Site icon Vistara News

Republic Day: ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ದೋಸ್ತಿ! ಮಾಲ್ಡೀವ್ಸ್ ಅಧ್ಯಕ್ಷನಿಗೆ ಬಂತಾ ಬುದ್ಧಿ?

Maldives Election

Maldives election 2024: President Mohamed Muizzu's litmus test amid anti-India policy

ನವದೆಹಲಿ: ಭಾರತ ವಿರೋಧಿ(Anti India), ಚೀನಾ ಸ್ನೇಹಿತ (Friend of China) ಅಧ್ಯಕ್ಷ ಎಂದು ಗುರುತಿಸಿಕೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Maldives President Mohamed Muizzu)ಅವರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಭಾಶಯ ಕೋರಿದ್ದಾರೆ. ಮಾಲ್ಡೀವ್ಸ್ ಮತ್ತು ಭಾರತದ್ದು ಶತಮಾನಗಳ ಸ್ನೇಹ (Centuries of Friendship) ಎಂದು ಹೇಳಿದ್ದಾರೆ. ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಅರ್ಥದಲ್ಲಿ ಸ್ಥಾಪಿಸಲಾದ ಎರಡು ರಾಷ್ಟ್ರಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ(Republic Day).

ಭಾರತದ 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಸಂದೇಶಗಳಲ್ಲಿ, ಅಧ್ಯಕ್ಷ ಮುಯಿಝು ಅವರು ಭಾರತದ 75 ನೇ ಗಣರಾಜ್ಯೋತ್ಸವವನ್ನು ಸ್ಮರಿಸಿದ್ದಾರೆ ಮತ್ತು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಅಧ್ಯಕ್ಷ ಮುಯಿಜು ಅವರು ಸರ್ಕಾರ ಮತ್ತು ಮಾಲ್ಡೀವ್ಸ್ ಜನರಿಂದ ಭಾರತದ ಜನರಿಗೆ ಶುಭ ಹಾರೈಸಿದರು. ಅವರು ಶತಮಾನಗಳ ಸ್ನೇಹ, ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಪ್ರಜ್ಞೆಯಿಂದ ಪೋಷಿಸಿದ ಮಾಲ್ಡೀವ್ಸ್-ಭಾರತದ ಬಾಂಧವ್ಯವನ್ನು ಒತ್ತಿಹೇಳಿದರು. ಮುಂಬರುವ ವರ್ಷಗಳಲ್ಲಿ ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ದೊರೆಯಲಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಮತ್ತು ಭಾರತದ ಸ್ನೇಹಪರ ಜನರಿಗೆ ಹಾರ್ದಿಕ ಶುಭಾಶಯಗಳು. ಮುಂದಿನ ವರ್ಷಗಳಲ್ಲಿ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಸಹಕಾರದ ನಿಕಟ ಬಂಧಗಳು ಪ್ರವರ್ಧಮಾನಕ್ಕೆ ಬರುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಜಮೀರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಇದೊಂದು ಅತ್ಯುತ್ತಮ ಪ್ರವಾಸಿತಾಣವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಕುರಿತು ಮಾಲ್ಡೀವ್ಸ್ ಕೆಲವು ಸಚಿವರು ಮೋದಿ ಅವರು ವಿರುದ್ಧ ನಿಂದನಾತ್ಮಕ ಭಾಷೆ ಬಳಸಿ ಟೀಕಿಸಿದ್ದರು. ಇದರಿಂದಾಗಿ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಈ ಶತಮಾನದ ದೋಸ್ತಿ ಎಂಬ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: ಭಾರತದ ವಿಮಾನ ಬಳಸಲು ಮಾಲ್ಡೀವ್ಸ್‌ ಅಧ್ಯಕ್ಷ ನಕಾರ; 13 ವರ್ಷದ ಬಾಲಕ ಸಾವು

Exit mobile version