ನವದೆಹಲಿ: ದೇಶದ ಕೇಂದ್ರ ಬ್ಯಾಂಕ್ ಎನಿಸಿಕೊಂಡಿರುವ ರಿಸರ್ವ್ ಬ್ಯಾಂಕ್ ಇಂಡಿಯಾ (RBI) ಕರ್ನಾಟಕ (Karnataka) ಹಾಗೂ ಮಹಾರಾಷ್ಟ್ರದ (Maharashtra) ತಲಾ ಒಂದು ಕೋ ಆಪರೇಟಿವ್ ಬ್ಯಾಂಕ್‌ಗಳ (Co-Operative Banks) ಅನುಮತಿಯನ್ನು ರದ್ದುಗೊಳಿಸಿದೆ. ಹಾಗಾಗಿ, ಈ ಎರಡೂ ಸಹಕಾರಿ ಬ್ಯಾಂಕುಗಳು ಇನ್ನು ಮುಂದೆ ಬ್ಯಾಂಕಿಂಗ್ ವ್ಯವಹಾರ ಮಾಡುವಂತಿಲ್ಲ. ಮಹಾರಾಷ್ಟ್ರದ ಬುಲ್ದಾನ ನಗರದ ಮಲ್ಕಾಪುರ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿ. ಹಾಗೂ ಬೆಂಗಳೂರು (Bengaluru) ಮಹಾನಗರದ ಶುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕಿನ (Shushruti Souharda Sahakara Bank Niyamita) ಪರವಾನಿಗೆಯನ್ನು ಆರ್‌ಬಿಐ ರದ್ದು ಮಾಡಿದೆ.
ಬುಧವಾರದ ವಹಿವಾಟಿನ ಮುಕ್ತಾಯದಿಂದ ಎರಡೂ ಸಹಕಾರಿ ಬ್ಯಾಂಕ್‌ಗಳು ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರಿಸುವುದನ್ನು ನಿಲ್ಲಿಸಲಾಗಿದೆ ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಎರಡು ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಲಾಗಿದೆ. ಈ ಎರಡೂ ಬ್ಯಾಂಕುಗಳಿಗೆ ಸಾಕಾಗುವಷ್ಟು ಬಂಡಾವಳವನ್ನು ಮತ್ತು ಆದಾಯವನ್ನು ಹೊಂದಿಲ್ಲ. ಈ ಬ್ಯಾಂಕುಗಳ ಈಗಿನ ಹಣಕಾಸು ಪರಿಸ್ಥಿತಿ ನೋಡಿದರೆ, ಅವು ಠೇವಣಿದಾರರಿಗೆ ಹಣವನ್ನು ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ ದಿವಾಳಿಯಾದ್ದರಿಂದ ಪ್ರತಿಯೊಬ್ಬ ಠೇವಣಿದಾರನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ 5 ರೂ. ಲಕ್ಷದವರೆಗಿನ ಅವನ/ಅವಳ ಠೇವಣಿಗಳ ಠೇವಣಿ ವಿಮೆಯ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಆರ್ ಬಿ ಐ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Fixed deposit : ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿ ದರ ಪರಿಷ್ಕರಣೆ, ಎಲ್ಲಿ ಎಷ್ಟು?
ಶುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತಕ್ಕೆ ಸಂಬಂಧಿಸಿದಂತೆ ಸಾಲದಾತರು ಸಲ್ಲಿಸಿದ ಮಾಹಿತಿಯ ಪ್ರಕಾರ, 91.92 ರಷ್ಟು ಠೇವಣಿದಾರರು ಡಿಐಸಿಜಿಸಿಯಿಂದ ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ಹೇಳಿದೆ. ಈಗಾಗಲೇ 2023 ಮೇ 31ಕ್ಕೆ ಅನುಗುಣವಾಗಿ ಡಿಐಸಿಜಿಸಿ 54.16 ಕೋಟಿ ರೂ. ಹಣವನ್ನು ವಿಮೆ ಮಾಡಿದ ಠೇವಣಿದಾರರಿಗೆ ಪಾವತಿಸಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.