Site icon Vistara News

Albino Deer: ಉತ್ತರ ಪ್ರದೇಶದ ಕತರ್ನಿಯಾ ಘಾಟ್‌‌ನಲ್ಲಿ ಅಪರೂಪದ ಬಿಳಿ ಜಿಂಕೆ ಪತ್ತೆ, ಫೋಟೋ ವೈರಲ್!

Rare White Albino Deer Spotted In UP's Katarniya Ghat

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಅರಣ್ಯಾಧಿಕಾರಿಗಳು ಸಕ್ರಿಯರಾಗಿರುವುದರಿಂದ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಸಾಕಷ್ಟು ಜನ ಜಾಗೃತಿ ಮೂಡಲು ಕಾರಣವಾಗುತ್ತಿದೆ. ಹಲುವಾರು ಅಧಿಕಾರಿಗಳ ಕಾಡಿನ ವೈಶಿಷ್ಟ್ಯವನ್ನು ಸಾರುವ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅರಣ್ಯಾಧಿಕಾರಿ ಆಕಾಶ್ ದೀಪ್ ಬಧವನ್ ಅವರು, ಅಪರೂಪದ ಬಿಳಿ ಜಿಂಕೆ(albino deer)ಯ ಫೋಟೋವನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಉತ್ತರ ಪ್ರದೇಶದ ಕತರ್ನಿಯಾ ಘಾಟ್‌‌ ವನ್ಯಜೀವಿ ಅಭಯಾರಣ್ಯದಲ್ಲಿ(Katarniya Ghat Wildlife Sanctuary) ಈ ಅಪರೂಪದ ಜಿಂಕೆ ಕಂಡು ಬಂದಿದೆ.

ಟ್ವಿಟರ್‌ನಲ್ಲಿ ಈ ಅಪರೂಪದ ಜಿಂಕೆಯ ಫೋಟೋ ಹಂಚಿಕೊಂಡಿರುವ ಅಧಿಕಾರಿ, ಎಲ್ಲ ಅಪರೂಪ ಎಂಬುದೇ ಸಾಮಾನ್ಯ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಕರ್ನಿಯಾಘಾಟ್‌ನಲ್ಲಿ ಅಪರೂಪದ ಅಲ್ಬಿನೋ ಜಿಂಕೆ ಇಂದು ಕಾಣಿಸಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಹಿರಿಯ ಹೆಣ್ಣು ಜಿಂಕೆಯೊಂದಿಗೆ ಈ ವಿಶಿಷ್ಟ ಬಿಳಿ ಜಿಂಕೆ ಹುಲ್ಲನ್ನು ತಿನ್ನುತ್ತಾ ಮುಂದೆ ಸಾಗುತ್ತಿರುವ ಫೋಟೋವನ್ನು ಷೇರ್ ಮಾಡಲಾಗಿದೆ.

ಐಎಫ್‌ಎಸ್ ಅಧಿಕಾರಿ ಆಕಾಶ್ ದೀಪ್ ಬಧವನ್ ಅವರ ಟ್ವೀಟ್

ಟ್ವಿಟರ್‌ನಲ್ಲಿ ಷೇರ್ ಮಾಡಲಾಗಿರುವ ಪಿಕ್ಚರ್ ಫುಲ್ ವೈರಲ್ ಆಗಿದೆ. ಅನೇಕ ಬಳಕೆದಾರರು ಅಪರೂಪದ ಜೀವಿಯನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ. ಆದರೆ, ಕೆಲವರು ಅದರ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಇತರ ಅಧಿಕಾರಿಗಳು ಸಹ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Orange Bat | ಚತ್ತೀಸ್‌ಗಢದಲ್ಲಿ ಕಾಣ ಸಿಕ್ಕಿತು ಬಲು ಅಪರೂಪದ ಕೇಸರಿ ಬಾವಲಿ!

15 ವರ್ಷಗಳ ಹಿಂದೆ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ದೃಶ್ಯವನ್ನು ಕಂಡಿರುವ ಬಗ್ಗೆ ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರೂ ಟ್ವೀಟ್ ಮಾಡಿದ್ದಾರೆ. ಚಿನ್ನದ ಜಿಂಕೆ ರಾಮಾಯಣದ ಭಾಗವಾಗಿತ್ತು. @aakashbadhawan ಅವರು ಹಂಚಿಕೊಂಡ ಬೆಳ್ಳಿ ಜಿಂಕೆ ಇಲ್ಲಿದೆ. 15 ವರ್ಷಗಳ ಹಿಂದೆ ಅಂಗುಲ್ ಜಿಲ್ಲೆಯ ಲಬಂಗಿ ಅತಿಥಿಗೃಹದಲ್ಲಿ ಇಂಥದ್ದೇ ಒಂದು ಜಿಂಕೆಯನ್ನು ನೋಡಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ.

Exit mobile version