನೋಡಿದ ಇತರರು ಅದೇ ತಪ್ಪು ಹೆಜ್ಜೆಗಳನ್ನು ತಪ್ಪಿಸುವ ಜಾಗೃತರಾಗಿದ್ದಾರೆ.
-ನಮ್ಮ ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆಯೂ ಜಾಗೃತರಾಗಬೇಕೆಂದು ನಾನು ಒತ್ತಾಯಿಸಿದ್ದೇನೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಆರ್ಥಿಕವಾಗಿ ಬೇಜವಾಬ್ದಾರಿ ನೀತಿಗಳು ಮತ್ತು ಜನಪ್ರಿಯತೆಯು ಅಲ್ಪಾವಧಿಯಲ್ಲಿ ರಾಜಕೀಯ ಫಲಿತಾಂಶಗಳನ್ನು ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ದೊಡ್ಡ ಸಾಮಾಜಿಕ ಮತ್ತು ಆರ್ಥಿಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ನಾನು ಹೇಳಿದ್ದೇನೆ.
-ಆರ್ಥಿಕ ಬೇಜವಾಬ್ದಾರಿಯ ಸಂಸ್ಕೃತಿಯ ಪರಿಣಾಮಗಳನ್ನು ಹೆಚ್ಚು ಅನುಭವಿಸುವವರು ಬಡವರು ಮತ್ತು ಅತ್ಯಂತ ದುರ್ಬಲರು.

ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದ ಬಗ್ಗೆ….

-ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದ ಬಗ್ಗೆ ಬಂದರೆ, ಭಾರತವ ಜಾಗತಿಕವಾಗಿ ತನ್ನದೇ ಆದ ವಿಶ್ವಾಸಾರ್ಹತೆಯನ್ನು ಹೊಂದಿದೆ.
-ವಿಶ್ವದ ಅತಿ ದೊಡ್ಡ ಲಸಿಕೆ ಡ್ರೈವ್ ಕೂಡ ಹೆಚ್ಚು ಒಳಗೊಂಡಿತ್ತು. ನಾವು 200 ಕೋಟಿ ಲಸಿಕೆ ಉಚಿತವಾಗಿ ನೀಡಿದ್ದೇವೆ. ಇದು ಟೆಕ್ ಪ್ಲಾಟ್‌ಫಾರ್ಮ್ COWIN ಆಧರಿಸಿದೆ. ಇದಲ್ಲದೆ, ಈ ಪ್ಲಾಟ್‌ಫಾರ್ಮ್ ಅನ್ನು ಮುಕ್ತ ಮೂಲವನ್ನಾಗಿ ಮಾಡಲಾಗಿದೆ ಇದರಿಂದ ಇತರ ದೇಶಗಳು ಸಹ ಅಳವಡಿಸಿಕೊಳ್ಳಬಹುದು ಮತ್ತು ಪ್ರಯೋಜನ ಪಡೆಯಬಹುದು.
-ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕವಾಗಿ ಅನೇಕ ಜನರಿಗೆ ಆಶ್ಚರ್ಯಕರ ವಸ್ತುವಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕ ಸೇವೆಯ ವಿತರಣೆಗಾಗಿ ಇದನ್ನು ಬಳಸಲಾಗಿದೆ.
-ONDC ಎಂಬುದು ನಾಗರಿಕರು ಮತ್ತು ಪರಿಣತರಿಂದ ಸ್ವಾಗತಿಸಲ್ಪಡುವ ಒಂದು ಉಪಕ್ರಮವಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಜಾಸತ್ತಾತ್ಮಕಗೊಳಿಸುವ ಮತ್ತು ನ್ಯಾಯಸಮ್ಮತ ಸ್ಪರ್ಧಾಕಣ ಸೃಷ್ಟಿಸುವ ಪ್ರಮುಖ ವಿಕಾಸದ ಹಂತವಾಗಿದೆ.
-ತಂತ್ರಜ್ಞಾನವು ಅಸಮಾನತೆ ಮತ್ತು ಬಹಿಷ್ಕಾರದ ಏಜೆಂಟ್ ಎಂದು ಭಾವಿಸಲಾದ ಸಮಯದಲ್ಲಿ, ನಾವು ಅದನ್ನು ಸಮಾನತೆ ಮತ್ತು ಒಳಗೊಳ್ಳುವಿಕೆಯ ಏಜೆಂಟ್ ಆಗಿ ಮಾಡುತ್ತಿದ್ದೇವೆ.

ಜೈವಿಕ ಇಂಧನ ಮೈತ್ರಿ ಮತ್ತು ಇಂಧನ ಭದ್ರತೆಯಲ್ಲಿ ಭಾರತದಂತಹ ಆಮದು ಅವಲಂಬಿತ ರಾಷ್ಟ್ರಗಳಿಗೆ ಇದು ಹೇಗೆ ಸಹಾಯ ಮಾಡುತ್ತದೆ?

-ಕೆಲವೇ ವರ್ಷಗಳಲ್ಲಿ ಸೌರಶಕ್ತಿ ಸಾಮರ್ಥ್ಯವನ್ನು 20 ಪಟ್ಟು ಹೆಚ್ಚಿಸುವಂತಹ ಹವಾಮಾನ ಕೇಂದ್ರಿತ ಉಪಕ್ರಮಗಳಲ್ಲಿ ನಾವು ಭಾರತದೊಳಗೆ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.
-ನಿಗದಿತ ದಿನಾಂಕಕ್ಕಿಂತ 9 ವರ್ಷಗಳ ಮುಂಚಿತವಾಗಿ ನಮ್ಮ ಹವಾಮಾನ ಗುರಿಗಳನ್ನು ಸಾಧಿಸಿದ ಜಿ20 ದೇಶಗಳಲ್ಲಿ ನಾವು ಬಹುಶಃ ಮೊದಲಿಗರಾಗಿದ್ದೇವೆ.
-ನಾವು ಅನೇಕ ಜಾಗತಿಕ ಹವಾಮಾನ ಉಪಕ್ರಮಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೇವೆ. ಉದಾಹರಣೆಗೆ ಇಂಟರ್‌ನ್ಯಾಷನಲ್ ಸೋಲಾರ್ ಅಲೈಯನ್ಸ್ ಮತ್ತು ಕೋಯಲೆಷನ್ ಫಾರ್ ಡಿಸಾಸ್ಟರ್ ರಿಸೈಲಿಯೆಂಟ್ ಇನ್ಫ್ರಾಸ್ಟ್ರಕ್ಚರ್, ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್, ಮಿಷನ್ ಲೈಫ್ ಇನಿಶಿಯೇಟಿವ್ ಇತ್ಯಾದಿ ಉಪಕ್ರಮಗಳನ್ನು ಹೆಸರಿಸಬಹುದಾಗಿದೆ.
-ಹಾಗಾಗಿ, ಜೈವಿಕ ಇಂಧನ ಮೈತ್ರಿಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ವೃತ್ತಾಕಾರದ ಆರ್ಥಿಕತೆಯ ದೃಷ್ಟಿಕೋನದಿಂದ ಜೈವಿಕ ಇಂಧನಗಳು ಸಹ ಮುಖ್ಯವಾಗಿದೆ. ಅಂತಹ ಪರ್ಯಾಯಗಳು ಇಂಧನ ಭದ್ರತೆಯನ್ನು ಹೆಚ್ಚಿಸಬಹುದು, ದೇಶೀಯ ಉದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಬಹುದು ಮತ್ತು ಹಸಿರು ಉದ್ಯೋಗಗಳನ್ನು ಸೃಷ್ಟಿಸಬಹುದು.

ಉಕ್ರೇನ್ ಯುದ್ಧದ ನಂತರದ ಯುಗದಲ್ಲಿ ಹವಾಮಾನ ಬದಲಾವಣೆಯ ಗುರಿಗಳು ಹೇಗೆ ಪ್ರಗತಿ ಸಾಧಿಸುತ್ತವೆ….

-ಭಾರತದ ಜನಸಂಖ್ಯೆಯು ವಿಶ್ವದ ಜನಸಂಖ್ಯೆಯ 17% ರಷ್ಟಿದ್ದರೂ, ಸಂಚಿತ ಹೊರಸೂಸುವಿಕೆಯಲ್ಲಿ ಭಾರತದ ಐತಿಹಾಸಿಕ ಪಾಲು 5% ಕ್ಕಿಂತ ಕಡಿಮೆಯಾಗಿದೆ. ಆದರೂ, ನಮ್ಮ ಹವಾಮಾನ ಗುರಿಗಳನ್ನು ಪೂರೈಸುವಲ್ಲಿ ನೆರವಾಗುವ ಯಾವುದೇ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ.
-ನಿರ್ಬಂಧಿತದಿಂದ ರಚನಾತ್ಮಕ ಕಾರ್ಯವಿಧಾನಕ್ಕೆ ವಿಧಾನವನ್ನು ಬದಲಾಯಿಸಲು ನಾವು ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.
-ಇದನ್ನು ಮಾಡಬೇಡಿ ಅಥವಾ ಅದನ್ನು ಮಾಡಬೇಡಿ ಎಂಬ ವಿಧಾನದ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸುವ ಬದಲು, ಜನರು ಮತ್ತು ರಾಷ್ಟ್ರಗಳಿಗೆ ಅವರು ಏನು ಮಾಡಬಹುದು ಎಂಬುದರ ಕುರಿತು ಅರಿವು ಮೂಡಿಸುವ ಮತ್ತು ಹಣಕಾಸು, ತಂತ್ರಜ್ಞಾನ ಮತ್ತು ಇತರ ಸಂಪನ್ಮೂಲಗಳ ವಿಷಯದಲ್ಲಿ ಅವರಿಗೆ ಸಹಾಯ ಮಾಡುವ ಮನೋಭಾವವನ್ನು ತರಲು ನಾವು ಬಯಸುತ್ತೇವೆ.

ಸೈಬರ್ ಅಪರಾಧಗಳ ಬಗ್ಗೆ

-ಜಾಗತಿಕ ಸಹಕಾರವು ಅಪೇಕ್ಷಣೀಯವಾಗಿರುವ ಹಲವು ವಲಯಗಳು ಇರಬಹುದು. ಆದರೆ ಸೈಬರ್ ಭದ್ರತೆಯ ವಲಯದಲ್ಲಿ ಜಾಗತಿಕ ಸಹಕಾರವು ಅಪೇಕ್ಷಣೀಯವಾಗಿದೆ. ಅಲ್ಲದೇ ಅನಿವಾರ್ಯವೂ ಆಗಿದೆ. ಏಕೆಂದರೆ ಬೆದರಿಕೆ ಆಯಾಮಗಳು ನಾನಾ ರೀತಿಯಲ್ಲಿ ಹರಡಿಕೊಂಡಿವೆ.

ಬಹುಪಕ್ಷೀಯ ಸಂಸ್ಥೆಗಳು ಮತ್ತು ಭಾರತದ ಪಾತ್ರದ ಕುರಿತು…

-ಸಂಸ್ಥೆಗಳು ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ಪ್ರಸ್ತುತತೆಯನ್ನು ಉಳಿಸಿಕೊಳ್ಳಬಹುದು. 20ನೇ ಶತಮಾನದ ಮಧ್ಯಭಾಗದ ವಿಧಾನವು 21ನೇ ಶತಮಾನದಲ್ಲಿ ಈ ಹಿಂದಿನ ರೀತಿಯ್ಲಲೇ ಜಗತ್ತಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ.
-ಭಾರತವು ವೈವಿಧ್ಯಮಯ ರಾಷ್ಟ್ರವಾಗಿ, ಪ್ರಜಾಪ್ರಭುತ್ವದ ತಾಯಿ, ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯ ನೆಲೆಯಾಗಿದೆ ಮತ್ತು ವಿಶ್ವದ ಬೆಳವಣಿಗೆಯ ಎಂಜಿನ್ ಕೂಡಾ ಆಗಿದೆ. ರತವು ಪ್ರಪಂಚದ ಭವಿಷ್ಯವನ್ನು ರೂಪಿಸಲು ಸಾಕಷ್ಟು ಕೊಡುಗೆಯನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: G20 Summit 2023: ದೆಹಲಿಯಲ್ಲಿ ಕಾರಂಜಿಗಾಗಿ ಶಿವಲಿಂಗ ಬಳಕೆ; ಬಿಜೆಪಿ-ಆಪ್‌ ವಾಕ್ಸಮರ ಶುರು

2047ರಲ್ಲಿ ಭಾರತ…….

-ಈ ಯುಗದಲ್ಲಿ ಜೀವಿಸುತ್ತಿರುವ ಭಾರತೀಯರಿಗೆ ಮುಂದಿನ 1,000 ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವ ಬೆಳವಣಿಗೆಗೆ ಅಡಿಪಾಯ ಹಾಕಲು ಉತ್ತಮ ಅವಕಾಶವಿದೆ!
-2047ರ ವೇಳೆಗೆ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರುತ್ತದೆ ಎಂದು ನನಗೆ ಖಾತ್ರಿಯಿದೆ. ನಮ್ಮ ಆರ್ಥಿಕತೆಯು ಇನ್ನಷ್ಟು ಸಮಗ್ರ ಮತ್ತು ನವೀನವಾಗಿರುತ್ತದೆ. ನಮ್ಮ ಬಡವರು ಬಡತನದ ವಿರುದ್ಧದ ಹೋರಾಟವನ್ನು ಸಮಗ್ರವಾಗಿ ಗೆಲ್ಲುತ್ತಾರೆ. ನಮ್ಮ ರಾಷ್ಟ್ರೀಯ ಜೀವನದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ಯಾವುದೇ ಸ್ಥಾನವಿಲ್ಲ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version