Site icon Vistara News

Sajjan Singh Verma: ಪ್ರಧಾನಿ ಮೋದಿ ನಿವಾಸಕ್ಕೂ ಜನ ನುಗ್ಗುತ್ತಾರೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ನ ಮತ್ತೊರ್ವ ನಾಯಕ-ವಿಡಿಯೋ ಇದೆ

Sajjan singh Verma

ಭೋಪಾಲ್‌: ನೆರೆಯ ಬಾಂಗ್ಲಾದೇಶದಂತೆಯೇ(Bangladesh Unrest) ಭಾರತದಲ್ಲಿಯೂ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್(Salman Khurshid) ಅವರ ಹೇಳಿಕೆ ಸದ್ಯ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್‌ ನಾಯಕನೂ ಅಂತಹದ್ದೇ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಮಧ್ಯಪ್ರದೇಶದ ಹಿರಿಯ ನಾಯಕ ಸಜ್ಜನ್‌ ಸಿಂಗ್‌ ವರ್ಮಾ(Sajjan Singh Verma) ಈ ಹೇಳಿಕೆ ನೀಡಿದ್ದು, ಬಾಂಗ್ಲಾದೇಶದಂತೆ ಭಾರತದಲ್ಲೂ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮನೆಗೆ ಜನ ನುಗ್ಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಅಲ್ಲಿನ ಪ್ರಧಾನಿ ಶೇಖ್‌ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ಇಡೀ ಮನೆಯನ್ನೇ ಪುಡಿಗಟ್ಟಿ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿಸ ಸಜ್ಜನ್‌ ಸಿಂಗ್‌, ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶೇಖ್ ಹಸೀನಾ ಮತ್ತು ಅವರ ಸರ್ಕಾರದ ತಪ್ಪು ನೀತಿಗಳಿಂದಾಗಿ ನೆರೆಯ ದೇಶದಲ್ಲಿ ನಾಗರಿಕ ಅಶಾಂತಿಯ ಸಂದರ್ಭದಲ್ಲಿ ಬಾಂಗ್ಲಾದೇಶದ ಜನರು ಪ್ರಧಾನಿಯವರ ಅಧಿಕೃತ ನಿವಾಸವನ್ನು ಪ್ರವೇಶಿಸಿದ್ದಾರೆ.

ನರೇಂದ್ರ ಮೋದಿಯವರನ್ನು ನೆನಪಿಟ್ಟುಕೊಳ್ಳಿ. ನಿಮ್ಮ ತಪ್ಪು ನೀತಿಗಳಿಂದ ಮುಂದೊಂದು ದಿನ ಜನರು ಪ್ರಧಾನಿಯವರ ನಿವಾಸವನ್ನು ಪ್ರವೇಶಿಸುತ್ತಾರೆ ಮತ್ತು ಅದನ್ನು ಆಕ್ರಮಿಸಿಕೊಳ್ಳುತ್ತಾರೆ. ಇದು ಇತ್ತೀಚೆಗೆ ಶ್ರೀಲಂಕಾದಲ್ಲಿ (2022 ರಲ್ಲಿ) ಸಂಭವಿಸಿದೆ, ಅಲ್ಲಿ ಜನರು ಪ್ರಧಾನಿ (ಅಧ್ಯಕ್ಷರ) ಮನೆಗೆ ಪ್ರವೇಶಿಸಿದರು, ಇದೀಗ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ. ಇನ್ನೇನಿದ್ದರೂ ಭಾರತದ ಸರದಿ ಎಂದು ಸಜ್ಜನ್‌ ಸಿಂಗ್‌ ವರ್ಮಾ ಹೇಳಿದ್ದಾರೆ.

ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಭಾರತದಲ್ಲಿಯೂ ಸಂಭವಿಸಬಹುದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಮಂಗಳವಾರ ವಿವಾದವನ್ನು ಹುಟ್ಟು ಹಾಕಿದ್ದಾರೆ. ಶಿಕ್ಷಣ ತಜ್ಞ ಮುಜಿಬುರ್ ರೆಹಮಾನ್ ಅವರ ‘ಶಿಕ್ವಾ-ಎ-ಹಿಂದ್: ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯನ್ ಮುಸ್ಲಿಮ್ಸ್’ (Shikwa-e-Hind: The Political Future of Indian Muslims) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಮೇಲ್ನೋಟಕ್ಕೆ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಕಾಣಿಸಬಹುದು. ಇಲ್ಲಿ ಎಲ್ಲವೂ ಸರಿ ಇದೆ ಎಂದು ಎಲ್ಲರೂ ಭಾವಿಸಬಹುದು. 2024ರ ಗೆಲುವು ಅತ್ಯಲ್ಪ ಎಂದು ನಂಬುವವರಿದ್ದಾರೆ. ಇನ್ನೂ ಹೆಚ್ಚಿನದು ಆಗಬೇಕಿದೆ. ಆದರೆ ವಾಸ್ತವ ಬೇರೆಯದೇ ಇದೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ್ದು, ನಮ್ಮ ದೇಶದಲ್ಲಿಯೂ ನಡೆಯಬಹುದುʼʼ ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದದ್ದರು.

ಇದನ್ನೂ ಓದಿ: Shehzad Poonawalla: ಬಾಂಗ್ಲಾದಂತೆ ಭಾರತದಲ್ಲಿಯೂ ಹಿಂಸಾಚಾರ; ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ಕಿಡಿ

Exit mobile version