ನವದೆಹಲಿ: ರಿಲಯನ್ಸ್ ಫೌಂಡೇಷನ್ (Reliance Foundation) ಹಾಗೂ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು (National Skill Development Corporation NSDC) ಕಾರ್ಯತಂತ್ರ ಪಾಲುದಾರಿಕೆ ವಹಿಸಿದ್ದು, ಐದು ಲಕ್ಷ ಭಾರತೀಯ ಯವಜನರಿಗೆ ಭವಿಷ್ಯಕ್ಕೆ ಅಗತ್ಯವಾದ ಕೌಶಲಗಳೊಂದಿಗೆ ಕೋರ್ಸ್ ಗಳನ್ನು ರೂಪಿಸುವುದಕ್ಕೆ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ(Skill training). ಈ ಸಹಭಾಗಿತ್ವದಲ್ಲಿ ಪಠ್ಯಕ್ರಮದ ಅಭಿವೃದ್ಧಿ ಪಡಿಸಲಾಗುತ್ತದೆ. ಎಜುಟೆಕ್, ಸೈಬರ್ ಸೆಕ್ಯೂರಿಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಪರಿಸರ ಸುಸ್ಥಿರತೆ, ನೀತಿ ವಿಶ್ಲೇಷಣೆ ಹಾಗೂ ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ಕೋರ್ಸ್ ಒಳಗೊಂಡಿದೆ. ಇವುಗಳಲ್ಲಿ ಯುವಜನರ ಸಾಮರ್ಥ್ಯ ಸೃಷ್ಟಿ ಆಗುವ ಕಡೆಗೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ. ಭವಿಷ್ಯದಲ್ಲಿ ಅಗತ್ಯ ಕಂಡುಬರುವ ಕೌಶಲವನ್ನು ಕಲಿಯುವ ನಿಟ್ಟಿನಲ್ಲಿ ಹೊಸ ಉದ್ಯೋಗಗಳ ಬಗ್ಗೆ ಆಸಕ್ತಿ ಇರುವ ಯುವಜನರಲ್ಲಿ ರಿಲಯನ್ಸ್ ಫೌಂಡೇಷನ್ ನ ಡಿಜಿಟಲ್ ಫಾರ್ವರ್ಡ್ ವಿಧಾನದ ನೆರವಿನೊಂದಿಗೆ ಜನಪ್ರಿಯತೆ ಗಳಿಸಬಹುದು ಎಂಬ ನಿರೀಕ್ಷೆ ಇದೆ.
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ, “ಕೌಶಲ ಅಳವಡಿಕೆ, ಮರು ಕೌಶಲ ಮತ್ತು ಕೌಶಲಾಭಿವೃದ್ಧಿ ಮಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವು ತಡೆಯಲು ಸಾಧ್ಯವಾಗದಷ್ಟು ಬೆಳವಣಿಗೆ ಕಾಣಲಿದೆ. ಕೌಶಲ ಪರಿಸರ ವ್ಯವಸ್ಥೆಯಲ್ಲಿನ ವಿವಿಧ ಡಿಜಿಟಲ್ ಉಪಕ್ರಮಗಳು ಎಲ್ಲಿಯೇ ಆದರೂ ಕೌಶಲ, ಯಾವುದೇ ಸಮಯದಲ್ಲಿ ಕೌಶಲ ಮತ್ತು ಎಲ್ಲರಿಗೂ ಕೌಶಲಗಳನ್ನು ಖಾತ್ರಿಪಡಿಸುತ್ತದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ ತಂತ್ರಜ್ಞಾನ ವ್ಯಾಪ್ತಿ, ಪ್ರಮಾಣ ಮತ್ತು ಸುಸ್ಥಿರತೆಯನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಭಾರತೀಯ ಉದ್ಯೋಗಿಗಳು ದೇಶೀಯ ಬೇಡಿಕೆಯನ್ನು ಮಾತ್ರವಲ್ಲದೆ ಜಾಗತಿಕ ಬೇಡಿಕೆಯನ್ನೂ ಪೂರೈಸುತ್ತಾರೆ ಮತ್ತು ಹೊಸ ಮಾನದಂಡಗಳನ್ನು ನಿಗದಿ ಮಾಡುತ್ತಾರೆ,” ಎಂದರು.
ಈ ಕಾರ್ಯತಂತ್ರ ಸಹಭಾಗಿತ್ವದ ಪ್ರಾಮುಖ್ಯವನ್ನು ಒತ್ತಿಹೇಳುತ್ತಾ ಮಾತನಾಡಿದ ರಿಲಯನ್ಸ್ ಫೌಂಡೇಷನ್‌ನ ಸಿಇಒ ಜಗನ್ನಾಥ ಕುಮಾರ್, “ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯನ್ನು ಹೊಂದಿದೆ ಮತ್ತು ಅವರನ್ನು ಭವಿಷ್ಯಕ್ಕೆ ಅಗತ್ಯವಾದ ಸಿದ್ಧ ಕೌಶಲಗಳ ಜತೆಗೆ ಸನ್ನದ್ಧಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ರಿಲಯನ್ಸ್ ಫೌಂಡೇಷನ್‌ನಲ್ಲಿ ನಾವು ನಂಬುವುದೇನೆಂದರೆ ಇದು ಅವರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಮತ್ತು ಅವರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಎನ್ಎಸ್ ಡಿಸಿ ಜತೆಗಿನ ಪಾಲುದಾರಿಕೆ ಯುವಜನರಿಗೆ ಕೌಶಲ ಕಲಿಯುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಪರಿವರ್ತನೆ ಕಾಣುತ್ತಿರುವ ಉದ್ಯೋಗಗಳ ಅಗತ್ಯ ಮತ್ತು ಉದ್ಯೋಗದ ಅವಕಾಶಗಳಿಗೆ ತಕ್ಕಂತೆ ಸಹಾಯ ಆಗುತ್ತದೆ. ರಿಲಯನ್ಸ್ ಫೌಂಡೇಷನ್ ಮತ್ತು ಎನ್ಎಸ್ ಡಿಸಿ ಒಂದೇ ಥರದ ದೃಷ್ಟಿಕೋನ ಮತ್ತು ಉದ್ದೇಶದೊಂದಿಗೆ ಬಂದಿವೆ. ಜತೆಗೆ ನಮ್ಮ ಯುವಜನರಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿಶಿಷ್ಟ ಶಕ್ತಿಯನ್ನು ಒಟ್ಟು ಮಾಡುತ್ತದೆ,” ಎಂದರು.
ಉತ್ತಮ ಗುಣಮಟ್ಟದ ಪಠ್ಯಕ್ರಮ ರೂಪಿಸಿ ಮತ್ತು ಅಭಿವೃದ್ಧಿ ಪಡಿಸಲಾಗುತ್ತದೆ; ವಿದ್ಯಾರ್ಥಿ ಸೇವೆಗಳನ್ನು ಅಳವಡಿಸಲಾಗುತ್ತದೆ; ತರಬೇತುದಾರರ ತರಬೇತಿ; ಸಹಯೋಗಕ್ಕೆ ಬೆಂಬಲ; ಕೃತಕ ಬುದ್ಧಿಮತ್ತೆ ಸಹಾಯದ ಆನ್‌ಲೈನ್ ಮೌಲ್ಯಮಾಪನಗಳು; ಪ್ರಮಾಣಪತ್ರಗಳು ಮತ್ತು ಉದ್ಯಮಕ್ಕೆ ಸೂಕ್ತವಾದ ಪ್ಲೇಸ್ ಮೆಂಟ್ ಈ ಪಾಲುದಾರಿಕೆಯ ಅವಿಭಾಜ್ಯ ಅಂಗವಾಗಿದೆ.
ಅಶಕ್ತರಿಗೆ ಹಾಗೂ ಯುವಜನರಿಗೆ ಅವಕಾಶಗಳ ಜತೆಗೆ ಜೀವನೋಪಾಯಕ್ಕೆ ಮಾರ್ಗ ಸೃಷ್ಟಿಸುವ ಮತ್ತು ವಿಸ್ತರಿಸುವ ಕೆಲಸ ಮಾಡುತ್ತಿದೆ ರಿಲಯನ್ಸ್ ಫೌಂಡೇಶನ್. ಎನ್ಎಸ್ ಡಿಸಿ ಜತೆಗೂಡುತ್ತಿರುವುದರ ಈ ಪಾಲುದಾರಿಕೆಯು ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ.
ಈ ಸುದ್ದಿಯನ್ನೂ ಓದಿ: Reliance Foundation Scholarship: ಪದವಿಪೂರ್ವ ಹಂತದ 5000 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ