Site icon Vistara News

Sabarmati Express: ಮತ್ತೊಂದು ರೈಲು ದುರಂತ; ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್‌

Sabarmati Express

ಲಕ್ನೋ: ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ ಇಂದು (ಆಗಸ್ಟ್‌ 17) ಸಬರ್‌ಮತಿ ಎಕ್ಸ್‌ಪ್ರೆಸ್‌ (Sabarmati Express) ರೈಲಿನ ಕನಿಷ್ಠ 20 ಬೋಗಿಳು ಹಳಿ ತಪ್ಪಿವೆ (Train Derail). ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವಾರಣಾಸಿಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 19168) ರೈಲಿನ 20 ಬೋಗಿಗಳು ಶನಿವಾರ ಮುಂಜಾನೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯಲ್ಲಿ ಬಿದ್ದಿದ್ದ ಬಂಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ʼʼಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯ ಉಂಟಾಗಿಲ್ಲ. ಪ್ರಯಾಣಿಕರನ್ನು ಕಾನ್ಪುರಕ್ಕೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆ ಸ್ಥಳಕ್ಕೆ ಬಸ್ಸುಗಳನ್ನು ಕಳುಹಿಸಿದೆ ಮತ್ತು ಅಲ್ಲಿಂದ ಅಹಮದಾಬಾದ್‌ಗೆ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಮತ್ತು ಆ್ಯಂಬುಲೆನ್ಸ್‌ ಧಾವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಹೇಳಿದ್ದೇನು?

ರೈಲ್ವೆ ರೈಲು ವಿಚಾರಣಾ ವೆಬ್‌ಸೈಟ್‌ ಪ್ರಕಾರ, ಶನಿವಾರ ಮುಂಜಾನೆ 2:29ಕ್ಕೆ ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ಹೊರಟ ಸುಮಾರು 30 ನಿಮಿಷಗಳ ನಂತರ ರೈಲು ಹಳಿ ತಪ್ಪಿದೆ. ಬಂಡೆಯೊಂದು ಎಂಜಿನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇಂಟೆಲಿಜೆನ್ಸ್‌ ಬ್ಯೂರೋ (Intelligence Bureau) ಮತ್ತು ಉತ್ತರ ಪ್ರದೇಶ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಘಟನಾ ಸ್ಥಳದಲ್ಲಿನ ಪುರಾವೆಗಳನ್ನು ಸಂರಕ್ಷಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಹಲವು ರೈಲು ಸಂಚಾರ ರದ್ದು

ಘಟನೆಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.

ರದ್ದಾರ ರೈಲುಗಳು

ತಾತ್ಕಾಲಿಕವಾಗಿ ರದ್ದಾದ ರೈಲುಗಳು

ಬದಲಿ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳು

ಹೆಲ್ಪ್‌ಲೈನ್‌ ನಂಬರ್‌

ಪ್ರಯಾಗ್ ರಾಜ್ – 0532-2408128, 0532-2407353, ಕಾನ್ಪುರ – 0512-2323018, 0512-2323015, ಮಿರ್ಜಾಪುರ – 054422200097, ಇಟಾವಾ – 7525001249, ತುಂಡ್ಲಾ – 7392959702, ಅಹಮದಾಬಾದ್ – 07922113977, ವಾರಣಾಸಿ ನಗರ – 8303994411, ಗೋರಖ್ಪುರ – 0551-2208088.

ಇದನ್ನೂ ಓದಿ: Train Accident : ಎಕ್ಸ್​ಪ್ರೆಸ್​ ರೈಲು ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ

Exit mobile version