ಮುಂಬೈ: ರಿಲಯನ್ಸ್ ರೀಟೇಲ್‌ಗೆ (Reliance Retail) ಸೇರಿದ ಸೌಂದರ್ಯ ರೀಟೇಲ್ ಪ್ಲಾಟ್‌ಫಾರ್ಮ್ ಟಿರಾ (Tira) ಬುಧವಾರ ತನ್ನ ಚರ್ಮರಕ್ಷಣೆ ಬ್ರಾಂಡ್ ಆದ “ಅಕೈಂಡ್” (Akind) ಬಿಡುಗಡೆ ಬಗ್ಗೆ ಘೋಷಣೆ ಮಾಡಿದೆ. ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿರುವ ಟಿರಾ ಮಳಿಗೆಯಲ್ಲಿ ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್, ಅಕೈಂಡ್ ಅನ್ನು ಅನಾವರಣ ಮಾಡಿದರು.
ಚರ್ಮದ ಆರೈಕೆಗೆ ಅಕೈಂಡ್
ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚರ್ಮವು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತದೆ. ವೈಯಕ್ತಿಕವಾಗಿ ಪ್ರತ್ಯೇಕ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ “ಅಕೈಂಡ್” ಅರ್ಥ ಮಾಡಿಕೊಳ್ಳುತ್ತದೆ. ಇನ್ನು ಪ್ರತಿ ವ್ಯಕ್ತಿಯ ಚರ್ಮದ ಅಗತ್ಯಗಳನ್ನು ಅರಿತು, ಆರೈಕೆಯನ್ನು ಸರಳಗೊಳಿಸಲಾಗುತ್ತದೆ. ಈ ನಿಶ್ಚಿತ ಗುರಿಯ ವಿಧಾನದ ಮೂಲಕವಾಗಿ ಈ ಬ್ರ್ಯಾಂಡ್ ಪ್ರತಿ ವ್ಯಕ್ತಿಯ ಚರ್ಮ ಕಾಳಜಿಯ ಗುರಿಯನ್ನು ಸಾಧಿಸಲು ಬಲ ತುಂಬುತ್ತದೆ. ಅಕೈಂಡ್‌ನಲ್ಲಿ ಇರುವಂಥ ಪ್ರತಿ ಸೂತ್ರವು ವಿಶಿಷ್ಟ ಉದ್ದೇಶವನ್ನು ಈಡೇರಿಸಿ, ಚರ್ಮದ ಆರೋಗ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಅದು ಮೂರು ವರ್ಗಗಳ ಅಡಿಯಲ್ಲಿ ಬರುತ್ತದೆ.
3 ಹಂತಗಳಲ್ಲಿ ಚರ್ಮದ ರಕ್ಷಣೆ
ಬಿಲ್ಡ್, ಬ್ಯಾಲೆನ್ಸ್ ಹಾಗೂ ಡಿಫೆನ್ಸ್ ಹೀಗೆ ಮೂರು ಶ್ರೇಣಿಗಳಿವೆ. ಅದರಲ್ಲಿ ಮೊದಲನೆಯ ಶ್ರೇಣಿಯಾದ ಬಿಲ್ಡ್ ಚರ್ಮದ ಅಡೆತಡೆಗಳನ್ನು ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ನಯವಾಗಿ ನಿರ್ವಹಿಸುತ್ತದೆ, ಯಥಾ ಸ್ಥಿತಿಯಲ್ಲಿ ಇರಿಸುತ್ತದೆ, ಅದರ ಫಲಿತವಾಗಿ ಆರೋಗ್ಯಪೂರ್ಣವಾಗಿ, ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ. ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣದಿಂದ ಆಗುವಂಥ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Glasses or Lenses?: ಕನ್ನಡಕವೋ ಕಾಂಟ್ಯಾಕ್ಟ್ ಲೆನ್ಸ್ ಬೇಕೋ? ಇದನ್ನು ಓದಿ, ನೀವೇ ನಿರ್ಧರಿಸಿ!
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಈ ಕುರಿತು ಮಾತನಾಡಿ, “ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ಅಕೈಂಡ್ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈಗ ಮಾಡಿರುವ ಉತ್ಪನ್ನದ ಬಿಡುಗಡೆಯು ಟಿರಾದ ಪಯಣದಲ್ಲಿ ಮಹತ್ವದ ಮೈಲುಗಲ್ಲು ಎನಿಸುತ್ತದೆ. ನಾವು ವಿಸ್ತರಿಸುವುದನ್ನು ಮತ್ತು ವಿಕಸನಗೊಳ್ಳುವುದನ್ನು ಮುಂದುವರಿಸಿದಂತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಅಕೈಂಡ್ ಸಹ-ಸಂಸ್ಥಾಪಕಿ ಮೀರಾ ಕಪೂರ್ ಮಾತನಾಡಿ, ಬಹಳ ಹಿಂದೆಯೇನೂ ಅಲ್ಲ, ನನ್ನದೇ ಚರ್ಮ ರಕ್ಷಣೆಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಚರ್ಮದ ರಕ್ಷಣೆಯ ಈ ಪ್ರಯಾಣವು ನಿಜವಾಗಿಯೂ ಪ್ರಾರಂಭವಾಯಿತು. ಅಕೈಂಡ್ ಶ್ರೇಣಿಯು ಎಚ್ಚರಿಕೆಯಿಂದ, ಪ್ರಯೋಗಗಳಿಂದ ಮತ್ತು ತಪ್ಪುಗಳಿಂದ ಹಾಗೂ ನಿರ್ದಿಷ್ಟ ಸಮಸ್ಯೆಗಳಿಗೆ ಉದ್ದೇಶಿತ ಪರಿಹಾರವಾಗಿ ಕಾರ್ಯನಿರ್ವಹಿಸುವ ಉನ್ನತ-ಪರಿಣಾಮಕಾರಿ ಪದಾರ್ಥಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯೊಂದಿಗೆ ನಿಖರವಾಗಿ ರೂಪಿಸಲಾಗಿದೆ ಮತ್ತು ಕ್ಯುರೇಟೆಡ್ ಬ್ರ್ಯಾಂಡ್‌ಗಳ ಪಾಲಿ ಅಂತಿಮ ತಾಣದಂತೆ ಇರುವ ಟಿರಾ ಮೂಲಕ ನಾವು ತಲುಪುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ. ಇದರಿಂದ ನಮ್ಮ ದೃಷ್ಟಿ ಹೆಚ್ಚು ವ್ಯಾಪಿಸುತ್ತದೆ ಹಾಗೂ ಉದ್ದೇಶವನ್ನು ಜೀವಂತ ಇರಿಸುತ್ತದೆ. ಅಕೈಂಡ್ ಜತೆಗೆ, ಹೇಗೆ ನನಗೆ ಅತ್ಯುತ್ತಮ ಚರ್ಮ ರಕ್ಷಣೆಯ ಮಾರ್ಗ ದೊರೆಯಿತೋ ಅದು ಎಲ್ಲರ ಜತೆಗೂ ಈ ಚರ್ಮರಕ್ಷಣೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಟಿರಾ ಟೂಲ್ಸ್ (Tira Tools) ಯಶಸ್ವಿ ಬಿಡುಗಡೆಯ ನಂತರ, ಖಾಸಗಿ ಲೇಬಲ್ ಅಡಿಯಲ್ಲಿ ಪ್ರೀಮಿಯಂ ಕ್ಯುರೇಟೆಡ್ ಸೌಂದರ್ಯ ಪರಿಕರಗಳು ಮತ್ತು ನೈಲ್ಸ್ ಅವರ್ ವೇ, ರೋಮಾಂಚಕ ಉಗುರು ಬಣ್ಣಗಳು ಮತ್ತು ಕಿಟ್‌ಗಳ ವಿಶೇಷ ಶ್ರೇಣಿಯ ಮೂಲಕವಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ (RRL) ತನ್ನ ನವೀನ ಕೊಡುಗೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದೆ.
ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು
ಅದರ ಮೊದಲ ಚರ್ಮರಕ್ಷಣೆ ಬ್ರಾಂಡ್‌ನ ಸೇರ್ಪಡೆ, ಅಕೈಂಡ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗಗಳಾದ್ಯಂತ ಗ್ರಾಹಕರಿಗೆ ಉತ್ತಮ-ಗುಣಮಟ್ಟದ, ವೈವಿಧ್ಯಮಯ ಮತ್ತು ಟ್ರೆಂಡ್-ಸೆಟ್ಟಿಂಗ್ ಉತ್ಪನ್ನಗಳನ್ನು ಒದಗಿಸುವ ಟಿರಾ ಬದ್ಧತೆಯನ್ನು ಒತ್ತಿ ಹೇಳುತ್ತದೆ.