ನವದೆಹಲಿ: ಬೀಜ ಗಣಿತ, ವರ್ಗಮೂಲ, ಸಮಯದ ಕಲ್ಪನೆ, ವಾಸ್ತು ಶಿಲ್ಪ, ಬ್ರಹ್ಮಾಂಡ ಸೃಷ್ಟಿ ಕಲ್ಪನೆ, ಲೋಹ ಶಾಸ್ತ್ರ, ವಿಮಾನ ಕಲ್ಪನೆಗಳು ಮೊದಲಿಗೆ ವೇದಗಳಲ್ಲಿದ್ದವು(Veda). ಅರಬ್ ದೇಶಗಳ ಮೂಲಕ ಯುರೋಪ್ ದೇಶಗಳಿಗೆ ರವಾನೆಯಾದ ಈ ವಿಜ್ಞಾನಗಳು (Science) ಮುಂದೆ, ಪಾಶ್ಚಿಮಾತ್ಯ ದೇಶಗಳ ವಿಜ್ಞಾನಿಗಳ ಸಂಶೋಧನೆಗಳ ರೂಪದಲ್ಲಿ ಜಗತ್ತಿಗೆ ಅನಾವರಣಗೊಂಡವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಚೇರ್ಮನ್ ಎಸ್ ಸೋಮನಾಥ್ (ISRO Chairman S Somanath) ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನದ ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೇದಿಕ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಇಸ್ರೋ ಚೇರ್ಮನ್ ಎಸ್ ಸೋಮನಾಥ ಅವರು, ”ಸಮಸ್ಯೆ ಏನಾಗಿತ್ತು ಎಂದರೆ, ಆ ಕಾಲದ ಭಾರತೀಯ ವಿಜ್ಞಾನಿಗಳು ಬಳಸುತ್ತಿದ್ದ ಭಾಷೆಯಾದ ಸಂಸ್ಕೃತಕ್ಕೆ ಲಿಪಿ ಇರಲಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಜ್ಞಾನವನ್ನು ಕೇಳುತ್ತಿದ್ದರು ಮತ್ತು ಹೃದಯದಿಂದ ಕಲಿಯುತ್ತಿದ್ದರು. ಹೀಗೆ ಸಂಸ್ಕೃತ ಉಳಿಯಿತು. ಬಳಿಕ ಜನರು ಸಂಸ್ಕೃತಕ್ಕೆ ದೇವನಾಗರಿ ಲಿಪಿಯನ್ನು ಬಳಸಲು ಆರಂಭಿಸಿದರು ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತ ವ್ಯಾಕರಣವನ್ನು ಪಾಣಿನಿ ಮಹರ್ಷಿ ಅವರು ಬರೆದಿದ್ದಾರೆಂದು ನಂಬಲಾಗಿದೆ. ಇದರಿಂದಾಗಿ ಭಾಷೆಯ ವಾಕ್ಯ ರಚನೆಯು ವೈಜ್ಞಾನಿಕ ಆಲೋಚನೆಗಳು ಮತ್ತು ಪ್ರಕ್ರಿಯೆಗಳನ್ನು ತಿಳಿಸಲು ಸೂಕ್ತವಾಗಿದೆ. ಎಂಜಿನಿಯರ್ ಮತ್ತು ವಿಜ್ಞಾನಿಗಳು ಸಂಸ್ಕೃತವನ್ನು ಇಷ್ಟಪಡುತ್ತಾರೆ. ಕಂಪ್ಯೂಟರ್ ಭಾಷೆಗಳಿಗೆ ಅದು ಸೂಕ್ತವಾಗುತ್ತದೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಕಲಿಯುವವರು ಅದನ್ನು ಕಲಿಯುತ್ತಾರೆ. ಕಂಪ್ಯೂಟೇಷನ್‌ಗೆ ಸಂಸ್ಕೃತವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ ಅವರು ಹೇಳಿದರು.
ವಿಜ್ಞಾನದ ಆಚೆಗೂ ಸಂಸ್ಕೃತದಿಂದ ಸಾಕಷ್ಟು ಲಾಭಗಳಿವೆ. ಸಂಸ್ಕೃತ ಭಾಷೆಯಲ್ಲಿ ಬರೆಯಲಾದ ಭಾರತೀಯ ಸಾಹಿತ್ಯವೇ ಮೂಲವಾಗಿದ್ದು ಮತ್ತು ಅತ್ಯಂತ ಶ್ರೀಮಂತವಾಗಿದೆ. ಅದು ತಾತ್ವಿಕ ರೂಪದಲ್ಲಿದೆ. ಇನ್ನೂ ಮಹತ್ವ ಯಾಕೆಂದರೆ ಅದು ವೈಜ್ಞಾನಿಕ ರೂಪದಲ್ಲೂ ಇದೆ. ಸಂಸ್ಕೃತದಲ್ಲಿ ಸಂಸ್ಕೃತಿ, ಅಧ್ಯಾತ್ಮ ಮತ್ತು ವೈಜ್ಞಾನಿಕ ಅಧ್ಯಯನಗಳು ಪ್ರತ್ಯೇಕಗೊಂಡಿಲ್ಲ ಎಂದು ಅವರು ಇಸ್ರೋ ಚೇರ್ಮನ್ ಎಸ್ ಸೋಮನಾಥ ಅವರು ಹೇಳಿದರು.
ಖಗೋಳಶಾಸ್ತ್ರ, ಔಷಧ, ವಿಜ್ಞಾನ, ಭೌತಶಾಸ್ತ್ರ, ರಾಸಾಯನಿಕ ವಿಜ್ಞಾನ ಮತ್ತು ವೈಮಾನಿಕ ವಿಜ್ಞಾನಗಳ ಸಂಶೋಧನೆಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ, ಅವರು ಸಂಪೂರ್ಣವಾಗಿ ಹೊರಗೆ ಬರಲಿಲ್ಲ ಮತ್ತು ಸಂಶೋಧನೆಗಳಿಗೆ ಒಳಪಡಲಿಲ್ಲ ಎಂದ ಇಸ್ರೋ ಚೇರ್ಮನ್ ಎಸ್ ಸೋಮನಾಥ ಅವರು, ಇದಕ್ಕಾಗಿ 8 ನೇ ಶತಮಾನದ ಡೇಟಾ ಎಂದು ನಂಬಲಾದ ಖಗೋಳಶಾಸ್ತ್ರದ ಪುಸ್ತಕವಾದ ಸೂರ್ಯ ಸಿದ್ಧಾಂತದ ಉದಾಹರಣೆಯನ್ನು ನೀಡಿದರು.
ಇದನ್ನೂ ಓದಿ: ISRO: ಇಸ್ರೋದಿಂದ ರಿಯೂಸೆಬಲ್ ಲಾಂಚ್ ವೆಹಿಕಲ್‌ನ ಅಟಾನಮಸ್ ಲ್ಯಾಂಡಿಂಗ್ ಪರೀಕ್ಷೆ ಸಕ್ಸೆಸ್!
ರಾಕೆಟ್ ವಿಜ್ಞಾನಿಯಾಗಿದ್ದ ನಾನು ಸೌರವ್ಯೂಹ, ಸಮಯದ ಪ್ರಮಾಣ ಮತ್ತು ಭೂಮಿಯ ಗಾತ್ರ ಮತ್ತು ಸುತ್ತಳತೆಯ ಬಗ್ಗೆ ಮಾತನಾಡುವ ಸಂಸ್ಕೃತದ ಈ ಸೂರ್ಯ ಸಿದ್ಧಾಂತ ಪುಸ್ತಕದಿಂದ ಆಕರ್ಷಿತನಾಗಿದ್ದೆ ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ ಅವರು ಹೇಳಿದರು.
ವಿಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.