Site icon Vistara News

Oil Price | ತೈಲ ಬೆಲೆ ನಮ್ಮ ಬೆನ್ನನ್ನೇ ಮುರಿಯುತ್ತಿದೆ, ಅಮೆರಿಕದಲ್ಲಿ ಜೈಶಂಕರ್‌ ಹೀಗೆ ಹೇಳಿದ್ದೇಕೆ?

S Jaishankar

Minister Jaishankar asks Canada to provide proof substantiating its Nijjar accusations

ವಾಷಿಂಗ್ಟನ್‌: ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನ ದೂಷಿಸುತ್ತಿದ್ದಾರೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವೇ ತೈಲ ಬೆಲೆ ಏರಿಕೆಯು (Oil Price) ಹೇಗೆ ದೇಶವನ್ನು ಬಾಧಿಸುತ್ತಿದೆ ಎಂಬುದನ್ನು ಉಲ್ಲೇಖಿಸಿದೆ.

‘ನಮ್ಮದು ೨ ಸಾವಿರ ಡಾಲರ್‌ ತಲಾದಾಯ ಇರುವ ಆರ್ಥಿಕತೆ. ನಮಗೆ ತೈಲ ಬೆಲೆಯು ಮುಖ್ಯವಾಗಿದೆ. ಸದ್ಯ ತೈಲ ಬೆಲೆ ಏರಿಕೆಯಾಗಿರುವುದು ನಮ್ಮ ಬೆನ್ನನ್ನೇ ಮುರಿಯುವಂತಿದೆ. ಹಾಗಾಗಿ, ತೈಲ ಬೆಲೆಯು ನಮ್ಮ ಕಾಳಜಿಯಾಗಿದೆ” ಎಂದು ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಆ ಮೂಲಕ ಭಾರತವೇಕೆ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಂಡಿತು ಎಂಬುದನ್ನು ಮನವರಿಕೆ ಮಾಡಿದ್ದಾರೆ.

“ನಾವು ಮೂಲಭೂತವಾದ, ತೀವ್ರವಾದವನ್ನು ಮೆಟ್ಟಿ ನಿಲ್ಲಲೇಬೇಕಾಗಿದೆ. ಇಲ್ಲದಿದ್ದರೆ, ಇವು ಜಾಗತಿಕವಾಗಿ ಆತಂಕ ತಂದೊಡ್ಡುತ್ತವೆ. ಆರ್ಥಿಕತೆಯನ್ನು ಬುಡಮೇಲು ಮಾಡುತ್ತವೆ. ಇದೇ ದಿಸೆಯಲ್ಲಿ ಭಾರತ ಹಾಗೂ ಅಮೆರಿಕ ಕಾರ್ಯನಿರ್ವಹಿಸುತ್ತಿವೆ” ಎಂದೂ ಹೇಳಿದರು.

ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಕಾರಣ ರಷ್ಯಾ ವಿರುದ್ಧ ಜಗತ್ತಿನ ರಾಷ್ಟ್ರಗಳು ನಿರ್ಬಂಧ ಹೇರಿದರೂ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಂಡಿತ್ತು. ಇದಕ್ಕೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು. ಹಾಗಾಗಿ, ತೈಲ ಬೆಲೆಯ ಪ್ರಾಮುಖ್ಯತೆ ಕುರಿತು ಜೈಶಂಕರ್‌ ಅಮೆರಿಕಕ್ಕೆ ಮನವರಿಕೆ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ, “ಯುದ್ಧಕ್ಕೆ ಇದು ಕಾಲವಲ್ಲ” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ನರೇಂದ್ರ ಮೋದಿ ಮನವರಿಕೆ ಮಾಡಿದ್ದರು.

ಇದನ್ನೂ ಓದಿ | RBI repo rate hike| ಬೆಲೆ ಏರಿಕೆಯನ್ನು ಇಳಿಸಲು ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗಿಸಿದ ಆರ್‌ಬಿಐ

Exit mobile version