Site icon Vistara News

Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

radioactive material

ಉತ್ತರಾಖಂಡ: ಅನುಮಾನಾಸ್ಪದವಾಗಿ ಅಪಾಯಕಾರಿ ರಾಸಾಯನಿಕ ವಸ್ತು ರೇಡಿಯೋ ಆಕ್ಟೀವ್‌(Radioactive Material) ತುಂಬಿದ್ದ ಕೆಲವು ಪೆಟ್ಟಿಗೆಗಳು ಉತ್ತರಾಖಂಡ(Uttarakhand)ದಲ್ಲಿ ಪತ್ತೆಯಾಗಿದ್ದು, ಐವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಭಾಭಾ ಪರಮಾಣು ಸಂಶೋಧನಾ ಕೇಂದ್ರದ ತನಿಖಾ ತಂಡ ಪೆಟ್ಟಿಗೆಯಲ್ಲಿರುವ ವಸ್ತುಗಳನ್ನು ತಪಾಸಣೆಗೊಳಪಡಿಸಿದೆ. ಡೆಹ್ರಾಡೂನ್‌ನ ರಾಜಪುರ ಪ್ರದೇಶದಿಂದ ಇಬ್ಬರು, ಮಧ್ಯಪ್ರದೇಶದಿಂದ ಇಬ್ಬರು ಹಾಗೂ ದೆಹಲಿಯಿಂದ ಒಬ್ಬನನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೀವಕ್ಕೆ ಅಪಾಯ ತಂದೊಡ್ಡುವ ವಸ್ತುವನ್ನು ಇಟ್ಟುಕೊಂಡು ಖರೀದಿಸಿದ್ದಕ್ಕಾಗಿ ಐವರ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಅವರ ಬಳಿ ರೇಡಿಯಾಗ್ರಫಿ ಕ್ಯಾಮೆರಾ ಕೂಡ ಪತ್ತೆಯಾಗಿತ್ತು ಎನ್ನಲಾಗಿದೆ. ಇನ್ನು ಈ ಆರೋಪಿಗಳು 10ತಿಂಗಳ ಹಿಂದೆ ಸಹಾರಾನ್‌ಪುರದಿಂದ ಈ ಸ್ಫೋಟಕಗಳನ್ನು ಖರೀದಿಸಿದ್ದು, ಡೆಹ್ರಾಡೂನ್‌ಗೆ ಬಂದು ಅಲ್ಲಿ ಅದನ್ನು ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ರಾಜ್‌ಪುರ ರಸ್ತೆಯಲ್ಲಿರುವ ಬ್ರೂಕ್ ಮತ್ತು ವುಡ್ಸ್ ಸೊಸೈಟಿಯ ಫ್ಲಾಟ್‌ನ ಕೊಠಡಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ ಮತ್ತು ತನಿಖೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅನ್ನು ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. SDRF ತಂಡವು ಫ್ಲಾಟ್‌ನಲ್ಲಿ ರೇಡಿಯೋ ಆಕ್ಟೀವ್‌ ಅಪಾಯಕಾರಿ ರಾಸಾಯನಿಕ ವಸ್ತು ದೃಢಪಡಿಸಿದೆ ಎಂದು ಅವರು ಹೇಳಿದರು.

ಬಂಧಿತರ ಬಳಿ ಇರುವಂತಹ ಸಾಧನಗಳನ್ನು ಮುಂಬೈನ ಬಾರ್ಕ್ ತಯಾರಿಸುತ್ತದೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ದೊಡ್ಡ ಪೈಪ್‌ಲೈನ್‌ಗಳಲ್ಲಿ ಸೋರಿಕೆಯನ್ನು ತಡೆಯಲು ಬಳಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ಉತ್ತರ ಪ್ರದೇಶದ ನರೋರಾದಲ್ಲಿರುವ ಪರಮಾಣು ವಿದ್ಯುತ್ ಕೇಂದ್ರದ ತುರ್ತು ತಂಡವು ಡೆಹ್ರಾಡೂನ್ ತಲುಪಿ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಸಾಧನವನ್ನು ಪರೀಕ್ಷಿಸಿತು. ಈ ಸಾಧನವನ್ನು ತನಿಖೆಗಾಗಿ BARC ಗೆ ಕಳುಹಿಸಲಾಗುವುದು ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Retail inflation: ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ದೇಶದ ಚಿಲ್ಲರೆ ಹಣದುಬ್ಬರ ಏರಿಕೆ

Exit mobile version