ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (reserve bank of India) ಡಿಸೆಂಬರ್ 8ರಂದು ಮುಂದಿನ ತ್ರೈಮಾಸಿಕದ ಬಡ್ಡಿದರಗಳನ್ನು (interest rate) ಘೋಷಿಸಲಿದ್ದು, ಅದನ್ನು 6.50%ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ ನಿರಂತರ ಐದನೇ ಸಭೆಯಲ್ಲೂ ಅದು (RBI news) ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡಂತಾಗಲಿದೆ.
ಹಣದುಬ್ಬರದ ಚಿಂತೆಯ ನಡುವೆಯೂ, ಆರ್‌ಬಿಐ ವಿಚಲಿತವಾಗದೆ ಬಡ್ಡಿದರ ಉಳಿಸಿಕೊಳ್ಳಲಿದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಅಕ್ಟೋಬರ್‌ನಲ್ಲಿ ಹಣದುಬ್ಬರವು ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ 4.87%ಕ್ಕೆ ಇಳಿದಿದ್ದರೂ, ಕನಿಷ್ಠ ಎರಡು ವರ್ಷಗಳ ಕಾಲ RBIಯ 4% ಮಧ್ಯಮ ಅವಧಿಯ ಗುರಿಯತ್ತ ಇಳಿಯುವ ನಿರೀಕ್ಷೆಯಿದೆ. ಅದು ಆರ್‌ಬಿಐ ತನ್ನ ನಿಲುಮೆಯನ್ನು ಬದಲಾಯಿಸದಂತೆ ತಡೆಯುವ ಸಾಧ್ಯತೆಯಿದೆ.
ನವೆಂಬರ್ 17- 30 ಸುದ್ದಿಸಂಸ್ಥೆ ರಾಯಿಟರ್ಸ್ ನಡೆಸಿದ ಸಮೀಕ್ಷೆಯಲ್ಲಿ 64 ಅರ್ಥಶಾಸ್ತ್ರಜ್ಞರು, ಆರ್‌ಬಿಐ ತನ್ನ ಡಿಸೆಂಬರ್ 6-8ರ ಸಭೆಯಲ್ಲಿ ರೆಪೊ ದರವನ್ನು 6.50%ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಎಂದು ನಿರೀಕ್ಷಿಸಿದ್ದಾರೆ. “ರಿಸರ್ವ್ ಬ್ಯಾಂಕ್ ಬಡ್ಡಿದರ ಹಾಗೆಯೇ ಉಳಿಯಗೊಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. Q3 2024ರ ಮೊದಲು ನಾವು ದರ ಕಡಿತವನ್ನು ನಿರೀಕ್ಷಿಸುತ್ತಿಲ್ಲ” ಎಂದು ANZ ಸಂಶೋಧನೆಯ ಅರ್ಥಶಾಸ್ತ್ರಜ್ಞ ಧೀರಜ್ ನಿಮ್ ಹೇಳಿದ್ದಾರೆ.
ಬ್ಯಾಂಕ್ ಹಣದುಬ್ಬರವನ್ನು 4% ಗುರಿಯೊಂದಿಗೆ ಹೊಂದಿಸಲು ಪ್ರಾರಂಭಿಸಿದೆ. ಸಮೀಕ್ಷೆಯಲ್ಲಿದ್ದವರು ಈ ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮೊದಲ ದರ ಕಡಿತದ ಸಾಧ್ಯತೆಯನ್ನು ತೋರಿಸಿದ್ದರೂ, ಅರ್ಧದಷ್ಟು ಅರ್ಥಶಾಸ್ತ್ರಜ್ಞರು ಇದು ಎರಡನೇ ಅಥವಾ ಅದಕ್ಕಿಂತ ಮೊದಲು ಬರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು, 56ರಲ್ಲಿ 29 ಮಂದಿ, 2024ರ ಮಧ್ಯದ ವರೆಗೂ ರೆಪೊ ದರ 6.50%ರಲ್ಲಿ ಇರಬಹುದು ಎನ್ನುತ್ತಾರೆ. ಆದರೆ ಮಧ್ಯ ವರ್ಷದ ವೇಳೆಗೆ ಕಾಲು ಶೇಕಡಾವಾರು ಪಾಯಿಂಟ್ ಕಡಿತವನ್ನು ಅಂದರೆ 6.25%ಗೆ ಕಡಿತವನ್ನು ನಿರೀಕ್ಷಿಸಲಾಗಿದೆ. ಉಳಿದ ಐದು ಜೂನ್ ಅಂತ್ಯದ ವೇಳೆಗೆ 6.00%ಗೆ ಅರ್ಧ ಪಾಯಿಂಟ್ ಕಡಿತವನ್ನು ನಿರೀಕ್ಷಿಸಿದ್ದಾರೆ.
ತಜ್ಞರ ಮಾದರಿಯ ಮುಕ್ಕಾಲು ಭಾಗಕ್ಕಿಂತ ಹೆಚ್ಚು, 43ರಲ್ಲಿ 33 ಮಂದಿ, ರೆಪೊ ದರವು ಸೆಪ್ಟೆಂಬರ್ ಅಂತ್ಯದ ವೇಳೆಗೆ 6.25% ಅಥವಾ ಕಡಿಮೆ ಸರಾಸರಿಯಲ್ಲಿ ಇರುತ್ತದೆ ಎಂದು ಹೇಳಿದರು. ಉಳಿದ 10 ಮಂದಿ ರೆಪೊ ದರವು ಪ್ರಸ್ತುತ 6.50%ನಲ್ಲಿಯೇ ಇರುತ್ತದೆ ಎಂದು ಹೇಳಿದರು.
ಮಾರ್ಚ್‌ನಲ್ಲಿ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಸರಾಸರಿ 5.4% ಮತ್ತು 2024-25ರ ಹಣಕಾಸು ವರ್ಷದಲ್ಲಿ 4.8% ಎಂದು ಮುನ್ಸೂಚಿಸಲಾಗಿದೆ.
ಇದನ್ನೂ ಓದಿ: RBI news: ನಿಯಮ ಪಾಲಿಸದ ಎಲ್&ಟಿ ಫೈನಾನ್ಸ್‌ಗೆ ₹2.5 ಕೋಟಿ ದಂಡ ವಿಧಿಸಿದ ಆರ್‌ಬಿಐ