ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ಎಂಬುದು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನ ಎಫ್ಎಂಸಿಜಿ (FMCG) ಅಂಗ ಹಾಗೂ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ. ಆರ್‌ಸಿಪಿಎಲ್‌ನಿಂದ ತನ್ನ ದೇಶೀಯ ನಿರ್ಮಿತ ಗ್ರಾಹಕ ಪ್ಯಾಕೇಜ್ಡ್ ಸರಕುಗಳ ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ (Independence) ಅನ್ನು ಉತ್ತರ ಭಾರತಕ್ಕೂ (North India) ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ನೈಜ ಭಾರತೀಯ ಸಮಸ್ಯೆಗಳಿಗೆ ನಿಜವಾದ ಭಾರತೀಯ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ ‘ಇಂಡಿಪೆಂಡೆನ್ಸ್’ ಖಾದ್ಯ ತೈಲಗಳು, ಧಾನ್ಯಗಳು, ಬೇಳೆಕಾಳುಗಳು, ಪ್ಯಾಕೇಜ್ ಮಾಡಿದ ಆಹಾರಗಳು ಹಾಗೂ ದೈನಂದಿನ ಅಗತ್ಯಗಳಿಗಾಗಿ ಇತರ ವಸ್ತುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿ ಉತ್ಪನ್ನಗಳನ್ನು ನೀಡುತ್ತದೆ. ಗುಜರಾತ್‌ನಲ್ಲಿ ಅದರ ಅತ್ಯಂತ ಯಶಸ್ವಿ ಪ್ರಾರಂಭದ ನಂತರ, ‘ಇಂಡಿಪೆಂಡೆನ್ಸ್’ ಉತ್ಪನ್ನಗಳು ಈಗ ಪಂಜಾಬ್, ಹರಿಯಾಣ, ದೆಹಲಿ ಎನ್ ಸಿಆರ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದಾದ್ಯಂತ ಗ್ರಾಹಕರಿಗೆ ಲಭ್ಯವಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) ನೀತಿಯನ್ನು ಆಧರಿಸಿ, ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಗುಣಮಟ್ಟದ ಉತ್ಪನ್ನಗಳ ಸಬಲೀಕರಣಗೊಳಿಸುವ ಗುರಿಯನ್ನು ಆರ್ ಸಿಪಿಎಲ್ ಹೊಂದಿದೆ. ಉದಾಹರಣೆಗೆ, ‘ಇಂಡಿಪೆಂಡೆನ್ಸ್’ ಉತ್ಪನ್ನಗಳು, ಸ್ಥಳೀಯ ಗ್ರಾಹಕರ ಅಗತ್ಯಗಳ ವಿಶಿಷ್ಟ ತಿಳಿವಳಿಕೆಯೊಂದಿಗೆ ಹೇಳಿ ಮಾಡಿಸಿದಂತಿವೆ. ಭಾರತೀಯ ಜನಸಂಖ್ಯೆಯ ದೊಡ್ಡ ವಿಭಾಗವು ವಿಶ್ವಾಸಾರ್ಹ ಗ್ರಾಹಕ ಸರಕುಗಳ ಬ್ರ್ಯಾಂಡ್‌ಗಾಗಿ ಹುಡುಕುತ್ತಿದೆ. ‘ಇಂಡಿಪೆಂಡೆನ್ಸ್’ ವ್ಯಾಪಕ ಶ್ರೇಣಿಯ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ ಮತ್ತು ಆ ಅಂತರವನ್ನು ತುಂಬುವ ಗುರಿಯನ್ನು ಹೊಂದಿದೆ.
ಹಿಟ್ಟು, ಖಾದ್ಯ ತೈಲ, ಅಕ್ಕಿ, ಸಕ್ಕರೆ, ಗ್ಲೂಕೋಸ್ ಬಿಸ್ಕತ್ತು ಮತ್ತು ಎನರ್ಜಿ ಮಿಠಾಯಿಗಳಂತಹ ಆಫರ್ ಗಳೊಂದಿಗೆ ‘ಇಂಡಿಪೆಂಡೆನ್ಸ್’ ಪ್ರತಿ ಭಾರತೀಯ ಕುಟುಂಬಗಳಿಗೆ ಪೌಷ್ಟಿಕಾಂಶದ ರುಚಿಯಾದ ಆಹಾರವನ್ನು ನೀಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಆರ್‌ಸಿಪಿಎಲ್ ತಯಾರಕರು ಮತ್ತು ದಿನಸಿ ಮಳಿಗೆಗಳು ಸೇರಿದಂತೆ ವ್ಯಾಪಾರ ಪಾಲುದಾರರ ಜತೆಗೆ ಹಂಚಿದ ಸಮೃದ್ಧಿಯ ಗುರಿಯೊಂದಿಗೆ ಸಹಕರಿಸುತ್ತಿದೆ, ಅವರಿಗೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ನೀಡುತ್ತದೆ.
ಈ ಸುದ್ದಿಯನ್ನು ಓದಿ: RBI Interest rate | ಆರ್‌ಬಿಐನಿಂದ ಇಂದು ಬಡ್ಡಿ ದರ ಏರಿಕೆ ನಿರೀಕ್ಷೆ, ಷೇರು ಪೇಟೆ ಮೇಲೆ ಪ್ರಭಾವ?
ಮುಂಬರುವ ತಿಂಗಳಲ್ಲಿ ದೇಶಾದ್ಯಂತ ಹೆಚ್ಚಿನ ಗ್ರಾಹಕರನ್ನು ತಲುಪಲು ಕಂಪನಿಯು ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳಾದ್ಯಂತ ತನ್ನ ವಿತರಣಾ ವ್ಯಾಪ್ತಿಯನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ. ಇದು ಸೊಸ್ಯೊ ಹಜೂರಿಯಿಂದ ಪಾರಂಪರಿಕ ಬ್ರ್ಯಾಂಡ್‌ಗಳನ್ನು ಒಳಗೊಂಡಿರುವ ಅದರ ಬಹುಮುಖ ಎಫ್‌ಎಂಸಿಜಿ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತದೆ. ಲೋಟಸ್ ಚಾಕೊಲೇಟ್‌ಗಳಿಂದ ಮಿಠಾಯಿ ಶ್ರೇಣಿ, ಶ್ರೀಲಂಕಾದ ಪ್ರಮುಖ ಬಿಸ್ಕೆಟ್ ಬ್ರ್ಯಾಂಡ್ ಮಲಿಬಾನ್ ಮತ್ತು ಇಂಡಿಪೆಂಡೆನ್ಸ್ ಸೇರಿದಂತೆ ತನ್ನದೇ ಆದ ಬ್ರ್ಯಾಂಡ್‌ಗಳ ಅಡಿಯಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಒಳಗೊಂಡಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.