ಪುಣೆ: ಓವರ್ ಟೇಕ್ ಮಾಡಲು ಜಾಗ ಕೊಡಲಿಲ್ಲವೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಪುಣೆಯಲ್ಲಿ ನಡೆದಿದೆ(Road Rage Case). ಸ್ವಪ್ನಿಲ್ ಕೇಕ್ರೆ ಎಂಬ ವ್ಯಕ್ತಿ ಸ್ಕೂಟರ್‌ನಲ್ಲಿ ಮಹಿಳೆಯ ಕೂದಲು ಹಿಡಿದು ಎಳೆದಾಡಿ, ಆಕೆ ಮೂಗಿಗೆ ಎರಡು ಬಾರಿ ಪಂಚ್ ಮಾಡಿ ಒಡೆದು ಹಾಕಿದ್ದಾನೆ. ಮಹಿಳೆಯ ಮೂಗಿನಲ್ಲಿ ರಕ್ತ ಬರುವಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್(Viral Video) ಆಗುತ್ತಿದೆ. ಆರೋಪಿ ಸ್ವಪ್ನಿಲ್‌ನನ್ನು ಆತನ ಪತ್ನಿ ಸಮೇತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನು ಗಾಯಾಳು ಮಹಿಳೆಯನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಜೆರ್ಲಿನ್ ಡಿ ಸೋಜಾ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಆಕೆ ವಿಡಿಯೋದಲ್ಲಿ ವಿವರಿಸಿದ್ದು, ತಾವು ತಮ್ಮ ಎರಡು ಮಕ್ಕಳ ಜೊತೆ ಪಶಾನ್ ಬರೇರ್ ಲಿಂಕ್ ರೋಡ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದಿದ್ದಾರೆ. ನಮ್ಮ ಸ್ಕೂಟರ್‌ನ ಹಿಂದೆ ಸುಮಾರು ಎರಡು ಕಿ.ಮೀನಿಂದ ಸ್ಪಪ್ನಿಲ್ ತಮ್ಮ ಕಾರಿನಲ್ಲಿ ವೇಗವಾಗಿ ಹಿಂಬಾಲಿಸುತ್ತಲೇ ಬಂದಿದ್ದಾರೆ. ವೇಗವಾಗಿ ಬಂದು ಅವರ ಕಾರು ನನ್ನ ಸ್ಕೂಟರ್ ಎದುರು ಬಂದು ತಡೆದಿತ್ತು.
ಕೋಪದಲ್ಲಿ ಕಾರಿನಿಂದ ಇಳಿದ ಅವರೂ ಏಕಾಏಕಿ ನನ್ನನ್ನು ಕೂದಲು ಹಿಡಿದು ಎಳದಾಡಿದ್ದಾರೆ. ಸಾಲದೆನ್ನುವುದಕ್ಕೆ ನನ್ನ ಮೂಗಿಗೆ ಹೊಡೆದಿದ್ದಾರೆ. ನನ್ನ ಜೊತೆ ಇದ್ದ ಇಬ್ಬರು ಮಕ್ಕಳ ಬಗ್ಗೆಯೂ ಆತ ಕೇರ್ ಮಾಡಲೇ ಇಲ್ಲ. ಆ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದಿತ್ತು.ಈ ನಗರ ಹೇಗೆ ಸುರಕ್ಷಿತವಾಗಿದೆ. ಜನರು ಏಕೆ ಇಷ್ಟೋಂದು ಕ್ರೂರವಾಗಿ ವರ್ತಿಸುತ್ತಾರೆ? ಕೊನೆಗೆ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ನಮಗೆ ಸಹಾಯ ಮಾಡಿದರು ಎಂದು ಜೆರ್ಲಿನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಕಾರಿನಲ್ಲಿದ್ದ ವ್ಯಕ್ತಿ ವಿನಾ:ಕಾರಣ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಸ್ಕೂಟರ್ ಅವರ ಕಾರಿಗೆ ಡಿಕ್ಕಿ ಹೊಡೆದಿಲ್ಲ. ಅವನು ಎಷ್ಟು ಶಕ್ತಿಶಾಲಿ ಎಂದು ತೋರಿಸಲು ಅವನು ಬಹುಶಃ ಅದನ್ನು ಮಾಡಿದ್ದಾನೆ. ಮಕ್ಕಳಿಗೆ ದೈಹಿಕವಾಗಿ ಗಾಯವಾಗಿಲ್ಲ ಆದರೆ ಅವರು ಹೆದರಿ ಕಿರುಚುತ್ತಿದ್ದರು,” ಎಂದು ಜೆರ್ಲಿನ್ ಪತಿ ಹೇಳಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಪುಣೆಯಲ್ಲಿ ಸಂಭವಿಸಿದ್ದ ಹಿಟ್ ಆಂಡ್ ರನ್ ಕೇಸ್ ಇಡೀ ದೇಶದ ಗಮನ ಸೆಳೆದಿತ್ತು. 24 ವರ್ಷದ ಇಬ್ಬರು ಟೆಕ್ಕಿಗಳ ಮೇಲೆ 17 ವರ್ಷದ ಹುಡುಗನೋರ್ವ ಕುಡಿದ ಮತ್ತಿನಲ್ಲಿ ತನ್ನ ಪೋರ್ಷೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಸದ್ಯ ಆರೋಪಿಗಳು ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಇದನ್ನೂ ಓದಿ: Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ