Site icon Vistara News

Rajani Style Park | ನಾಲ್ಕಾರು ವಾಹನ ನೆಗೆದು ಪಾರ್ಕ್ ಆದ ಕಾರ್, ಇದು ರಜನಿ ಸ್ಟೈಲ್!

Car Viral

ಬೆಂಗಳೂರು: ಅಸಾಧ್ಯವಾದ ಕಾರ್ಯಗಳನ್ನು ಯಾರಾದರೂ ಮಾಡಿದರೆ, ಇಲ್ಲವೇ ಘಟಿಸಿದರೆ ಅವುಗಳನ್ನು ರಜನಿಕಾಂತ್ ಸ್ಟೈಲ್ ಕೆಲಸ ಎಂದು ಉತ್ಪ್ರೇಕ್ಷೆ ಮಾಡಿ ಹೇಳುತ್ತೇವೆ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳಲ್ಲೂ ಅಂಥದ್ದೇ ಅಸಾಧ್ಯವಾದ ಸಾಹಸಗಳನ್ನು ಕಾಣಬಹುದು. ಹಾಗಾಗಿಯೇ ರಜನಿಕಾಂತ್ ಜೋಕ್‌ಗಳು ಕೂಡ ಫೇಮಸ್. ಈ ವಿಷಯ ಯಾಕೆ ಹೇಳಬೇಕಾಯಿತು ಅಂದರೆ, ಟ್ವಿಟರ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದಕ್ಕೆ ರಜನಿಕಾಂತ್ ಅವರು ತಮ್ಮ ಕಾರ್ ಪಾರ್ಕಿಂಗ್ ಮಾಡುತ್ತಿದ್ದಾರೆ, ತಲೈವಾ ಸ್ಟೈಲ್ (Rajani Style Park) ಎಂದು ಹೆಸರಿಸಲಾಗಿದೆ!

ವಿಡಿಯೋದಲ್ಲಿ ಏನಿದೆ?
ಕ್ವಾಂಟಮ್ ಸೀಜ್ ಕೃತಿಯ ಲೇಖಕ ಬ್ರಿಜೇಶ್ ಸಿಂಗ್ ಅವರು ಈ ವಿಡಿಯೋ ಅನ್ನು ಷೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸ್ಪೀಡ್ ಆಗಿ ಬರುವ ಕಾರೊಂದು, ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕಾರು ಕಾರುಗಳನ್ನು ಹಾರಿ, ಮಧ್ಯೆ ಖಾಲಿ ಇರುವ ಪಾರ್ಕಿಂಗ್ ಜಾಗದಲ್ಲಿ ಪರ್ಫೇಕ್ಟ್ ಆಗಿ ಲ್ಯಾಂಡ್ ಆಗುತ್ತದೆ! ಈ ವಿಡಿಯೋಗೆ ಸಾವಿರಾರು ಲೈಕ್ಸ್ ದೊರೆಯುತ್ತಿವೆ. ಬ್ರಿಜೇಶ್ ಅವರು ಈ ವಿಡಿಯೋಗೆ ತಲೈವಾ ಸ್ಟೈಲ್ ಎಂದು ಹೆಸರು ನೀಡಿದ್ದಾರೆ.

ವಾಸ್ತವದಲ್ಲಿ ಅದು ಅಪಘಾತದ ವಿಡಿಯೋ ಆಗಿದ್ದು, ನಡೆದ ಸ್ಥಳ ಹಾಗೂ ಸಮಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್‌ಫ್ಯಾಕ್ಟ್ ಭಾರತದಲ್ಲಿ ನಡೆದಿದ್ದೋ ಅಥವಾ ವಿದೇಶದಲ್ಲಿ ನಡೆದಿದ್ದೋ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ, ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ.

Exit mobile version