ನವದೆಹಲಿ: ಜಿ20 ಶೃಂಗ ಸಭೆಯ (G20 Summit 2023) ಮೊದಲ ದಿನ ಬಹುತೇಕ ಯಶಸ್ವಿಯಾಗಿದ್ದು, ಶನಿವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Rashtrapati draupadi murmu) ಅವರು ವಿಶ್ವ ನಾಯಕರು ಹಾಗೂ ದೇಶ-ವಿದೇಶಗಳ 170ಕ್ಕೂ ಅಧಿಕ ಗಣ್ಯರಿಗೆ ಔತಣಕೂಟ (Dinner Party) ನೀಡಿದರು. ಜಿ20 ಶೃಂಗ ಸಭೆ ಆಯೋಜನೆಯಾಗಿರುವ ದಿಲ್ಲಿಯ ಭಾರತ್ ಮಂಟಪಮ್‌ನಲ್ಲಿ (Bharat Mantapam) ಈ ಔತಣಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕರನ್ನು ಸ್ವಾಗತಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪರಿಚಯ ಮಾಡಿಕೊಟ್ಟರು. ಬಳಿಕ ಔತಣಕೂಟ ನಡೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿದೇಶಿ ಗಣ್ಯರನ್ನು ಸ್ವಾಗತಿಸಿದ್ದು, ವಿಶೇಷವಾಗಿತ್ತು. ಬೆಳಿಗ್ಗೆ ವಿವಿಧ ರಾಷ್ಟ್ರದ ಅಧ್ಯಕ್ಷರು, ಪ್ರಧಾನಿಗಳಿಗೆ ಪಿಎಂ ನರೇಂದ್ರ ಮೋದಿ ಅವರು ಸ್ವಾಗತ ಕೋರಿಸಿದ್ದರು. ಇದೀಗ ರಾಷ್ಟ್ರಪತಿಗಳ ಜೊತೆಯೂ ಸಹ ನಿಂತು ಬರುವ ಅತಿಥಿಗಳಿಗೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಸೀರೆ ಉಟ್ಟು ಬಂದ ಜಪಾನ್ ಪ್ರಧಾನಿ ಪತ್ನಿ
ರಾಷ್ಟ್ರಪತಿಗಳ ಆಹ್ವಾನದ ಔತಣಕೂಟಕ್ಕೆ ಭಾರತೀಯ ಸಂಸ್ಕೃತಿಯ ಸೀರೆ ಧರಿಸಿ ಬಂದ ಜಪಾನ್ ಪ್ರಧಾನಿಯ ಪತ್ನಿ ಯೋಕೋ ಕಿಷಿದಾ ಅವರು ಎಲ್ಲರ ಗಮನ ಸೆಳೆದರು. ಮಾರಿಷಿಸ್ ಪ್ರಧಾನ ಮಂತ್ರಿ ಪತ್ನಿ ಕೋಬಿತಾ ಜೂಗ್ನತ್ ಸಹ ಸೀರೆ ಧರಿಸಿ ಔತಣಕೂಟಕ್ಕೆ ಹಾಜರಾಗಿದ್ದಾರೆ.
ರಾಷ್ಟ್ರಪತಿ ಅವರಿಂದ ವಿಶ್ವ ನಾಯಕರಿಗೆ ಔತಣಕೂಟ
ದೇಶಿ ಮೆನು
ಔತಣಕೂಟದಲ್ಲಿ ಭಾರತೀಯ ಖಾದ್ಯಗಳನ್ನು ಪರಿಚಯಿಸಲಾಗಿತ್ತು. ವಿವಿಧ ಭಾಗಗಳ ಪ್ರಸಿದ್ಧ ಆಹಾರಗಳನ್ನು ಈ ಔತಣಕೂಟದಲ್ಲಿತ್ತು ಎಂದು ತಿಳಿದು ಬಂದಿದೆ. ದೇಶಿ ವಿಶೇಷ ಆಹಾರ ಖಾದ್ಯಗಳು ಗಮನ ಸೆಳೆದವು.
ಈ ಸುದ್ದಿಯನ್ನೂ ಓದಿ: G20 Summit 2023: ದಿಲ್ಲಿ ಜಿ20 ಶೃಂಗ ಸಭೆ ಸಕ್ಸೆಸ್! ಮಾನವ ಕೇಂದ್ರೀತ ನೀತಿಗೆ ವಿಶ್ವನಾಯಕರ ಬಹುಪರಾಕ್!
ಹಲವು ಮುಖ್ಯಮಂತ್ರಿಗಳು ಗೈರು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಈ ಔತಣಕೂಟಕ್ಕೆ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಕೆಲವು ಮುಖ್ಯಮಂತ್ರಿಗಳು ಹಾಗೂ ಪ್ರತಿಪಕ್ಷಗಳ 12 ಮುಖ್ಯಮಂತ್ರಿಗಳು ಔತಣಕೂಟಕ್ಕೆ ಹಾಜರಾಗಿಲ್ಲ. ಈ ಮಧ್ಯೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದಿರುವುದು, ವಿವಾದಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಹಾಗೂ ಎಚ್ ಡಿ ದೇವೇಗೌಡ ಅವರಿಗೆ ಆಹ್ವಾನ ನೀಡಲಾಗಿತ್ತಾದರೂ, ಅವರು ಅನಾರೋಗ್ಯದ ಕಾರಣದಿಂದಾಗಿ ಪಾಲ್ಗೊಂಡಿಲ್ಲ.