ನವ ದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯನ್ನು ಸೈನಿಕರು ಜತೆ ಆಚರಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ಕಾರ್ಗಿಲ್(PM in Kargil)ಗೆ ತೆರಳಿ, ಯೋಧರನ್ನು ಉದ್ದೇಶಿಸಿ, ಭಯೋತ್ಪಾದೆಯನ್ನು ಕೊನೆಗಾಣಿಸುವುದೇ ದೀಪಾವಳಿ. ಆ ಕೆಲಸವನ್ನು ಕಾರ್ಗಿಲ್ ಸಾಧ್ಯವಾಗಿಸಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಅವರು 2014ರಿಂದಲೂ ದೀಪಾವಳಿಯನ್ನು ಯೋಧರ ಜತೆ ಆಚರಿಸುತ್ತಿದ್ದಾರೆ.
ಕಾರ್ಗಿಲ್‌ನಲ್ಲಿ ಪಡೆಗಳು ಭಯೋತ್ಪಾದನೆಯನ್ನು ಹೊಸಕಿ ಹಾಕಿವೆ. ಇದಕ್ಕೆ ನಾನು ಸಾಕ್ಷಿಯಾಗಿದ್ದು ನನ್ನ ಸುದೈವ. ನನ್ನ ಹಳೆಯ ಫೋಟೋಗಳನ್ನು ಇಲ್ಲಿ ತೋರಿಸಲಾಯಿತು. ಇದಕ್ಕೆ ನಾನ ಕೃತಜ್ಞನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 1999ರ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಭದ್ರತಾ ಪಡೆಗಳು ನಮ್ಮ ಗಡಿಯನ್ನು ರಕ್ಷಿಸುತ್ತಿವೆ. ಇದರಿಂದಾಗಿಯೇ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗಿದೆ. ಭಾರತೀಯ ಭದ್ರತಾ ಪಡೆಗಳ ಸ್ಥೈರ್ಯಕ್ಕೆ ನನ್ನ ಸಲಾಂ. ನಿಮ್ಮ ತ್ಯಾಗ ಬಲಿದಾನವು ನಮ್ಮ ದೇಶವು ಹೆಮ್ಮೆ ಪಡುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ಕಳೆದ ಎಂಟು ವರ್ಷಗಳಲ್ಲಿ 5 ಸ್ಥಾನಗಳನ್ನು ಜಿಗಿದು ಭಾರತವು ಈಗ ಜಗತ್ತಿನ ಟಾಪ್ 5 ಬಲಾಢ್ಯ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ವಿಷಯವನ್ನು ಕೇಳಿ ತಾವು ಸಂತಸಪಡುತ್ತೀರಿ ಎಂಬುದು ನನಗೆ ಗೊತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಭಾರತವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರನ್ನು ದುಡಿಯುತ್ತಿದ್ದಾನೆ. ಪ್ರತಿ ಹಳ್ಳಿಗಳಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ. ದೇಶದಲ್ಲಿ 80 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿವೆ. ಇಸ್ರೋ ವಾಣಿಜ್ಯಿಕ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ. ಇವೆಲ್ಲವೂ ನಮ್ಮ ಗಡಿಗಳಲ್ಲಿ ಸಂತಸ ಕಾಣ ಲು ಸಾಧ್ಯವಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಭಾರತವು ಈಗ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಎಲ್ಲ ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಡುತ್ತಿದೆ. ಜಾಗತಿಕವಾಗಿ ಭಾರತದ ಗೌರವವು ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ದೇಶದ ಒಳಗೆ ಮತ್ತು ಹೊರಗೆ ವಿರೋಧಿಗಳನ್ನು ಯಶಸ್ವಿಯಾಗಿ ಹಣಿಯಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಸಂಪ್ರದಾಯ ಎಂಬ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಅವರು ಸಿಯಾಚಿನ್‌ಗೆ ತೆರಳಿದ್ದರು. ಆ ಬಳಿಕ 2015ರಲ್ಲಿ ಪಂಜಾಬ್‌ಗೆ ಭೇಟಿ ನೀಡಿ, 1965ರ ಯುದ್ಧಧ 50 ವರ್ಷಗಳ ಆಚರಣೆಯಲ್ಲಿ ಪಾಲ್ಗೊಂಡಿದ್ದರು. 2016ರಲ್ಲಿ ಚೀನಾ ಗಡಿಗೆ ತೆರಳಿ ದೀಪಾವಳಿ ಆಚರಿಸಿಕೊಂಡರು. 2017ರಲ್ಲಿ ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ಯೋಧರ ಜತೆ ಪಾಲ್ಗೊಂಡಿದ್ದರು. ಆ ಬಳಿಕ 2018ರಲ್ಲಿ ಉತ್ತರಾಖಂಡದ ಹರ್ಸಿಲ್, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ, ಕಳೆದ ವರ್ಷ ನೌಶೇರಾದಲ್ಲಿ ದೀಪಾವಳಿ ಆಚರಿಸಿಕೊಂಡಿದ್ದರು.
ಇದನ್ನೂ ಓದಿ | Modi In Ayodhya | ಅಯೋಧ್ಯೆ ದೀಪಗಳಿಂದ ದಿವ್ಯ, ಭಾವನೆಗಳಿಂದ ಭವ್ಯ, ರಾಮನಿಗೆ ನಾನು ಧನ್ಯ ಎಂದ ಮೋದಿ