Site icon Vistara News

RBI News: ಆರೋಗ್ಯ, ಶೈಕ್ಷಣಿಕ ಉದ್ದೇಶದ ಯುಪಿಐ ಪಾವತಿ ಮಿತಿ ₹5 ಲಕ್ಷಕ್ಕೆ ಹೆಚ್ಚಳ

UPI

UPI

ಹೊಸದಿಲ್ಲಿ: ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗಳಿಗಾಗಿ ಯುಪಿಐ ಪಾವತಿ (UPI Payment) ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI news) ನಿರ್ಧರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಆಸ್ಪತ್ರೆಗಳಂತಹ ಆರೋಗ್ಯ ರಕ್ಷಣಾ ಘಟಕಗಳಿಗೆ ಮತ್ತು ಕಾಲೇಜುಗಳು ಮತ್ತು ಶಾಲೆಗಳಂತಹ ಶೈಕ್ಷಣಿಕ ಸೌಲಭ್ಯಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಪ್ರಸ್ತುತ ಇರುವ ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಹಣಕಾಸು ನೀತಿಯ ಸದಸ್ಯರ (RBI MPC meet) ಸಭೆಯ bLik ಇದನ್ನು ಘೋಷಿಸಿದ್ದಾರೆ.

ಇ- ಮ್ಯಾಂಡೇಟ್‌ಗಳ ನಿರ್ಧಾರದ ಭಾಗವಾಗಿ, ಮ್ಯೂಚುವಲ್ ಫಂಡ್ ಹೂಡಿಕೆಗಳು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳಿಗಾಗಿ ಹೆಚ್ಚುವರಿ ಅಂಶ ದೃಢೀಕರಣದ (ಎಎಫ್‌ಎ) ಮಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪಿಸಿದೆ. ಇಲ್ಲಿಯವರೆಗೆ, ರೂ. 15,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ AFA ಅಗತ್ಯವಿದೆ.

ಇದಲ್ಲದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ದ್ವೈಮಾಸಿಕದ ರೆಪೊ ದರಗಳನ್ನು ಪ್ರಕಟಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 6.5% ಬಡ್ಡಿ ದರವನ್ನೇ ಆರ್‌ಬಿಐ ಮುಂದುವರಿಸಿದೆ. ಸತತ ಐದನೇ ಬಾರಿಗೆ ಬಡ್ಡಿ ದರದಲ್ಲಿ ಬ್ಯಾಂಕ್ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಆರ್‌ಬಿಐ ತನ್ನ ನಾಲ್ಕು ಹಣಕಾಸು ನೀತಿಗಳಲ್ಲಿ ಬೆಂಚ್‌ಮಾರ್ಕ್ ಪಾಲಿಸಿ ದರವನ್ನು (ರೆಪೊ) ಬದಲಾಯಿಸದೆ ಬಿಟ್ಟಿದೆ. ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ಗೆ ತಮ್ಮ ಭದ್ರತೆಗಳನ್ನು ನೀಡಿ ಹಣವನ್ನು ಎರವಲು ಪಡೆಯುವ ದರವನ್ನು ಸೂಚಿಸುತ್ತದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ವ್ಯಾಪಾರಗಳಲ್ಲಿ ಸಾಲ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಈ ದರಗಳು ಪ್ರಮುಖವಾಗಿವೆ.

RBI ಕೊನೆಯದಾಗಿ ಫೆಬ್ರವರಿಯಲ್ಲಿ ರೆಪೋ ದರವನ್ನು 6.5%ಕ್ಕೆ ಹೆಚ್ಚಿಸಿತ್ತು. ರಷ್ಯಾ- ಉಕ್ರೇನ್ ಯುದ್ಧದ ನಂತರ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳ ಪರಿಣಾಮ 2022ರ ಮೇ ತಿಂಗಳಿನಲ್ಲಿ ಬಡ್ಡಿದರ ಏರಿಕೆ ಆರಂಭವಾಗಿತ್ತು. ಆದರೆ ಇದೇ ಫೆಬ್ರವರಿ ಬಳಿಕ ಬದಲಾಗಿಲ್ಲ.

ಇದನ್ನೂ ಓದಿ: RBI News: ರೆಪೊ ದರ 6.5% ಮುಂದುವರಿಕೆ, ಸತತ 5ನೇ ಬಾರಿಗೆ ಯಥಾಸ್ಥಿತಿ

Exit mobile version