Sabarmati Express: ಮತ್ತೊಂದು ರೈಲು ದುರಂತ; ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್‌ - Vistara News

ದೇಶ

Sabarmati Express: ಮತ್ತೊಂದು ರೈಲು ದುರಂತ; ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್‌

Sabarmati Express: ಉತ್ತರ ಪ್ರದೇಶದಲ್ಲಿ ಇಂದು (ಆಗಸ್ಟ್‌ 17) ಸಬರ್‌ಮತಿ ಎಕ್ಸ್‌ಪ್ರೆಸ್‌ ರೈಲಿನ ಕನಿಷ್ಠ 20 ಬೋಗಿಳು ಹಳಿ ತಪ್ಪಿವೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ವಾರಣಾಸಿಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 19168) ರೈಲಿನ 20 ಬೋಗಿಗಳು ಶನಿವಾರ ಮುಂಜಾನೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Sabarmati Express
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಉತ್ತರ ಪ್ರದೇಶದಲ್ಲಿ ಇಂದು (ಆಗಸ್ಟ್‌ 17) ಸಬರ್‌ಮತಿ ಎಕ್ಸ್‌ಪ್ರೆಸ್‌ (Sabarmati Express) ರೈಲಿನ ಕನಿಷ್ಠ 20 ಬೋಗಿಳು ಹಳಿ ತಪ್ಪಿವೆ (Train Derail). ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವಾರಣಾಸಿಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 19168) ರೈಲಿನ 20 ಬೋಗಿಗಳು ಶನಿವಾರ ಮುಂಜಾನೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯಲ್ಲಿ ಬಿದ್ದಿದ್ದ ಬಂಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ʼʼಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯ ಉಂಟಾಗಿಲ್ಲ. ಪ್ರಯಾಣಿಕರನ್ನು ಕಾನ್ಪುರಕ್ಕೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆ ಸ್ಥಳಕ್ಕೆ ಬಸ್ಸುಗಳನ್ನು ಕಳುಹಿಸಿದೆ ಮತ್ತು ಅಲ್ಲಿಂದ ಅಹಮದಾಬಾದ್‌ಗೆ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಮತ್ತು ಆ್ಯಂಬುಲೆನ್ಸ್‌ ಧಾವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಹೇಳಿದ್ದೇನು?

ರೈಲ್ವೆ ರೈಲು ವಿಚಾರಣಾ ವೆಬ್‌ಸೈಟ್‌ ಪ್ರಕಾರ, ಶನಿವಾರ ಮುಂಜಾನೆ 2:29ಕ್ಕೆ ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ಹೊರಟ ಸುಮಾರು 30 ನಿಮಿಷಗಳ ನಂತರ ರೈಲು ಹಳಿ ತಪ್ಪಿದೆ. ಬಂಡೆಯೊಂದು ಎಂಜಿನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇಂಟೆಲಿಜೆನ್ಸ್‌ ಬ್ಯೂರೋ (Intelligence Bureau) ಮತ್ತು ಉತ್ತರ ಪ್ರದೇಶ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಘಟನಾ ಸ್ಥಳದಲ್ಲಿನ ಪುರಾವೆಗಳನ್ನು ಸಂರಕ್ಷಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಹಲವು ರೈಲು ಸಂಚಾರ ರದ್ದು

ಘಟನೆಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ.

ರದ್ದಾರ ರೈಲುಗಳು

  • ರೈಲು ಸಂಖ್ಯೆ 01823/01824 (ವಾರಣಾಸಿ ಜಂಕ್ಷನ್ – ಲಕ್ನೋ ಜಂಕ್ಷನ್)
  • ರೈಲು 11109 (ವಾರಣಾಸಿ ಜಂಕ್ಷನ್ – ಲಖಿಂಪುರ)
  • ರೈಲು 14110/14109 (ಕಾನ್ಪುರ – ಚಿತ್ರಕೂಟಂ)

ತಾತ್ಕಾಲಿಕವಾಗಿ ರದ್ದಾದ ರೈಲುಗಳು

  • ರೈಲು ಸಂಖ್ಯೆ 04143 (ಕುರೆಗಾಂವ್ – ಕಾನ್ಪುರ)
  • ರೈಲು ಸಂಖ್ಯೆ 04144 (ಕಾನ್ಪುರ – ಕುರೆಗಾಂವ್)

ಬದಲಿ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳು

  • ರೈಲು ಸಂಖ್ಯೆ 05326 (ಲೋಕಮಾನ್ಯ ತಿಲಕ್ – ಗೋರಖ್ಪುರ)
  • ರೈಲು 20180/20181 (ಕಾನ್ಪುರ – ಮೀರತ್)
  • ರೈಲು ಸಂಖ್ಯೆ 01814/01813 (ಕಾನ್ಪುರ – ವಾರಣಾಸಿ ಜಂಕ್ಷನ್)
  • ರೈಲು ಸಂಖ್ಯೆ 01887/01888 (ಗ್ವಾಲಿಯರ್ – ಇಟಾವಾ)
  • ರೈಲು ಸಂಖ್ಯೆ 01889/01890 (ಗ್ವಾಲಿಯರ್ – ಬಿನಾ)
  • ರೈಲು ಸಂಖ್ಯೆ 11110 (ಲಖಿಂಪುರ – ವಾರಣಾಸಿ ಜಂಕ್ಷನ್)
  • ರೈಲು ಸಂಖ್ಯೆ 22537 (ಗೋರಖ್ಪುರ – ಲೋಕಮಾನ್ಯ ತಿಲಕ್)
  • ರೈಲು 20104 (ಗೋರಖ್ಪುರ – ಲೋಕಮಾನ್ಯ ತಿಲಕ್)

ಹೆಲ್ಪ್‌ಲೈನ್‌ ನಂಬರ್‌

ಪ್ರಯಾಗ್ ರಾಜ್ – 0532-2408128, 0532-2407353, ಕಾನ್ಪುರ – 0512-2323018, 0512-2323015, ಮಿರ್ಜಾಪುರ – 054422200097, ಇಟಾವಾ – 7525001249, ತುಂಡ್ಲಾ – 7392959702, ಅಹಮದಾಬಾದ್ – 07922113977, ವಾರಣಾಸಿ ನಗರ – 8303994411, ಗೋರಖ್ಪುರ – 0551-2208088.

ಇದನ್ನೂ ಓದಿ: Train Accident : ಎಕ್ಸ್​ಪ್ರೆಸ್​ ರೈಲು ಅಪಘಾತ; ನಾಲ್ವರ ಸಾವು, ಹಲವರಿಗೆ ಗಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kolkata Doctor Murder Case: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ಏನಿರುತ್ತೆ? ಏನಿರಲ್ಲ?

Kolkata Doctor Murder Case: ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಇಂದು ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಹಿಂತೆಗೆದುಕೊಳ್ಳುವುದಾಗಿ ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ.

VISTARANEWS.COM


on

Kolkata Doctor Murder Case
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯ (Kolkata Doctor Murder Case) ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಭಾರತೀಯ ವೈದ್ಯಕೀಯ ಸಂಘ (Indian Medical Association) ಇಂದು (ಆಗಸ್ಟ್ 17) ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಫತ್ರೆಗಳ ಓಪಿಡಿ ಬಂದ್ ಇರಲಿದ್ದು, ಎಮರ್ಜೆನ್ಸಿ ರೋಗಿಗಳಿಗೆ ಮಾತ್ರ ಚಿಕಿತ್ಸೆ ಸಿಗಲಿದೆ‌. ಎಲ್ಲ ವೈದ್ಯರು ಓಪಿಡಿ ಸೇವೆಗಳಿಗೆ ಹಾಜರಾಗದೆ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಸರ್ಕಾರಿ ವೈದ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ.

ಐಎಂಎ ಮುಂದಿಟ್ಟ 5 ಬೇಡಿಕೆ

ಭಾರತೀಯ ವೈದ್ಯಕೀಯ ಸಂಘ ಶುಕ್ರವಾರ 5 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದೆ.

  • ವೈದ್ಯರ ಕರ್ತವ್ಯದ ಅವಧಿ ಮತ್ತು ಅವರು ಜೀವನ ರೀತಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಆರ್‌ಜಿ ಕರ್‌ ಆಸ್ಪತ್ರೆಯ ಸಂತ್ರಸ್ತೆ 36 ಗಂಟೆಗಳ ಕಾಲ ಕರ್ತವ್ಯ ನಿರ್ಶಿವಹಿಸಿದ್ದರು ಮತ್ತು ವಿಶ್ರಾಂತಿ ಪಡೆಯಲು ಅವರಿಗೆ ಸುರಕ್ಷಿತ ಸ್ಥಳಗಳ ಕೊರತೆ ಇತ್ತು. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.
  • 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ 2023ರಲ್ಲಿ ಮಾಡಿದ ತಿದ್ದುಪಡಿಗಳನ್ನು 2019ರ ಉದ್ದೇಶಿತ ಆಸ್ಪತ್ರೆ ಸಂರಕ್ಷಣಾ ಮಸೂದೆಗೆ ಸೇರಿಸಬೇಕು. ಇದರಿಂದ 25 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನಿಗೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಕೋವಿಡ್ -19ರ ಸಮಯದಲ್ಲಿ ಜಾರಿಗೆ ತಂದ ಸುಗ್ರೀವಾಜ್ಞೆ ಈ ಪರಿಸ್ಥಿತಿಯಲ್ಲಿ ಸೂಕ್ತವಾಗಿದೆ ಎಂದು ಐಎಂಎ ಸೂಚಿಸಿದೆ.
  • ಆರ್‌ಜಿ ಕರ್ ಆಸ್ಪತ್ರೆಯ ಆವರಣದಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಜತೆಗೆ ನಿರ್ದಿಷ್ಟ ಕಾಲಮಿತಿಯೊಳಗೆ ನಿಖರವಾದ ಮತ್ತು ವೃತ್ತಿಪರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಐಎಂಎ ಒತ್ತಾಯಿಸಿದೆ.
  • ಎಲ್ಲ ಆಸ್ಪತ್ರೆಗಳ ಭದ್ರತಾ ಪ್ರೋಟೋಕಾಲ್‌ಗಳನ್ನು ವಿಮಾನ ನಿಲ್ದಾಣದಲ್ಲಿರುವಂತೆ ಜಾರಿಗೊಳಿಸಬೇಕು. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಬೇಕು. ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿಯ ನಿಯೋಜನೆ ಮುಂತಾದ ಅಗತ್ಯ ಕ್ರಮ ಜಾರಿಯಾಗಬೇಕು ಎಂದು ಮನವಿ ಮಾಡಲಾಗಿದೆ.
  • ಕ್ರೌರ್ಯಕ್ಕೆ ಅನುಗುಣವಾಗಿ ದುಃಖಿತ ಕುಟುಂಬಕ್ಕೆ ಸೂಕ್ತ ಮತ್ತು ಘನತೆಯ ಪರಿಹಾರವನ್ನು ಒದಗಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಬೇಡಿಕೆ ಇಟ್ಟಿದೆ.

ಇಂದು ಲಭ್ಯವಿರುವ ಸೇವೆಗಳು

ತುರ್ತು ಚಿಕಿತ್ಸೆ, ಮೆಡಿಕಲ್ ಶಾಪ್ಸ್, ಇನ್ ಪೇಷೆಂಟ್ ಸೇವೆ, ಹೆರಿಗೆ ಮತ್ತು ಎಮರ್ಜೆನ್ಸಿ ಸರ್ಜರಿ.

ಲಭ್ಯವಿಲ್ಲದ ಸೇವೆಗಳು

ಓಪಿಡಿ, ಡಯಾಲಿಸಿಸ್, ಕ್ಲಿನಿಕ್ ಸೇವೆ, ಮಕ್ಕಳ ಓಪಿಡಿ, ಡೆಂಟಲ್ ಸರ್ವಿಸ್.

ಇದನ್ನೂ ಓದಿ: Kolkata Doctor murder case: ವೈದ್ಯೆ ಕೊಲೆ ಕೇಸ್‌; ಪ್ರತಿಭಟನಾಕಾರರ ಮೇಲೆ ವಾಹನ ಹರಿಸಲು ಪೊಲೀಸ್‌ ಯತ್ನ?

Continue Reading

ಪ್ರಮುಖ ಸುದ್ದಿ

PM Narendra Modi: ಬೆಂಗಳೂರಿಗೆ ಸಿಹಿ ಸುದ್ದಿ; ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಅಸ್ತು; ರಾಜ್ಯಕ್ಕೆ ಪ್ರಧಾನಿ ಮೋದಿ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

PM Narendra Modi: ಉದ್ದೇಶಿತ ಕಾರಿಡಾರ್‌-1ರಡಿ ಜೆ.ಪಿ.ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳದ ಕೆಂಪಾಪುರದವರೆಗೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಕಾರಿಡಾರ್‌-2ರಡಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.50 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ.

VISTARANEWS.COM


on

namma metro pm narendra modi
Koo

ಬೆಂಗಳೂರು: ʼನಮ್ಮ ಮೆಟ್ರೋ’ದ (Namma Metro) ಬಹುನಿರೀಕ್ಷಿತ ಮೂರನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ (Central Cabinet) ಶುಕ್ರವಾರ ಅನುಮೋದನೆ ನೀಡಿದೆ. ಈ ಮೂರನೇ ಹಂತದಲ್ಲಿ ಹೊಸದಾಗಿ ಎರಡು ಕಾರಿಡಾರ್‌ಗಳಲ್ಲಿ 44.65 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೀಡಿರುವ ವರಮಹಾಲಕ್ಷ್ಮಿ (Varamahalkshmi Festival) ಹಬ್ಬದ ಕೊಡುಗೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಸಂತಸ ವ್ಯಕ್ತಪಡಿಸಿದ್ದಾರೆ.

“ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ ನಾನು ಭಾವಿಸಿದ್ದೇನೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಮಾನ್ಯ ಪ್ರಧಾನಿಗಳಿಗೆ ನನ್ನ ಧನ್ಯವಾದಗಳು” ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿಸಿ ಮೋಹನ್, ತೇಜಸ್ವಿ ಸೂರ್ಯ ಕೂಡ ಇದನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಲ್ಲಿಂದ ಎಲ್ಲಿವರೆಗೆ ಮೆಟ್ರೋ ಮಾರ್ಗ?

ಉದ್ದೇಶಿತ ಕಾರಿಡಾರ್‌-1ರಡಿ ಜೆ.ಪಿ.ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳದ ಕೆಂಪಾಪುರದವರೆಗೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 21 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ಮೆಟ್ರೋ ಮಾರ್ಗವು ಕೆ.ಆರ್‌.ಪುರ-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದೊಂದಿಗೆ ಸಂಪರ್ಕ ಬೆಸೆಯಲಿದೆ. ಅಲ್ಲದೆ, ಹಸಿರು ಬಣ್ಣದ ಮಾರ್ಗಕ್ಕೂ ಸಂಪರ್ಕ ಬೆಸೆಯಲಿದೆ. ಸಾರಕ್ಕಿ ಜಂಕ್ಷನ್‌ನಲ್ಲೂ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಗಳಿವೆ.

ಕಾರಿಡಾರ್‌-2ರಡಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.50 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಇರಲಿವೆ. ಈ ಮೆಟ್ರೋ ಯೋಜನೆಯು ಉಪನಗರ ರೈಲು, ಬಸ್‌ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ 9 ಕಡೆ ಸಂಪರ್ಕ ಕಲ್ಪಿಸುತ್ತದೆ. ಸುಮನಹಳ್ಳಿ ಜಂಕ್ಷನ್‌ನಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ.

ಮೆಟ್ರೋ 3ನೇ ಹಂತದ ಯೋಜನೆಗೆ 15,611 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, 2029ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮೆಟ್ರೋ 3ನೇ ಹಂತದಡಿ 44.65 ಕಿ.ಮೀ. ಮಾರ್ಗ ನಿರ್ಮಾಣದೊಂದಿಗೆ ಬೆಂಗಳೂರಿನ ಮೆಟ್ರೋ ಜಾಲವು 220.20 ಕಿ.ಮೀ.ಗೆ ವಿಸ್ತರಿಸಲ್ಪಡಲಿದೆ. ಈ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಕೊಟ್ಟಿದೆ.

ಕಾರಿಡಾರ್‌-1ರಲ್ಲಿನ ನಿಲ್ದಾಣಗಳು

ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಜೆ.ಪಿ.ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್‌ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ಮೈಸೂರು ರಸ್ತೆಯ ನಾಗರಬಾವಿ ವೃತ್ತ, ವಿನಾಯಕ ಲೇಔಟ್‌, ಅಂಬೇಡ್ಕರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜು, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಜಂಕ್ಷನ್‌, ಚೌಡೇಶ್ವರಿನಗರ, ಫ್ರೀಡಂ ಫೈಟರ್‌ ಕ್ರಾಸ್‌, ಕಂಠೀರವ ಸ್ಟುಡಿಯೋ, ಪೀಣ್ಯ, ಬಾಹುಬಲಿನಗರ, ಬಿಇಎಲ್‌ ವೃತ್ತ, ಪಟೇಲಪ್ಪ ಲೇಔಟ್‌, ಹೆಬ್ಬಾಳ, ಕೆಂಪಾಪುರ.

ಕಾರಿಡಾರ್‌-2ರಲ್ಲಿನ ನಿಲ್ದಾಣಗಳು

ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನಹಳ್ಳಿ ಜಂಕ್ಷನ್‌, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್‌ ಗೇಟ್‌, ಕಡಬಗೆರೆ.

ಇದನ್ನೂ ಓದಿ: Namma Metro: ಹಸಿರು ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Continue Reading

ಅಂಕಣ

ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

ರಾಜಮಾರ್ಗ ಅಂಕಣ: ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು.

VISTARANEWS.COM


on

ರಾಜಮಾರ್ಗ ಅಂಕಣ kantara Movie
Koo

75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.

ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.

75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!

ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?

Rishab Shetty cinema Journey before Kantara
Kantara Movie Massive Set Constructed In Kundapura

ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!

1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!

ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.

2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!

ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.

ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.

Kantara Movie Massive Set Constructed In Kundapura
Kantara Movie Massive Set Constructed In Kundapura

ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!

ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.

ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.

ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!

ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.

ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

Continue Reading

ದೇಶ

Pralhad Joshi: ಭಾರತ-ಅರ್ಜೆಂಟೀನಾ; ಆಹಾರ ಹಂಚಿಕೆ ಹೆಚ್ಚಳ ಕುರಿತು ಸಚಿವ ಪ್ರಲ್ಹಾದ್‌ ಜೋಶಿ ಚರ್ಚೆ

Pralhad Joshi: ಆಹಾರ ಹಂಚಿಕೆ ಪ್ರಮಾಣ ಹೆಚ್ಚಿಸುವ ಸಂಬಂಧ ಭಾರತ ಮತ್ತು ಅರ್ಜೆಂಟೀನಾ ಮಧ್ಯೆ ಪರಸ್ಪರ ಚರ್ಚೆ ನಡೆದಿದೆ. ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿದೆ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

Pralhad Joshi
Koo

ನವದೆಹಲಿ: ಆಹಾರ ಹಂಚಿಕೆ ಪ್ರಮಾಣ ಹೆಚ್ಚಿಸುವ ಸಂಬಂಧ ಭಾರತ ಮತ್ತು ಅರ್ಜೆಂಟೀನಾ ಮಧ್ಯೆ ಪರಸ್ಪರ ಚರ್ಚೆ ನಡೆದಿದೆ. ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿದೆ.

ಉಭಯ ರಾಷ್ಟ್ರಗಳಲ್ಲೂ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಗೆ ಬೇಕಿರುವ ಅಗತ್ಯ ಸಹಕಾರ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: Government Employees Sports: ಆ.17ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ-ಅರ್ಜೆಂಟೀನಾ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ, ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಅವರು ಟ್ವೀಟ್ ಮಾಡಿದ್ದಾರೆ.

Continue Reading
Advertisement
Pro Kabaddi 2024
ಕ್ರೀಡೆ3 mins ago

Pro Kabaddi 2024: ಈ ಬಾರಿ ಬೆಂಗಳೂರು ಬುಲ್ಸ್​ ತಂಡ ಹೇಗಿದೆ?

Stree 2 Box Office Day 2 Shraddha Kapoor-Rajkummar Rao Film Creates History
ಬಾಲಿವುಡ್12 mins ago

Stree 2 Box Office: ಗೆದ್ದು ಬೀಗಿದ ‘ಸ್ತ್ರೀ 2’ ಚಿತ್ರ; ಎರಡೇ ದಿನದಲ್ಲಿ 100 ಕೋಟಿ ರೂ. ಭರ್ಜರಿ ಕಲೆಕ್ಷನ್‌!

tipper road accident
ಬೆಂಗಳೂರು16 mins ago

Road Accident: ಟಿಪ್ಪರ್‌ ರೂಪದಲ್ಲಿ ಬಂದ ಯಮ, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಜ್ಜುಗುಜ್ಜು

car death udupi news
ಉಡುಪಿ41 mins ago

Udupi News: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

Robin Uthappa
ಕ್ರೀಡೆ47 mins ago

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Kolkata Doctor Murder Case
ದೇಶ51 mins ago

Kolkata Doctor Murder Case: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ಏನಿರುತ್ತೆ? ಏನಿರಲ್ಲ?

Kannada New Movie Langoti man trailer Out d k shivakumar invite
ಸ್ಯಾಂಡಲ್ ವುಡ್1 hour ago

Kannada New Movie: ಆಗಸ್ಟ್ 19 ರಂದು ʻಲಂಗೋಟಿ ಮ್ಯಾನ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ; ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ಕೊಟ್ಟ ಚಿತ್ರತಂಡ!

doctors strike opd close
ಕರ್ನಾಟಕ1 hour ago

Doctors Strike: ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ

Raksha Bandhan 2024
Latest1 hour ago

Raksha Bandhan 2024: ರಕ್ಷಾ ಬಂಧನದ ಹಿನ್ನೆಲೆ ಏನು? ರಾಖಿ ಕಟ್ಟಲು ಯಾವುದು ಶುಭ ಮುಹೂರ್ತ?

Sabarmati Express
ದೇಶ2 hours ago

Sabarmati Express: ಮತ್ತೊಂದು ರೈಲು ದುರಂತ; ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌