ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ (RBI monetary policy meeting) ಇಂದು ಅಂತಿಮಗೊಳ್ಳಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಅವರು ಮುಂದಿನ ದ್ವೈಮಾಸಿಕದ ಹಣಕಾಸು ನಿರ್ಧಾರಗಳನ್ನು ಬಹಿರಂಗಪಡಿಸಲಿದ್ದಾರೆ.
ಮೂರು ದಿನಗಳ ಸಭೆ ಇಂದು ಪೂರ್ಣಗೊಂಡ ನಂತರ ಪ್ರಮುಖ ಬಡ್ಡಿದರಗಳು, ಜಿಡಿಪಿ ಮತ್ತು ಹಣದುಬ್ಬರ ಮುನ್ಸೂಚನೆಗೆ ಸಂಬಂಧಿಸಿದಂತೆ ದಾಸ್ ಎಂಪಿಸಿಯ ನಿರ್ಧಾರವನ್ನು ಪ್ರಕಟಿಸುತ್ತಾರೆ. ಕಳೆದ ಫೆಬ್ರವರಿ 23ರಂದು ಆರ್‌ಬಿಐ ರೆಪೊ ದರವನ್ನು (Repo rates) ಶೇ.6.5ಕ್ಕೆ ಏರಿಸಿತ್ತು.
ಏನು ನಿರೀಕ್ಷಿಸಬಹುದು?
1) ತಜ್ಞರ ಪ್ರಕಾರ ಬಡ್ಡಿದರ ಈಗಾಗಲೇ ಉತ್ತುಂಗಕ್ಕೇರಿದೆ. ಆರ್‌ಬಿಐ ಅನಿವಾರ್ಯತೆ ಇಲ್ಲದಿದ್ದಲ್ಲಿ ಬಡ್ಡಿದರ ಹೆಚ್ಚಳಕ್ಕೆ ಹೋಗುವ ಸಾಧ್ಯತೆಯಿಲ್ಲ. ಜೂನ್‌ನಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ. ಈ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಕಡಿಮೆ ಮಾಡುವ ಸಾಧ್ಯತೆಯಿಲ್ಲ ಎಂದು ಹೆಚ್ಚಿನ ತಜ್ಞರು ಒಪ್ಪುತ್ತಾರೆ.
2) ರೆಪೋ ದರವನ್ನು 6.5 ಪ್ರತಿಶತದಲ್ಲಿ ತಡೆಹಿಡಿಯಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಲಿಕ್ವಿಡಿಟಿ ಬಿಗಿಯಾಗಿ ಉಳಿದುಕೊಂಡಿರುವುದರಿಂದ ಬಡ್ಡಿದರ ಬದಲಾಗದೆ ಉಳಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಎಂದು HSBCಯ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ತಿಳಿಸಿದ್ದಾರೆ.
3) ಆರ್‌ಬಿಐ ಬಿಗಿಯಾದ ಲಿಕ್ವಿಡಿಟಿ ಕಾಯ್ದುಕೊಳ್ಳುವುದರೊಂದಿಗೆ, ಅಲ್ಪಾವಧಿಯ ದರಗಳು ಶೇಕಡಾ 6.85- 6.9ರ ಆಸುಪಾಸಿನಲ್ಲಿವೆ. ಇದು ರೆಪೋ ದರಕ್ಕಿಂತ 35-40 ಬಿಪಿಎಸ್ ಹೆಚ್ಚಾಗಿದೆ.
4) ರಾಯಿಟರ್ಸ್ ಸಮೀಕ್ಷೆಯ ಪ್ರಕಾರ ಆರ್‌ಬಿಐ ಸತತ ಐದನೇ ಸಭೆಗೆ ಪ್ರಮುಖ ನೀತಿ ದರವನ್ನು ಶೇಕಡಾ 6.50ಕ್ಕೆ ಹಿಡಿದಿಟ್ಟುಕೊಳ್ಳಲಿದೆ.
5) ಮೃದುವಾದ ಹಣದುಬ್ಬರದ ಪರಿಣಾಮ 2024ರ ಮೊದಲಾರ್ಧದಲ್ಲಿ RBI ಬಡ್ಡಿದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
6) ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಏರಿಕೆಯಾಗಿದೆ. ಹಣದುಬ್ಬರವು ನವೆಂಬರ್‌ನಲ್ಲಿ 5.70 ಶೇಕಡಾ ವಾರ್ಷಿಕ ದರದಲ್ಲಿ ಏರಿದೆ. ಅಕ್ಟೋಬರ್‌ನಲ್ಲಿ ಶೇಕಡಾ 4.87ಕ್ಕಿಂತ ಹೆಚ್ಚು ಏರಿದೆ.
7) ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಮುಂದುವರೆಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ 7.6 ಶೇಕಡಾ ದರದಲ್ಲಿ ವಿಸ್ತರಿಸಿದೆ. ನಿರೀಕ್ಷೆಗಳನ್ನು ಮೀರಿದೆ. ಈ ಬೆಳವಣಿಗೆಯು ಹೆಚ್ಚಿದ ಸರ್ಕಾರಿ ಖರ್ಚು ಮತ್ತು ಉತ್ಪಾದನಾ ವಲಯದಲ್ಲಿನ ಪ್ರಗತಿಯಿಂದ ಉತ್ತೇಜಿತವಾಯಿತು.
ಇದನ್ನೂ ಓದಿ: RBI News: ಬಡ್ಡಿ ದರ 6.50%ರಲ್ಲಿಯೇ ಉಳಿಕೆ: ತಜ್ಞರ ಮುನ್ಸೂಚನೆ