Site icon Vistara News

Video Viral: ಪ್ಲಾಟ್‌ಫಾರ್ಮ್‌ನಲ್ಲಿ ಲಂಚ್ ಬಾಕ್ಸ್ ಕ್ಲೀನ್ ಮಾಡುತ್ತಿದ್ದವನಿಗೆ ಗುದ್ದಿದ ರೈಲು, ಎಗರಿ ಬಿದ್ದು ಪ್ರಾಣಬಿಟ್ಟ ಯುವಕ

Rail Tragedy at Malad Railway Station

ಮುಂಬೈ, ಮಹಾರಾಷ್ಟ್ರ: ಮುಂಬೈನ (Mumbai) ಮಲಾಡ್ ರೈಲು ನಿಲ್ದಾಣದಲ್ಲಿ (Malad Railway Station) ಶುಕ್ರವಾರ ಸಂಭವಿಸಿದ ದುರ್ಘಟನೆಯಲ್ಲಿ 17 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ(Teen Died). ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ 3ರಲ್ಲಿ ಯುವಕ ತನ್ನ ಲಂಚ್ ಬಾಕ್ಸ್ (Lunch Box) ಕ್ಲೀನ್ ಮಾಡುತ್ತಿದ್ದ. ಆಗ ವೇಗವಾಗಿ ಬಂದ ಲೋಕಲ್ ಟ್ರೈನ್‌ಗೆ ಸಿಲುಕಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಯುವಕ ಕೊನೆಯುಸಿರೆಳೆದಿದ್ದಾನೆ. ಮೃತ ಯುವಕನನ್ನು ಮಯಾಂಕ್ ಅನಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಡೀ ದುರ್ಘಟನೆಯು (Rail Tragedy) ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ(Video Viral).

ರೈಲು ಅವಘಡದ ಸೆರೆಯಾಗಿರುವ ವಿಡಿಯೋ ಷೇರ್

ಈ ದುರ್ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮಯಾಂಕ್ ತನ್ನ ಸ್ನೇಹಿತರೊಂದಿಗೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಊಟ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಊಟ ಮುಗಿದ ಬಳಿಕ ಮಾಯಂಕ್ ಮತ್ತು ಆತನ ಸ್ನೇಹಿತರು ಪ್ಲಾಟ್‌ಫಾರ್ಮ್ ಅಂಚಿಗೆ ತೆರಳಿ ಮತ್ತು ಕೈ ಮತ್ತು ಲಂಚ್ ಬಾಕ್ಸ್ ಕ್ಲೀನ್ ಮಾಡಲು ಮಾಡುತ್ತಾರೆ. ಈ ಸಮಯದಲ್ಲಿ, ಚರ್ಚ್‌ಗೇಟ್-ಬೋರಿವಲಿ ರೈಲು ನಿಲ್ದಾಣಕ್ಕೆ ಆಗಮಿಸಿದ ಪರಿಣಾಮ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಆಗ ಅವಘಡ ಸಂಭವಿಸಿದೆ. ರೈಲಿನ ವೇಗಕ್ಕೆ ಯುವಕರು ತೂರಿ ಬಿದ್ದಿದ್ದಾರೆ. ಆಧರೆ, ತೀವ್ರವಾಗಿ ಗಾಯಗೊಂಡ ಮಯಾಂಕ್ ಸ್ಥಳದಲ್ಲೇ ಮೃತಪಟ್ಟಿರುವುದನ್ನು ವಿಡಿಯೋದಲ್ಲ ಕಾಣಬಹುದಾಗಿದೆ.

ಈ ಸುದ್ದಿಯನ್ನೂ ಓದಿ: ಇಂಟರ್‌ಲಾಕಿಂಗ್‌ ಬದಲಾವಣೆಯೇ ರೈಲು ದುರಂತಕ್ಕೆ ಕಾರಣ; ಹಾಗಾದರೆ ಏನಿದು ತಂತ್ರಜ್ಞಾನ?

ಮಲಾಡ್ ರೈಲು ನಿಲ್ದಾಣದಲ್ಲಿ ಈ ದುರ್ಘಟನೆಯ ಶುಕ್ರವಾರ ಮಧ್ಯಾಹ್ನ ನಡೆದಿದೆ. ಈ ಸಮಯದಲ್ಲಿ ರೈಲು ನಿಲ್ದಾಣವು ಜನಜಂಗುಳಿಯಿಂದ ತುಂಬಿರುತ್ತದೆ. ದೇಶದಲ್ಲಿ ನಿತ್ಯ ಯಾವುದಾದರೂ ಒಂದು ಇಂಥ ರೈಲು ಸಂಬಂಧಿ ದುರ್ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹಾಗಾಗಿ, ರೈಲ್ವೆ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version