ಮುಂಬೈ: ದೇಶದ ಪ್ರಮುಖ ಎಫ್ಎಂಸಿಜಿಯ (FMCG) ತಯಾರಿಕಾ ಕಂಪನಿಯಾಗಿರುವ ಹಿಂದೂಸ್ತಾನ್ ಯೂನಿಲಿವರ್ ಲಿ.ಗೆ (Hindustan Unilever Company) ಜಿಎಸ್‌ಟಿ 447.5 ಕೋಟಿ ರೂಪಾಯಿ ದಂಡ ವಿಧಿಸಿದೆ(GST Demands and Fine). ಈ ಸಂಬಂಧ ದಂಡ ಸಹಿತ ಜಿಎಸ್‌ಟಿ ಪಡೆದುಕೊಳ್ಳಲಾಗಿದೆ ಎಂದು ಹಿಂದೂಸ್ತಾನ್ ಯೂನಿಲಿವರ್ ಕಂಪನಿ ಸೋಮವಾರ ಹೇಳಿಕೊಂಡಿದೆ. ಲಕ್ಸ್, ಲೈಫ್ ಬಾಯ್, ಸರ್ಫ್ ಎಕ್ಸೆಲ್, ರಿನ್, ಪಾಂಡ್ಸ್ ಮತ್ತು ಡೋವ್‌ನಂಥ ಉತ್ಪನ್ನಗಳನ್ನು ಹೊಂದಿರುವ ಕಂಪನಿಯು, ಈಗ ನೀಡಲಾಗಿರು ಆದೇಶಗಳ ಕುರಿತು ಮನವಿ ಮಾಡಬಹುದಾಗಿದೆ. ಈ ಕುರಿತು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದೆ.
ಜಿಎಸ್‌ಟಿ ಕ್ರೆಡಿಟ್‌ಗೆ ಅವಕಾಶ ನೀಡದಿರುವುದು, ವಲಸಿಗರಿಗೆ ಪಾವತಿಸಿದ ಭತ್ಯೆಗಳು ಸೇರಿದಂತೆ ವೇತನಗಳು ಇತ್ಯಾದಿ ವಿಷಯಗಳ ಕುರಿತು ಜಿಎಸ್‌ಟಿ ಅಧಿಕಾರಿಗಳ ವಿವಿಧ ವಲಯಗಳಿಂದ ಒಟ್ಟು ಐದು ಆದೇಶಗಳನ್ನು ಕಳೆದ ಶುಕ್ರವಾರ ಮತ್ತು ಶನಿವಾರ ಕಂಪನಿಯು ಸ್ವೀಕರಿಸಿದೆ.
ಜಿಎಸ್‌ಟಿಯಿಂದ ಆರ್ಡರ್‌ಗಳನ್ನು ಕಂಪನಿಯು ಕ್ರಮವಾಗಿ 2023ರ ಡಿಸೆಂಬರ್ 30 ಮತ್ತು ಡಿಸೆಂಬರ್ 31ನೇ ರಂದು ಸ್ವೀಕರಸಿದೆ. ಹಾಗಾಗಿ, ಆರ್ಡರ್ ಸ್ವೀಕರಿಸಿದ ಮಾರನೇ ದಿನವೇ ಅಂದರೆ ಜನವರಿ 1ರಂದು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದು ಮುಂಬೈ ಪೂರ್ವದ ಸಿಜಿಎಸ್‌ಟಿ ಮತ್ತು ಸೆಂಟ್ರಲ್ ಎಕ್ಸೈಸ್ ಜಂಟಿ ಆಯುಕ್ತರಿಂದ 372.82 ಕೋಟಿ ರೂ. ಮೊತ್ತದ ಅನಿವಾಸಿಗಳಿಗೆ ಪಾವತಿಸಿದ ಭತ್ಯೆಗಳು ಮತ್ತು 39.90 ಕೋಟಿ ರೂ. ಮೊತ್ತದ ದಂಡವನ್ನು ಒಳಗೊಂಡಂತೆ ಸಂಬಳದ ಮೇಲಿನ ತೆರಿಗೆ ನೋಟಿಸ್ ನೀಡಲಾಗಿದೆ.
ಹೆಚ್ಚುವರಿಯಾಗಿ ಬೆಂಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿಯ ಉಪ ಆಯುಕ್ತರು 8.90 ಕೋಟಿ ರೂ.ಗಳಷ್ಟು ಹೆಚ್ಚುವರಿ ಜಿಎಸ್‌ಟಿ ಕ್ರೆಡಿಟ್ ಪಡೆದಿರುವ ಮತ್ತು 89.08 ಲಕ್ಷ ರೂ. ಮೊತ್ತದ ದಂಡದ ಆಧಾರದ ಮೇಲೆ ಜಿಎಸ್‌ಟಿ ನೋಟಿಸ್ ಅನ್ನು ನೀಡಲಾಗಿದೆ ಎಂದು ಕಂಪನಿ ಹೇಳಿದೆ.
ಈ ಸುದ್ದಿಯನ್ನೂ ಓದಿ: GST Collection : ಡಿಸೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ