ನವದೆಹಲಿ: ಜಿಯೋ ಪ್ಲಾಟ್ ಫಾರ್ಮ್ಸ್‌ನಿಂದ (Jio Platforms) ಕೃತಕ ಬುದ್ಧಿಮತ್ತೆ ಪ್ಲಾಟ್ ಫಾರ್ಮ್ ಜಿಯೋ ಬ್ರೈನ್ ಎಂಬುದನ್ನು ಸೃಷ್ಟಿ ಮಾಡಿದೆ(Jio Brain AI Platform). ಇದರಿಂದಾಗಿ ಟೆಲಿಕಾಂ ಆಪರೇಟರ್ ಆದ ಜಿಯೋದ ನೆಟ್ ವರ್ಕ್(Reliance Jio), ಎಂಟರ್ ಪ್ರೈಸ್ ನೆಟ್ ವರ್ಕ್, ಅಥವಾ ಯಾವುದೇ ಉದ್ಯಮ ನಿರ್ದಿಷ್ಟ ಮಾಹಿತಿ ತಂತ್ರಜ್ಞಾನ ವಾತಾವರಣಕ್ಕೆ ಮಶೀನ್ ಲರ್ನಿಂಗ್ ಸಾಮರ್ಥ್ಯವನ್ನು ಸಂಯೋಜನೆ ಮಾಡಬಲ್ಲದಾಗಿರುತ್ತದೆ. ಮತ್ತು ಹೀಗೆ ಮಾಡುವುದಕ್ಕೆ ಯಾವುದೇ ವ್ಯಾಪಕವಾದ ನೆಟ್ ವರ್ಕ್/ ಮಾಹಿತಿ ತಂತ್ರಜ್ಞಾನದ ಪರಿವರ್ತನೆಯ ಅಗತ್ಯ ಇರುವುದಿಲ್ಲ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷರಾದಂತಹ ಆಯುಷ್ ಭಟ್ನಾಗರ್ ಸೋಮವಾರ ಲಿಂಕ್ಡ್ ಇನ್ ನಲ್ಲಿ ಹೇಳಿದ್ದಾರೆ.
ನೂರಾರು ಇಂಜಿನಿಯರ್ ಗಳು ಎರಡು ವರ್ಷಗಳ ಕಾಲ ಶ್ರಮಪಟ್ಟು, ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡು, ಆ ನಂತರ ಈ ಪ್ಲಾಟ್ ಫಾರ್ಮ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಭಟ್ನಾಗರ್ ಅವರು ತಿಳಿಸಿದ್ದಾರೆ. ಈ ಪ್ಲಾಟ್ ಫಾರ್ಮ್ ಹೇಗೆ ಅಭಿವೃದ್ಧಿ ಆಗಿದೆ ಅಂದರೆ, 500 ರಷ್ಟು ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ ಫೇಸ್ ಗಳು ಮತ್ತು ಡೇಟಾ ಎಪಿಐಗಳನ್ನು ಒಳಗೊಂಡಿದ್ದು, ಇದರ ಮೂಲಕ ಮಶೀನ್ ಲರ್ನಿಂಗ್ ಸಕ್ರಿಯಗೊಂಡ ಸೇವೆಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.
ಆಯಾ ಸಂಸ್ಥೆಗೆ ನಿರ್ದಿಷ್ಟವಾಗಿ ಬೇಕಾದಂಥದ್ದು ಮತ್ತು ದೊಡ್ಡ ಪ್ರಮಾಣದ ಎಲ್ಎಲ್ಎಂ ಸಾಮರ್ಥ್ಯ ಹೊರತುಪಡಿಸಿ ಉತ್ಕೃಷ್ಟ ಗುಣಮಟ್ಟದ ಎಐ ಫೀಚರ್ ಉಳ್ಳ ಫೋಟೋಗಳಿಗೆ, ವಿಡಿಯೋಗಳಿಗೆ, ಟೆಕ್ಸ್ಟ್, ಡಾಕ್ಯುಮೆಂಟ್ಸ್, ಧ್ವನಿ ಹಾಗೂ ಅಂತರ್ಗತವಾದ ಅಂದರೆ ಇನ್ ಬಿಲ್ಟ್ ಅಲ್ಗೊರಿದಂಗಳು ಸೇವೆಯ ರೀತಿಯಲ್ಲಿ ದೊರೆಯುತ್ತವೆ ಎಂದು ಅವರು ಹೇಳಿದ್ದಾರೆ.
ಅವರು ಹೇಳಿರುವಂತೆ, ಹೊಸ 5ಜಿ ಸೇವೆಗಳನ್ನು ಸೃಷ್ಟಿಸುವುದಕ್ಕೆ, ಉದ್ಯಮಗಳ ಪರಿವರ್ತನೆಗೆ, ನೆಟ್ ವರ್ಕ್ ಗಳ ಸರಿಯಾದ ಬಳಕೆ, 6ಜಿ ಅಭಿವೃದ್ಧಿಗೆ ವೇದಿಕೆ ಸಿದ್ಧಪಡಿಸಲು ಹೀಗೆ ಎಲ್ಲೆಲ್ಲಿ ಮಷೀನ್ ಲರ್ನಿಂಗ್ ಸಾಮರ್ಥ್ಯವನ್ನು ಮುಖ್ಯವಾಗಿ ಬಳಕೆ ಆಗುತ್ತದೆ ಅಲ್ಲೆಲ್ಲ ಜಿಯೋ ಬ್ರೈನ್ ಸಹಾಯ ಮಾಡಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿಯವರು ಕಳೆದ ಆಗಸ್ಟ್ ನಲ್ಲಿ ಈ ಬಗ್ಗೆ ಮಾತನಾಡಿದರು. ನಿರ್ದಿಷ್ಟವಾಗಿ ಭಾರತಕ್ಕೆ ಬೇಕಾದಂಥ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾದರಿಗಳು ಹಾಗೂ ಎಲ್ಲ ಡೊಮೇನ್ ನಲ್ಲಿ ಎಐ ಚಾಲಿತ ಸಲ್ಯೂಷನ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಯೋ ಫ್ಲಾಟ್ ಫಾರ್ಮ್ಸ್ ಮುಂಚೂಣಿಯಲ್ಲಿ ಶ್ರಮಿಸಲಿದೆ. ಭಾರತೀಯ ನಾಗರಿಕರು, ಉದ್ಯಮಗಳು ಹಾಗೂ ಸರ್ಕಾರಕ್ಕೆ ಕೃತಕ ಬುದ್ಧಿಮತ್ತೆಯ ಅನುಕೂಲವನ್ನು ಒದಗಿಸಲಿದೆ ಎಂದು ಹೇಳಿದ್ದರು.
ಜಿಯೋ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯು ಮುಂದಿನ ದಿನಗಳಲ್ಲಿ ಮುಂಚೂಣಿಯಲ್ಲಿ ಇರುತ್ತದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದರು. ಕ್ಲೌಡ್ ಮತ್ತು ಎಡ್ಜ್ ಲೊಕೇಶನ್ ಗಳಲ್ಲಿ ಎರಡು ಸಾವಿರ ಮೆಗಾ ವಾಟ್ ತನಕ ಎಐ ಸಿದ್ಧವಾದ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಜಿಯೋ ಪ್ಲಾಟ್ ಫಾರ್ಮ್ಸ್ ಸೃಷ್ಟಿಸಲಿದೆ ಎಂದು ಹೇಳಿದ್ದರು.
ಜಾಗತಿಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ಲೌಡ್ ಆಧಾರಿತ ಕೃತಕ ಬುದ್ಧಿ ಮತ್ತೆ ಕಂಪ್ಯೂಟ್ ಮೂಲಸೌಕರ್ಯ ಸೃಷ್ಟಿಸಲು ಚಿಪ್ ತಯಾರಕ ಎನ್ ವಿಡಿಯ ಜೊತೆಗೆ 2023ರ ಸೆಪ್ಟೆಂಬರ್ ತಿಂಗಳಲ್ಲಿ ಜಿಯೋ ಪ್ಲಾಟ್ ಫಾರ್ಮ್ಸ್ ಸಹಭಾಗಿತ್ವ ಘೋಷಣೆ ಮಾಡಿತ್ತು.
ಕೃತಕ ಬುದ್ಧಿ ಮತ್ತು ಮೂಲಸೌಕರ್ಯವನ್ನು ಎಐ ಸಿದ್ಧವಾದ ಡೇಟಾ ಸೆಂಟರ್ ಗಳು ನಿರೂಪಿಸಲಿದ್ದು, ಅದು 2,000 ಮೆಗಾ ವಾಟ್ ಗೆ ವಿಸ್ತರಣೆ ಆಗಲಿದೆ. ಅದರ ಜಾರಿ ಹಾಗೂ ಅನುಷ್ಠಾನವನ್ನು ಜಿಯೋ ನಿರ್ವಹಿಸಲಿದೆ.
ಈ ಸುದ್ದಿಯನ್ನೂ ಓದಿ: Reliance Jio: 5ಜಿ ತಂತ್ರಜ್ಞಾನದ ಅನುಭವ ಹೆಚ್ಚಿಸಲು ರಿಲಯನ್ಸ್ ಜಿಯೋ- ಒನ್‌ಪ್ಲಸ್ ಇಂಡಿಯಾ ಪಾಲುದಾರಿಕೆ