Site icon Vistara News

Ram Mandir: ಮೋದಿ, ಯೋಗಿ ಹೋದ್ಮೇಲೆ ರಾಮ ಮಂದಿರ ಒಡೆದೇ ಒಡೆಯುತ್ತೇವೆ! ವೈರಲ್ ಆಯ್ತು ಹೇಳಿಕೆ

Ram Mandir will demolish after mod-yogi, statement of Muslim man goes viral

ಅಯೋಧ್ಯೆ, ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಮುಂದಿನ ತಿಂಗಳು 22ರಂದು ಪ್ರಾಣ-ಪ್ರತಿಷ್ಠೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹೊತ್ತಿನಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರು (Muslim Man) ಆಡಿದ ಮಾತುಗಳು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ(Viral Video). ಪಿಎಂ ನರೇಂದ್ರ ಮೋದಿ (PM Narendra Modi) ಮತ್ತು ಸಿಎಂ ಯೋಗಿ ಆದಿತ್ಯನಾಥ (CM Yogi Adityanath) ಕಾಲಾವಧಿ ಮುಗಿದ ಬಳಿಕ ರಾಮ ಮಂದಿರವನ್ನು ಒಡೆದು ಹಾಕುತ್ತೇವೆ (Ram Mandir Demolish) ಎಂದು ಸ್ಥಳೀಯ ಮುಸ್ಲಿಮ್ ವ್ಯಕ್ತಿ ಹೇಳಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ರಾಮ ಮಂದಿರ ನಿರ್ಮಾಣ ಮಾಡಿ, ಪೂಜೆ ಮಾಡ್ತಾ ಇರಿ. ಒಂದು ದಿನ ಮೋದಿ-ಯೋಗಿ ಹೋದ್ಮೇಲೆ ನಾವು ರಾಮ ಮಂದಿರವನ್ನು ಒಡೆದು ಬಿಸಾಕುತ್ತೇವೆ ಎಂದು ಮುಸ್ಲಿಮ್ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರು ಹೇಳುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಲಾಗಿರುವ ಈ ವಿಡಿಯೋಗೆ ಭಾರೀ ಸಂಖ್ಯೆಯಲ್ಲಿ ಕಮೆಂಟ್‌ಗಳು ಬಂದಿವೆ. ಹಲವರು, ಮೋದಿ-ಯೋಗಿಯೊಂದಿಗೆ ತಮ್ಮ ಕೆಟ್ಟ ಕನಸು ಅಂತ್ಯವಾಗುತ್ತದೆ ಎಂದು ಅವರು ಭಾವಿಸಿದ್ದಾರೆ. ಆದರೆ, ಮುಂದಿನ ತಲೆಮಾರು ರಕ್ಷಣೆಯ ಹೊಣೆಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳಲಿದೆ. ನಿರ್ಭಿತ ಮತ್ತು ಪಟ್ಟು ಬಿಡದ ಮುಂದಿನ ಪೀಳಿಗೆ ಸಿದ್ಧವಾಗುತ್ತಿದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಮೋದಿ-ಯೋಗಿ ಎಂದಿಗೂ ಜನರ ಹೃದಯದಿಂದ ಹೋಗುವುದಿಲ್ಲ, ನೀವು ನಿಮ್ಮ ಧರ್ಮ, ನಿಮ್ಮ ದೇವರನ್ನು ಪ್ರೀತಿಸಿದರೆ ನಾವು ನಮ್ಮ ರಾಮ ಮತ್ತು ಸೀತೆಯನ್ನು ಪ್ರೀತಿಸುತ್ತೇವೆ. ಮೋದಿ-ಯೋಗಿ ಇಲ್ಲಿ ಶಾಶ್ವತವಾಗಿ ಉಳಿಯದಿರಬಹುದು. ಆದರೆ ಅವರ ಸಿದ್ಧಾಂತ ಉಳಿಯುತ್ತದೆ. ಪ್ರತಿಯೊಬ್ಬ ಹಿಂದೂಗಳ ಹೃದಯದಲ್ಲಿ ಶಾಶ್ವತವಾಗಿರುತ್ತಾರೆ. ನಾವು ನಮ್ಮ ಮಕ್ಕಳಿಗೆ ಅದನ್ನೇ ಕಲಿಸುತ್ತೇವೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

Ram Mandir: ಅಯೋಧ್ಯೆ ರಾಮ ಮಂದಿರ ಮೊದಲ ಮಹಡಿ ನಿರ್ಮಾಣದ ಫೋಟೋಗಳು ವೈರಲ್

ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆ (Pran-Pratishta) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ, ಮಂದಿರದ ಉಳಿದ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Sri Ram Janmabhoomi Tirath Kshetra Trust) ಕಳೆದ ಕೆಲವು ವಾರಗಳಿಂದ ರಾಮ ಮಂದಿರ ನಿರ್ಮಾಣದ ಅನೇಕ ಫೋಟೋಗಳನ್ನು ಸೋಷಿಯ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಈಗ ರಾಮ ಮಂದಿರದ ಮೊದಲನೇ ಮಹಡಿಯ (First Floor of Ram mandir) ನಿರ್ಮಾಣ ಕಾರ್ಯದ ಫೋಟೋಗಳನ್ನು ಟ್ರಸ್ಟ್ ಶುಕ್ರವಾರ ಷೇರ್ ಮಾಡಿದೆ.

ಶ್ರೀ ರಾಮ ಜನ್ಮಭೂಮಿ ಮಂದಿರ ಮೊದಲ ಮಹಡಿ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡು, ಜತೆಗೆ ಫೋಟೋಗಳನ್ನು ಷೇರ್ ಮಾಡಿದೆ. ಈ ಫೋಟೋಗಳು ಅದ್ಭುತವಾಗಿದ್ದು, ಮೊದಲ ಮಹಡಿಯ ನಿರ್ಮಾಣ ಕಾರ್ಯವು ಭರದಿಂದ ಸಾಗಿರುವುದನ್ನು ಗುರುತಿಸಬುಹದಾಗಿದೆ. ಜನವರಿ 22ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿರುವುದರಿಂದ ಉಳಿದಿರುವ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ.

ಇದಕ್ಕೂ ಮೊದಲು ರಾಮ ಮಂದಿರದ ಗರ್ಭ ಗುಡಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದರು. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದರು. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿತ್ತು.

ಈ ಸುದ್ದಿಯನ್ನು ಓದಿ: Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Exit mobile version