Reliance Foundation Scholarship: ಪದವಿಪೂರ್ವ ಹಂತದ 5000 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ‌ - Vistara News

ದೇಶ

Reliance Foundation Scholarship: ಪದವಿಪೂರ್ವ ಹಂತದ 5000 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ‌

Reliance Foundation Scholarship: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವು ನೀಡುವುದಕ್ಕಾಗಿ ಪ್ರತಿ ವರ್ಷವೂ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನವನ್ನು ಒದಗಿಸುತ್ತದೆ.

VISTARANEWS.COM


on

5000 students awarded reliance foundation scholarship
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ಫೌಂಡೇಷನ್‌ನಿಂದ (Reliance Foundation) 27 ರಾಜ್ಯಗಳ 5 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು (Scholarship) ನೀಡಲಾಗುವುದು. ಪದವಿ ಶಿಕ್ಷಣದ ಮೊದಲ ವರ್ಷದಲ್ಲಿರುವ ಈ ವಿದ್ಯಾರ್ಥಿಗಳಿಗೆ ತಮ್ಮ ವ್ಯಾಸಂಗದ ಅವಧಿಯಲ್ಲಿ ಸುಮಾರು 2 ಲಕ್ಷ ರೂಪಾಯಿ ನೀಡಲಾಗುವುದು. ಮುಂದಿನ 10 ವರ್ಷಗಳಲ್ಲಿ 50 ಸಾವಿರ ವಿದ್ಯಾರ್ಥಿವೇತನವನ್ನು ನೀಡುವುದಾಗಿ ರಿಲಯನ್ಸ್ ಫೌಂಡೇಷನ್ 2022ರ ಡಿಸೆಂಬರ್‌ನಲ್ಲಿ ಘೋಷಣೆ ಮಾಡಿತು. ವಿದ್ಯಾರ್ಥಿವೇತನ ನೀಡುವುದರ ಜೊತೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹಳೆಯ ವಿದ್ಯಾರ್ಥಿಗಳ ಜಾಲಕ್ಕೆ ಜೋಡಣೆ ಮಾಡಲಾಗುತ್ತದೆ.

ರಿಲಯನ್ಸ್ ಫೌಂಡೇಷನ್‌ನ ಸಿಇಒ ಜಗನ್ನಾಥ್ ಕುಮಾರ್ ಮಾತನಾಡಿ, “ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನವು ಯುವ ಜನರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಭಾರತದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ನಾವು ಅಭಿನಂದಿಸುತ್ತೇವೆ ಮತ್ತು ಅವರು ತಮ್ಮ ಕನಸುಗಳನ್ನು ನನಸಾಗಿಸುವ ಜೊತೆಗೆ ಭಾರತದ ಪ್ರಗತಿಗೆ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಹೇಳಿದ್ದಾರೆ.

ರಿಲಯನ್ಸ್ ಫೌಂಡೇಷನ್ ನಿಂದ ಪದವಿಪೂರ್ವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯ ಅರ್ಹತೆ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ವ್ಯವಸ್ಥಾಪನೆ, ಕಂಪ್ಯೂಟರ್, ಕಾನೂನು, ಆರ್ಕಿಟೆಕ್ಚರ್ ಮುಂತಾದ ಕ್ಷೇತ್ರಗಳಿಂದ ಈ ವರ್ಷಕ್ಕೆ ಆಯ್ಕೆಯಾಗಿದ್ದಾರೆ. 2022-23ರ ಅವಧಿಗೆ 4,984 ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ಅರ್ಜಿದಾರರಿಂದ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಯಶಸ್ವಿ ವಿದ್ಯಾರ್ಥಿಗಳಲ್ಲಿ ಶೇ 51ರಷ್ಟು ಹುಡುಗಿಯರು, 99 ದಿವ್ಯಾಂಗರು ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಕಟ್ಟುನಿಟ್ಟಾದ ಮಾನದಂಡಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ, ಇವುಗಳಲ್ಲಿ ‘ಅರ್ಹತಾ ಪರೀಕ್ಷೆ’, 12ನೇ ತರಗತಿ (ದ್ವಿತೀಯ ಪಿಯುಸಿ) ಅಂಕಗಳು ಮತ್ತು ಇತರ ಮಾನದಂಡಗಳು ಸೇರಿವೆ.

ಇದನ್ನೂ ಓದಿ: UPSC Result 2022 : ಡ್ರೈವರ್‌ ಮಗ ಐಎಎಸ್‌ ಪರೀಕ್ಷೆ ಬರೆದಿದ್ದು ಅಮ್ಮನಿಗೆ ಗೊತ್ತೇ ಇರಲಿಲ್ಲ!

ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ಬಗ್ಗೆ ನೇರ ಮಾಹಿತಿ ನೀಡಲಾಗುವುದು. ಅರ್ಜಿದಾರರು www.reliancefoundation.org ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು. 2022-23ರ ಅವಧಿಗೆ ಆಯ್ಕೆಯಾದ ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ಕಲಿಕಾರ್ಥಿಗಳ ಪಟ್ಟಿಯನ್ನು ಜುಲೈನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ರಿಲಯನ್ಸ್ ಫೌಂಡೇಷನ್ ಪದವಿಪೂರ್ವ ಸ್ಕಾಲರ್‌ಶಿಪ್ ಸೆಷನ್ 2023-24ಕ್ಕಾಗಿ ಅರ್ಜಿಗಳನ್ನು ಮುಂಬರುವ ತಿಂಗಳಲ್ಲಿ ಕರೆ ಮಾಡಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Amethi Unrest: ಉತ್ತರಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಮತ್ತಿ ಬಿಜೆಪಿ ಕಾರ್ಯಕರ್ತರು ಭಯಬಿದ್ದಿದ್ದಾರೆ. ಸೋಲಿನ ಭೀತಿಗೊಳಗಾಗಿರುವ ಬಿಜೆಪಿ ಪುಂಡಾಟಕ್ಕೆ ಮುಂದಾಗಿದೆ. ಅಮೇಥಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಾಮಾನ್ಯ ಜನರ ಮೇಲೆ ಬಿಜೆಪಿ ಗೂಂಡಾಗಳು ಕೋಲು ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಇಷ್ಟು ದೊಡ್ಡ ಘಟನೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

VISTARANEWS.COM


on

amethi unrest
Koo

ಅಮೇಥಿ: ಉತ್ತರಪ್ರದೇಶ ಅಮೇಥಿ(Amethi Unrest)ಯಲ್ಲಿ ಕಾಂಗ್ರೆಸ್‌ ಕಚೇರಿ(Congress Office)ಯ ಎದುರು ನಿಲ್ಲಿಸಿದ್ದ ಕಾರುಗಳನ್ನು ಕಿಡಿಗೇಡಿಗಳು ಭಾನುವಾರ ತಡರಾತ್ರಿ ಧ್ವಂಸಗೊಳಿಸಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ(BJP workers) ದುಷ್ಕೃತ್ಯ ಎಂದು ಕಾಂಗ್ರೆಸ್‌ ಆರೋಪಿಸಿದೆ. ಬಿಜೆಪಿ ಕಾರ್ಯಕರ್ತರ ಪುಂಡಾಟಿಕೆ ಮತ್ತೆ ಮುಂದುವರೆದಿದ್ದು, ದಾಳಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥ್‌(Supriya Shrinathe) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಪುಂಡಾಟ ಮೆರೆಯುತ್ತಿದ್ದರೂ ಪೊಲೀಸರು ಮೌನವಹಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಉತ್ತರಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಮತ್ತಿ ಬಿಜೆಪಿ ಕಾರ್ಯಕರ್ತರು ಭಯಬಿದ್ದಿದ್ದಾರೆ. ಸೋಲಿನ ಭೀತಿಗೊಳಗಾಗಿರುವ ಬಿಜೆಪಿ ಪುಂಡಾಟಕ್ಕೆ ಮುಂದಾಗಿದೆ. ಅಮೇಥಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಾಮಾನ್ಯ ಜನರ ಮೇಲೆ ಬಿಜೆಪಿ ಗೂಂಡಾಗಳು ಕೋಲು ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತದೆ ಎಂಬುದನ್ನು ಈ ಘಟನೆ ತೋರಿಸುತ್ತದೆ. ಇಷ್ಟು ದೊಡ್ಡ ಘಟನೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಬಿಜೆಪಿಗರೇ ಬದಲಾವಣೆ ಗಾಳಿ ಬೀಸುತ್ತಿದೆ. ವಾಹನಗಳನ್ನು ಧ್ವಂಸಗೊಳಿಸುವುದೊಂದೇ ಸಮಸ್ಯೆಗ ಪರಿಹಾರ ಅಲ್ಲ ಎಂದು ಅವರು ಟಾಂಗ್‌ ಕೊಟ್ಟಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರತಿಕ್ರಿಯಿಸಿದ್ದು, ಘಟನೆ ಕುರಿತು ಗೌರಿಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

ಅಮೇಥಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಆಪ್ತ ಕಿಶೋರಿ ಲಾಲ್‌ ಶರ್ಮಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಥಿಯಿಂದ ರಾಹುಲ್‌ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಬಹಳ ಚರ್ಚೆಯಾಗಿತ್ತು. ಅಮೇಥಿಯಲ್ಲಿ 2004, 2009, 2014ರವರೆಗೆ ರಾಹುಲ್‌ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 2019ರಲ್ಲಿ ಬಿಜೆಪಿ ಸ್ಮೃತಿ ಇರಾನಿ ವಿರುದ್ಧ ಸೋಲನ್ನು ಅನುಭವಿಸಿದ್ದರು. ಈ ಬಾರಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್‌ ಅವರನ್ನು ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿಸಿ ಪಕ್ಷ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

Continue Reading

ದೇಶ

Terrorist attack: ʼಮಗನ ಬರ್ತ್‌ ಡೇ ಪಾರ್ಟಿಗೆ ಪ್ಲ್ಯಾನ್‌ ಮಾಡಿದ್ದ, ಆದರೆ ಈಗ…ʼ ಕಣ್ಣೀರಿಟ್ಟ ಹುತಾತ್ಮ ಯೋಧನ ಕುಟುಂಬ

Terrorist attack: ಮಗನ ಹುಟ್ಟುಹಬ್ಬಕ್ಕೆಂದು ಜೂ.7ರಂದು ವಾಪಾಸಾಗುತ್ತಾರೆಂದು ಆಸೆಯಿಂದ ಕಾಯುತ್ತಿದ್ದ ಪಹಾದೆ ಅವರ ಸಾವು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಅವರು ಸೋದರ ಸಂಬಂಧಿ ಪ್ರತಿಕ್ರಿಯಿಸಿದ್ದು, ಇಡೀ ಕುಟುಂಬ ಪದಾದೆ ಅವರ ಬರುವಿಕೆಗೆ ಕಾಯುತ್ತಿತ್ತು. ಆದರೆ ಅವರು ಹುತಾತ್ಮರಾಗಿರುವ ಸುದ್ದಿ ಕೇಳಿ ಇಡೀ ಕುಟುಂಬ ಆಘಾತದಲ್ಲಿದೆ. ಇಂದು ಪದಾದೆ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು.

VISTARANEWS.COM


on

Terrorist Attack
Koo

ಮಧ್ಯಪ್ರದೇಶ: ಜಮ್ಮು-ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ನಡೆದ ಉಗ್ರರ ದಾಳಿ(Terrorist attack)ಯಲ್ಲಿ ಹುತಾತ್ಮರಾದ ಭಾರತೀಯ ವಾಯುಪಡೆ(IAF)ಯ ಅಧಿಕಾರಿ ವಿಕ್ಕಿ ಪಹಾದೆ(Vikky Pahade) ಮುಂದಿನ ತಿಂಗಳು ತಮ್ಮ ಐದು ವರ್ಷದ ಮಗನ ಹುಟ್ಟುಹಬ್ಬ ಆಚರಣೆಗೆ ಸಕಲ ಸಿದ್ದತೆ ಮಾಡಿದ್ದರಂತೆ. ಮಧ್ಯಪ್ರದೇಶದ ಚಿಂದ್‌ವಾರ ಜಿಲ್ಲೆಯ ಪಹಾದೆ ಉದಾಮ್‌ಪುರದ ಕಮಾಂಡೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇವರ ಜೊತೆ ನಾಲ್ವರು IAF ಯೋಧರು ಗಂಭೀರವಾಗಿ ಗಾಯಗೊಂಡಿದ್ದರು.

ಮಗನ ಹುಟ್ಟುಹಬ್ಬಕ್ಕೆಂದು ಜೂ.7ರಂದು ವಾಪಾಸಾಗುತ್ತಾರೆಂದು ಆಸೆಯಿಂದ ಕಾಯುತ್ತಿದ್ದ ಪಹಾದೆ ಅವರ ಸಾವು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಅವರು ಸೋದರ ಸಂಬಂಧಿ ಪ್ರತಿಕ್ರಿಯಿಸಿದ್ದು, ಇಡೀ ಕುಟುಂಬ ಪದಾದೆ ಅವರ ಬರುವಿಕೆಗೆ ಕಾಯುತ್ತಿತ್ತು. ಆದರೆ ಅವರು ಹುತಾತ್ಮರಾಗಿರುವ ಸುದ್ದಿ ಕೇಳಿ ಇಡೀ ಕುಟುಂಬ ಆಘಾತದಲ್ಲಿದೆ. ಇಂದು ಪದಾದೆ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಪಹಾದೆ ಅವರು 2011ರಲ್ಲಿ ತಂದೆ ಆಸೆಯಂತೆ ವಾಯುಸೇನೆಗೆ ಸೇರಿದ್ದರು. ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪಹಾದೆ ಸಹೋದರನ ಸಹಾಯದಿಂದ ವಿದ್ಯಾಭ್ಯಾಸ ಮುಗಿಸಿ ಕಷ್ಟಪಟ್ಟು ವಾಯುಸೇಗೆ ನೇಮಕಗೊಂಡಿದ್ದ. ನಾವು ಕೆಲವು ವರ್ಷಗಳಿಂದ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಇದೀಗ ಪಹಾದೆ ವಿಧಿವಶರಾಗಿರುವುದು ಇಡೀ ಕುಟುಂಬಕ್ಕೆ ಬಹುದೊಡ್ಡ ಶಾಕ್‌. ಈ ಸಂದರ್ಭದಲ್ಲಿ ಸರ್ಕಾರದ ಬೆಂಬಲ ನಮಗೆ ಅತ್ಯಗತ್ಯ. ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ನಮ್ಮ ಸಹೋದರನ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಸಹಾಯ ಸಿಗಲೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

ಇನ್ನು ಘಟನೆ ಬಗ್ಗೆ IAF ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಪೂಂಚ್‌ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ನಮ್ಮ ವೀರ ಯೋಧ ವಿಕ್ಕಿ ಪಹಾದೆ ಹುತಾತ್ಮರಾಗಿದ್ದಾರೆ. ಅವರ ಶೌರ್ಯ, ಪರಾಕ್ರಮ ಮತ್ತು ಬಲಿದಾನಕ್ಕೆ ಸೆಲ್ಯೂಟ್‌ ಮಾಡುತ್ತೇವೆ. ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದೆ. ಪಹಾದೆ ಅವರ ಪಾರ್ಥೀವ ಶರೀರವನ್ನು IAF ವಿಮಾನದಲ್ಲಿ ನೆರೆಯ ಮಹಾರಾಷ್ಟ್ರದ ನಾಗ್ಪುರಕ್ಕೆ ಕರೆತರಲಾಗುತ್ತದೆ. ಅಲ್ಲಿಂದ ರಸ್ತೆ ಮೂಲಕ ಚಿಂದ್‌ವಾರಕ್ಕೆ ಕರೆ ತರಲಾಗುತ್ತದೆ. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಪಹಾದೇ ಸೇರಿದಂತೆ ಐವರು ಐಎಎಫ್‌ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದರು.

Continue Reading

ದೇಶ

Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

Terrorist Attack: ಪೂಂಚ್‌ನಲ್ಲಿ ನಡೆದ ದಾಳಿ ಬಗ್ಗೆ ಜಲಂಧರ್‌ ಕ್ಷೇತ್ರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಚರಣ್‌ ಪ್ರಿತ್‌ ಸಿಂಗ್‌ ಚನ್ನಿ, ಚುನಾವಣೆ ಬಂದಾಗ ಬಿಜೆಪಿಯವರು ನಡೆಸುವ ಸ್ಟಂಟ್‌ ಇದು. ಇದು ಉದ್ದೇಶಪೂರ್ವವಾಗಿ ನಡೆಸುತ್ತಿರುವ ದಾಳಿ. ಬಿಜೆಪಿಯನ್ನು ಗೆಲ್ಲಿಸಲು ಮಾಡುತ್ತಿರುವ ಸ್ಟಂಟ್‌. ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಜನರ ಶವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜ್‌ ಪ್ರತಾಪ್‌ ಯಾದವ್‌ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದಾರೆ

VISTARANEWS.COM


on

Terrorist attack
Koo

ಚಂಡೀಗಡ: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪೂಂಚ್‌ನಲ್ಲಿ ಎರಡು ದಿನಗಳ ಹಿಂದೆ ಭಾರತೀಯ ವಾಯುಪಡೆ(IAF) ಯೋಧರ ಮೇಲೆ ನಡೆದಿದ್ದ ಭಯೋತ್ಪಾದನಾ ದಾಳಿ(Terrorist Attack)ಯನ್ನು ಪ್ರತಿಪಕ್ಷದ ಇಬ್ಬರು ನಾಯಕರು ಇದೊಂದು ಬಿಜೆಪಿಯ ಚುನಾವಣಾ ಪೂರ್ವ ಸ್ಟಂಟ್‌(Poll Stunt) ಎಂದು ಕರೆಯುವ ಮೂಲಕ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಚರಣ್‌ಪ್ರಿತ್‌ ಸಿಂಗ್‌ ಚನ್ನಿ(Charanprit Singh Channi) ಮತ್ತು ರಾಷ್ಟ್ರೀಯ ಜನತಾದಳದ ತೇಜ್‌ ಪ್ರತಾಪ್‌ ಯಾದವ್‌ ಈ ದಾಳಿ ಯನ್ನು 2019ರಲ್ಲಿ ನಡೆದಿದ್ದ ಪುಲ್ವಾಮಾ ಭಯೋತ್ಪಾದನಾ ದಾಳಿಯ ಜೊತೆ ಹೋಲಿಸಿ ಇದೊಂದು ಬಿಜೆಪಿ ನಡೆಸುತ್ತಿರುವ ಚುನಾವಣಾ ಪೂರ್ವ ಸ್ಟಂಟ್‌ ಆಗಿದ್ದು ಬಿಜೆಪಿ ಇದನ್ನು ತನ್ನ ಗೆಲುವಿಗಾಗಿ ಬಳಸಿಕೊಳ್ಳುತ್ತದೆ ಎಂದು ಟೀಕಿಸಿದ್ದಾರೆ.

ಪ್ರತಿಪಕ್ಷ ನಾಯಕರು ಹೇಳಿದ್ದೇನು?

ಪೂಂಚ್‌ನಲ್ಲಿ ನಡೆದ ದಾಳಿ ಬಗ್ಗೆ ಜಲಂಧರ್‌ ಕ್ಷೇತ್ರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಚರಣ್‌ ಪ್ರಿತ್‌ ಸಿಂಗ್‌ ಚನ್ನಿ, ಚುನಾವಣೆ ಬಂದಾಗ ಬಿಜೆಪಿಯವರು ನಡೆಸುವ ಸ್ಟಂಟ್‌ ಇದು. ಇದು ಉದ್ದೇಶಪೂರ್ವವಾಗಿ ನಡೆಸುತ್ತಿರುವ ದಾಳಿ. ಬಿಜೆಪಿಯನ್ನು ಗೆಲ್ಲಿಸಲು ಮಾಡುತ್ತಿರುವ ಸ್ಟಂಟ್‌. ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಜನರ ಶವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಬಿಹಾರದಲ್ಲಿ ಆರ್‌ಜೆಡಿ ಮುಖಂಡ ತೇಜ್‌ ಪ್ರತಾಪ್‌ ಯಾದವ್‌ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದು, ಪುಲ್ವಾಮಾ ದಾಳಿಯಯನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ಚುನಾವಣೆ ಬಂದಾಗಲೆಲ್ಲಾ ಭಯೋತ್ಪಾದನಾ ದಾಳಿ ನಡೆದೇ ನಡೆಯುತ್ತದೆ

ಬಿಜೆಪಿ ನಾಯಕರು ಕಿಡಿ

ಪ್ರತಿಪಕ್ಷ ನಾಯಕರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಕೆಂಡಾಮಂಡಲವಾಗಿದ್ದು, ವಾಗ್ದಾಳಿ ನಡೆಸಿದೆ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದು, ಇದು ಕಾಂಗ್ರೆಸ್‌ ಮತ್ತು ಅದರ ಜೊತೆಗಿರುವ ಪಕ್ಷಗಳ ಮನಸ್ಥಿತಿಯನ್ನು ತೋರಿಸುತ್ತಿದೆ. ಕಳೆದ 70 ವರ್ಷಗಳಲ್ಲಿ ಸೇನೆಯನ್ನು ಬಲಪಡಿಸುವ ಬದಲು ಅದರ ಬಲವನ್ನು ಕುಗ್ಗಿಸುವ ಕೆಲಸವನ್ನೇ ಕಾಂಗ್ರೆಸ್‌ ಮಾಡಿತ್ತು. ನಾವು ಕಳೆದ 10ವರ್ಷಗಳಲ್ಲಿ ಸೇನೆಗೆ ಬಲ ತುಂಬಿದ್ದೇವೆ. ಪುಲ್ವಾಮಾದ ಬಳಿಕ ನಾವು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ. ಆದರೆ ಇವರು ಸಂಸತ್‌ ದಾಳಿಕೋರನ ಗಲ್ಲುಶಿಕ್ಷೆಯನ್ನು ತಪ್ಪಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದವರು ಜನ ಇದನ್ನು ಎಂದಿಗೂ ಮರೆಯಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.

Continue Reading

ದೇಶ

Narendra Modi: ರಾಮಲಲ್ಲಾನಿಗೆ ಮೋದಿ ಸಾಷ್ಟಾಂಗ ನಮಸ್ಕಾರ; ಇಲ್ಲಿವೆ ಅಯೋಧ್ಯೆ ಭೇಟಿ Photos

Narendra Modi: Narendra Modi: ರಾಮಲಲ್ಲಾ ದರ್ಶನ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋ ಕೈಗೊಳ್ಳುತ್ತಿದ್ದಾರೆ. ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಮೋದಿ ರೋಡ್‌ ಶೋ ಕೈಗೊಂಡರು. ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲೆಡೆ ಜೈಶ್ರೀರಾಮ್‌ ಎಂಬ ಘೋಷಣೆಗಳು ಮೊಳಗಿದವು.

VISTARANEWS.COM


on

Narendra Modi
Koo

ಅಯೋಧ್ಯೆ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ದೇಶಾದ್ಯಂತ ಸಾಲು ರ‍್ಯಾಲಿಗಳ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಗೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಕಳೆದ ಜನವರಿ 22ರಂದು ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದ ನರೇಂದ್ರ ಮೋದಿ ಅವರೀಗ ಮತ್ತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸುವ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ಕಳೆದ ಜನವರಿ 22ರಂದು ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ಮಾಡಿದ ಬಳಿಕ ಮಾಡಿದ ಬಳಿಕ ರಾಮಮಂದಿರಕ್ಕೆ ಮೊದಲ ಬಾರಿ ಭೇಟಿ ನೀಡಿದರು.

ರಾಮನಗರಿ ಅಯೋಧ್ಯೆಯಲ್ಲಿ ಭರ್ಜರಿ ರೋಡ್‌ ಶೋ ಕೈಗೊಳ್ಳುವ ಮೊದಲು ಮೋದಿ ಅವರು ರಾಮಲಲ್ಲಾನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಮಮಂದಿರದ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಯೋಧ್ಯೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ದೌರಾಹ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡರು.

ರಾಮಲಲ್ಲಾ ದರ್ಶನದ ಬಳಿಕ ಮೋದಿ ಅವರು ಅಯೋಧ್ಯೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ರೋಡ್‌ ಶೋ ನಡೆಸಿದರು. ಮಾರ್ಗದುದ್ದಕ್ಕೂ ನೆರೆದಿದ್ದ ಜನ ಹೂಮಳೆ ಸುರಿಸಿ ಅಭಿಮಾನ ಮೆರೆದರು.

ರೋಡ್‌ ಶೋಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕೂಡ ಸಾಥ್‌ ನೀಡಿದ್ದಾರೆ. ಇನ್ನು, ರೋಡ್‌ ಶೋ ಉದ್ದಕ್ಕೂ ಜನ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Narendra Modi: ಮತಬ್ಯಾಂಕ್‌ ಗುತ್ತಿಗೆದಾರರ ಸ್ನೇಹಕ್ಕೆ ಮುಸ್ಲಿಮರು ವಿದಾಯ; ಕಾಂಗ್ರೆಸ್‌ಗೆ ಮೋದಿ ಟಾಂಗ್!

Continue Reading
Advertisement
Mahanati Show Gagana Comedy About Rishi actor
ಕಿರುತೆರೆ3 mins ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ18 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ57 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ59 mins ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್1 hour ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ2 hours ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್2 hours ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ15 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ17 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌