Site icon Vistara News

Ram Mandir: ಇಂದಿನಿಂದ ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳು ಶುರು; ಏನೇನು ವಿಧಿವಿಧಾನ?

ram mandir

ram mandir

ಅಯೋಧ್ಯಾ: ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆ (Pran Pratishta) ಕಾರ್ಯಕ್ರಮಗಳು ನಾಳೆಯಿಂದ ಅಂದರೆ ಜನವರಿ 16ರಿಂದ ಶುರುವಾಗಲಿದ್ದು, ಜ.22ವರೆಗೂ ನಡೆಯಲಿವೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಆಹ್ವಾನಿಸಲಾಗಿದ್ದು, ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನಾಳೆಯಿಂದ ಕಾರ್ಯಕ್ರಮವು ಅಧಿಕೃತವಾಗಿ ಆರಂಭವಾಗಲಿದೆ. ಜನವರಿ 23ರಿಂದ ಭಕ್ತರಿಗೆ ರಾಮ ಮಂದಿರವು ಮುಕ್ತವಾಗಲಿದೆ ಎಂದು ತಿಳಿದು ಬಂದಿದೆ.

ದೇವಾಲಯದ ಟ್ರಸ್ಟ್ ಪ್ರಕಾರ, ರಾಜಕಾರಣಿಗಳು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ವಿವಿಧ ದೇಶಗಳ ಸುಮಾರು 100 ಪ್ರತಿನಿಧಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜನವರಿ 22 ಮಕರ ಸಂಕ್ರಾಂತಿಯ ನಂತರ ಬರುತ್ತದೆ. ಮಕರ ಸಂಕ್ರಾಂತಿ ಉತ್ತರದ ಕಡೆಗೆ ಸೂರ್ಯನ ಚಲನೆಯನ್ನು ಗುರುತಿಸುವ ಮಹತ್ವದ ಹಿಂದೂ ಪರ್ವ. ಇಲ್ಲಿಂದ ಬಳಿಕ ಉತ್ತರಾಯಣ. ಇದು ಮಂಗಳಕರ, ಬೆಳವಣಿಗೆ ಮತ್ತು ಹೊಸ ಆರಂಭದ ಸಮಯವೆಂದು ಪರಿಗಣಿಸಲಾಗಿದೆ.

ಶುಕ್ಲ ಪಕ್ಷದ ದ್ವಾದಶಿ ತಿಥಿ: ವಿಶೇಷವಾಗಿ ಶುಕ್ಲ ಪಕ್ಷ ಮತ್ತು ದ್ವಾದಶಿ ತಿಥಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ದಿನ. ಶುಕ್ಲ ಪಕ್ಷವು ಚಂದ್ರನ ಬೆಳವಣಿಗೆಯ ಹಂತವಾಗಿದೆ. ಇದು ಚಂದ್ರನ ಹೆಚ್ಚುತ್ತಿರುವ ಪ್ರಕಾಶದೊಂದಿಗೆ ಸಂಬಂಧಿಸಿದೆ. ಬೆಳವಣಿಗೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಹೊಸ ಉದ್ಯಮಗಳು, ಯೋಜನೆಗಳು ಅಥವಾ ಸಮಾರಂಭಗಳನ್ನು ಪ್ರಾರಂಭಿಸಲು ಶುಕ್ಲ ಪಕ್ಷ ಅತ್ಯಂತ ಮಂಗಳಕರ. ದ್ವಾದಶಿ ತಿಥಿಯು ಸ್ಥಿತಿಕರ್ತನಾದ, ರಕ್ಷಕನಾದ ಭಗವಾನ್ ವಿಷ್ಣುವಿಗೆ ಸಂಬಂಧಿಸಿದೆ. ಭಗವಾನ್ ರಾಮನು ವಿಷ್ಣುವಿನ ಏಳನೆಯ ಮತ್ತು ಅತ್ಯಂತ ಜನಪ್ರಿಯ ಅವತಾರ. ಈ ತಿಥಿಯಂದು ಮಂದಿರವನ್ನು ಉದ್ಘಾಟನೆ ಮಾಡುವುದು ವಿಷ್ಣುವಿನ ದೈವಿಕ ಉಪಸ್ಥಿತಿಯನ್ನು ಆಹ್ವಾನಿಸುವ ಸಂಕೇತ.

ಮೃಗಶೀರ್ಷ ನಕ್ಷತ್ರ: ಅಂದು ಮೃಗಶಿರಾ ನಕ್ಷತ್ರದಲ್ಲಿ ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ವೃಷಭ ರಾಶಿಯು ಸ್ಥಿರತೆ, ಭದ್ರತೆ ಮತ್ತು ವಸ್ತು ಸಂಪತ್ತಿಗೆ ಸಂಬಂಧಿಸಿದ ಸಂಕೇತ. ಇದು ರಾಮಮಂದಿರದ ಉದ್ಘಾಟನೆಗೆ ಪ್ರಶಸ್ತ. ಇದು ದೇವಾಲಯವು ಸ್ಥಿರ ಮತ್ತು ಸಮೃದ್ಧವಾಗಲಿದೆ ಎಂದು ಸೂಚಿಸುತ್ತದೆ. ಈ ದಿನ ಚಂದ್ರನು ಮೃಗಶಿರಾ ನಕ್ಷತ್ರದಲ್ಲಿ ಇರುತ್ತಾನೆ. ಹೊಸ ಉದ್ಯಮಗಳನ್ನು ಕೈಗೊಳ್ಳಲು ಮತ್ತು ಯಶಸ್ಸನ್ನು ಸಾಧಿಸಲು ಇದು ಪ್ರಬಲ ನಕ್ಷತ್ರ.

ಉತ್ತರಾಷಾಢ ನಕ್ಷತ್ರದಲ್ಲಿ ಸೂರ್ಯ: ಜನವರಿ 22ರಂದು ಸೂರ್ಯನು ಉತ್ತರ ಆಷಾಢ ನಕ್ಷತ್ರ ಮತ್ತು ಮಕರ ರಾಶಿಯಲ್ಲಿ ಇರುತ್ತಾನೆ. ಉತ್ತರ ಆಷಾಢವು ನಾಯಕತ್ವ, ಶಕ್ತಿ ಮತ್ತು ಯಶಸ್ಸಿಗೆ ಸಂಬಂಧಿಸಿದ ನಕ್ಷತ್ರ. ಇದು ಉದ್ಘಾಟನೆಗೆ ಅತ್ಯಂತ ಮಂಗಳಕರ. ಈ ದೇವಾಲಯವು ಭಾರತವನ್ನು ಜಾಗತಿಕ ಆಧ್ಯಾತ್ಮಿಕ ನಾಯಕನಾಗಿ ಬಿಂಬಿಸುತ್ತದೆ.

ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗ: ಈ ಎರಡೂ ಯೋಗಗಳನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವಾದ ಜ್ಯೋತಿಷ್ಯ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಜನವರಿ 22ರಂದು ಅವುಗಳ ಉಪಸ್ಥಿತಿಯು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ದೀರ್ಘಾಯುಷ್ಯ, ಸಮೃದ್ಧಿ ಮತ್ತು ಆಶೀರ್ವಾದಗಳನ್ನು ಪ್ರತಿನಿಧಿಸುತ್ತದೆ. ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೈವಿಕ ಅನುಗ್ರಹದೊಂದಿಗೆ ಸಹ ಸಂಬಂಧ ಹೊಂದಿವೆ.

22ರ ಪ್ರಾಮುಖ್ಯತೆ: ದಿನದ ಸಂಖ್ಯೆ 22. ಸಂಖ್ಯಾಶಾಸ್ತ್ರದಲ್ಲಿ 22 ಅನ್ನು ʼಮಾಸ್ಟರ್ ಬಿಲ್ಡರ್ʼ ಅಥವಾ ʼಮಾಸ್ಟರ್ ಟೀಚರ್ʼ ಸಂಖ್ಯೆ ಎಂದು ಉಲ್ಲೇಖಿಸಲಾಗುತ್ತದೆ. ಇದು ಕನಸುಗಳನ್ನು ರಿಯಾಲಿಟಿ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. 22ನೇ ಸಂಖ್ಯೆಗೆ ಸಂಬಂಧಿಸಿದ ವ್ಯಕ್ತಿಗಳು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ದಿನಾಂಕದ ಒಟ್ಟು ಮೊತ್ತ (22 + 1 + 2024) 31 ಆಗಿದೆ, ಇದನ್ನು ಕೂಡಿಸಿದಾಗ 4 (3 + 1) ಸಿಗುತ್ತದೆ. ಸಂಖ್ಯೆ 4 ಸ್ಥಿರತೆ, ಪ್ರಾಯೋಗಿಕತೆ ಮತ್ತು ಬಲವಾದ ಅಡಿಪಾಯದೊಂದಿಗೆ ಸಂಬಂಧಿಸಿದೆ.

ಜನವರಿ 16
ದೇವಸ್ಥಾನದ ಟ್ರಸ್ಟ್ ನೇಮಿಸಿದ ಆತಿಥೇಯರಿಂದ ಸರಯೂ ನದಿಯ ದಡದಲ್ಲಿ ದಶವಿದ್ ಸ್ನಾನ, ವಿಷ್ಣು ಪೂಜೆ ಮತ್ತು ಗೋದಾನ.

ಜನವರಿ 17
ರಾಮಲಲ್ಲಾ ಮೂರ್ತಿಯೊಂದಿಗೆ ಅಯೋಧ್ಯೆಯಲ್ಲಿ ಮೆರವಣಿಗೆ ನಡೆಯಲಿದ್ದು, ಭಕ್ತರು ಮಂಗಲ ಕಲಶದಲ್ಲಿ ಸರಯು ಜಲವನ್ನು ಹೊತ್ತು ದೇವಸ್ಥಾನಕ್ಕೆ ಬರಲಿದ್ದಾರೆ.

ಜನವರಿ 18
ಗಣೇಶ ಅಂಬಿಕಾ ಪೂಜೆಗಳೊಂದಿಗೆ ಔಪಚಾರಿಕ ಪೂಜಾ ವಿಧಿ ವಿಧಾನಗಳು ಶುರುವಾಗಲಿವೆ. ವರುಣ ಪೂಜೆ, ಮತ್ರಿಕಾ ಪೂಜೆ, ಬ್ರಾಹ್ಮಿಣ್ ವರನ್, ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜೆ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 19
ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 20
ದೇವಾಲಯದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆದ ನಂತರ ವಾಸ್ತು ಶಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಜನವರಿ 21
125 ಕಲಶಗಳಿರುವ ದೈವ ಸ್ನಾನದ ನಂತರ ಶಯಾಧಿವಾಸ ನಡೆಯಲಿದೆ.

ಜನವರಿ 22
ಬೆಳಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರ ನಕ್ಷತ್ರದಲ್ಲಿ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ಕೃತಿ ಮೂರನೇ ಮುದ್ರಣದತ್ತ!

Exit mobile version