Site icon Vistara News

Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್‌ ಬಿಡುಗಡೆ; ವಿಶೇಷತೆ ಏನೇನು?

Samsung Launches 2 new foldable phones

ಬೆಂಗಳೂರು: ಸ್ಯಾಮ್‌ಸಂಗ್ ತನ್ನ ಹೊಸ ಫೋಲ್ಡೆಬಲ್ ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್‌ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಅದರ ಜತೆಗೆ ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಅನ್ನು ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಬಿಡುಗಡೆ (Samsung Galaxy) ಮಾಡಿದೆ.

ಹೊಸ ಗ್ಯಾಲಕ್ಸಿ ಝಡ್ ಸರಣಿಯನ್ನು ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಐಯ ಹೊಸ ಅಧ್ಯಾಯವನ್ನು ಆರಂಭಿಸುತ್ತಿದೆ. ಹೊಸ ಗ್ಯಾಲಕ್ಸಿ ಎಐ ಅನ್ನು ಬಹುಮುಖವಾದ ಮತ್ತು ಹೊಂದಿಕೊಳ್ಳುವ ಗುಣವನ್ನು ಬಳಸಿಕೊಂಡು ವಿನ್ಯಾಸಗೊಳಿಸಿರುವುದರಿಂದ ಗ್ರಾಹಕರಿಗೆ ವಿಶಿಷ್ಟವಾದ ಮೊಬೈಲ್ ಅನುಭವವನ್ನು ಒದಗಿಸಲಿದೆ. ಗ್ಯಾಲಕ್ಸಿ ಎಐ ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ತೀವ್ರಗೊಳಿಸಲು ಮತ್ತು ವೇಗಗೊಳಿಸಲು ಶಕ್ತಿಯುತವಾದ, ಬುದ್ಧಿವಂತ ಮತ್ತು ಬಾಳಿಕೆ ಬರುವ ಫೋಲ್ಡೆಬಲ್ ಸ್ಮಾರ್ಟ್ ಫೋನ್ ಅನುಭವವನ್ನು ಒದಗಿಸುತ್ತದೆ.

ಈ ಕುರಿತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ ಮತ್ತು ಮೊಬೈಲ್ ಎಕ್ಸ್‌ಪೀರಿಯನ್ಸ್ ಬ್ಯುಸಿನೆಸ್ ಮುಖ್ಯಸ್ಥ ಟಿಎಂ ರೋಹ್ ಮಾತನಾಡಿ, “ಸ್ಯಾಮ್‌ಸಂಗ್‌ನ ಬಹುಕಾಲದ ನಾವಿನ್ಯತಾ ಇತಿಹಾಸವು ನಮಗೆ ಫೋಲ್ಡೆಬಲ್ ಸಾಮರ್ಥ್ಯವನ್ನು (ಫಾರ್ಮ್ ಫ್ಯಾಕ್ಟರ್) ಒದಗಿಸಿ ಮೊಬೈಲ್ ಎಐಯ ಹೊಸ ಅಧ್ಯಾಯವನ್ನು ಆರಂಭಿಸಲು ಅನುವು ಮಾಡಿಕೊಡುವ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರಸ್ತುತ ಈ ಎರಡು ಪೂರಕ ತಂತ್ರಜ್ಞಾನಗಳನ್ನು ಸಂಯೋಜಿಸಲು ಮತ್ತು ಪ್ರಪಂಚದಾದ್ಯಂತ ಇರುವ ಬಳಕೆದಾರರಿಗೆ ಹೊಸ ಸಾಧ್ಯತೆಗಳನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ ನೋಡಿ

ನಮ್ಮ ಫೋಲ್ಡೆಬಲ್‌ ಫೋನ್‌ಗಳು ಪ್ರತಿಯೊಬ್ಬ ಬಳಕೆದಾರರ ವಿಭಿನ್ನ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಈಗ ಗ್ಯಾಲಕ್ಸಿ ಎಐ ಶಕ್ತಿಯಿಂದ ಮತ್ತಷ್ಟು ಶಕ್ತಿಯುತವಾಗಿದ್ದು, ಸ್ಯಾಮ್‌ಸಂಗ್ ಹಿಂದೆಂದೂ ಇಲ್ಲದ ಹೊಸ ರೀತಿಯ ಅನುಭವವನ್ನು ನೀಡುತ್ತದೆ ಎಂದು ಹೇಳಿದರು.

ಗ್ಯಾಲಕ್ಸಿ ಝಡ್ ಫೋಲ್ಡ್‌6 ಮತ್ತು ಝಡ್ ಫ್ಲಿಪ್5 ಗಳು ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದ್ದು, ಆರಾಮವಾಗಿ ಕೊಂಡೊಯ್ಯಲು ಸಾಧ್ಯವಾಗುವಂತೆ ರೂಪುಗೊಳಿಸಲಾಗಿದೆ. ಸಿಮ್ಮೆಟ್ರಿಕಲ್ (ಎರಡು ಭಾಗಗಳಿದ್ದು, ಎರಡೂ ಒಂದೇ ಥರ ಇರುತ್ತವೆ) ವಿನ್ಯಾಸವನ್ನು ಹೊಂದಿರುವ, ನೇರವಾದ ಎಡ್ಜ್ ಅನ್ನು ಹೊಂದಿರುವ ಈ ಫೋನ್‌ಗಳು ಕಲಾತ್ಮಕವಾಗಿ ನಯವಾದ ಫಿನಿಶಿಂಗ್ ಹೊಂದಿವೆ. ಗ್ಯಾಲಕ್ಸಿ ಝಡ್ ಫೋಲ್ಡ್‌6 ಹೊಸತಾದ ಸ್ವಲ್ಪ ಹೆಚ್ಚು ಕವರ್ ಸ್ಕ್ರೀನ್‌ನ ರೇಶಿಯೋ ಹೊಂದಿದ್ದು, ಹೆಚ್ಚು ನೈಸರ್ಗಿಕವಾದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ. ಹೆಚ್ಚು ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ. ಆದ್ದರಿಂದ ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯಾಗಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್‌6 ಮತ್ತು ಫ್ಲಿಪ್6 ಎರಡನ್ನೂ ಗ್ಯಾಲಕ್ಸಿ ಸ್ನ್ಯಾಪ್ ಡ್ರಾಗನ್ 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್‌ ಬಳಸಿಕೊಂಡು ಸಜ್ಜುಗೊಳಿಸಲಾಗಿದೆ. ಇದು ಇನ್ನೂ ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮ ಕ್ಲಾಸ್ ಇನ್ ಸಿಪಿಯು, ಜಿಪಿಯು ಮತ್ತು ಎನ್ ಪಿ ಯು ಕಾರ್ಯಕ್ಷಮತೆ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್‌6 ಫೋನ್ ನೋಟ್ ಅಸಿಸ್ಟ್, ಪಿಡಿಎಫ್ ಓವರ್‌ಲೇ ಟ್ರಾನ್ಸ್‌ಲೇಷನ್, ಕಂಪೋಸರ್, ಸ್ಕೆಚ್ ಟು ಇಮೇಜ್ ಮತ್ತು ಇಂಟರ್ ಪ್ರಿಟರ್ ಮುಂತಾದ ಎಐ- ಚಾಲಿತ ಫೀಚರ್ ಗಳು ಮತ್ತು ಟೂಲ್ ಗಳ ಶ್ರೇಣಿಯನ್ನು ಒದಗಿಸುತ್ತದೆ. ಅಲ್ಲದೇ ಲಾರ್ಜ್ ಸ್ಕ್ರೀನ್ ಅನ್ನು ಹೊಂದಿದ್ದು, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಗ್ಯಾಲಕ್ಸಿ ಝಡ್ ಫೋಲ್ಡ್‌ 6 ಅಪ್‌ಗ್ರೇಡ್ ಮಾಡಿದ ತೀವ್ರತರದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಅದರ ಶಕ್ತಿಯುತ ಚಿಪ್‌ಸೆಟ್ ಮತ್ತು 1.6x ದೊಡ್ಡ ವೇಪರ್ ಚೇಂಬರ್‌ ಕಾರಣದಿಂದಾಗಿ ಇನ್ನೂ ಹೆಚ್ಚಿನ ಕಾರ್ಯಕ್ಷಮತೆಯನ್ನು ಒದಗಿಸಿ ಹೆಚ್ಚು ಕಾಲ ಆಟವಾಡುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: Bengaluru News: ಭವಿಷ್ಯಕ್ಕೆ ಬೇಕಾಗಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎನ್‌ಎಸ್‌ಡಿಸಿ, ವಿಟಿಯು ನಡುವೆ ಸಹಭಾಗಿತ್ವ

3.4 ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್ ವಿಂಡೋ ಅನ್ನು ಇನ್ನೂ ಹೆಚ್ಚಳಗೊಳಿಸಲಾಗಿದೆ. ಆ ಮೂಲಕ ಮೊಬೈಲನ್ನು ತೆರೆಯುವ ಅಗತ್ಯವಿಲ್ಲದೆಯೇ ಎಐ ಅಸಿಸ್ಟೆಡ್ ಅಂದರೆ ಎಐ ನೆರವಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಜತೆಗೆ ಫ್ಲೆಕ್ಸ್ ವಿಂಡೋ ಎಂದಿಗಿಂತಲೂ ಹೆಚ್ಚಿನ ವಿಜೆಟ್‌ಗಳನ್ನು ನೀಡುತ್ತದೆ ಮತ್ತು ಏಕಕಾಲದಲ್ಲಿ ಬಹು ವಿಜೆಟ್‌ಗಳಿಂದ ಮಾಹಿತಿಯನ್ನು ಪರಿಶೀಲಿಸಲು ನಿಮಗೆ ಅನುವು ಮಾಡಿ ಕೊಡುತ್ತದೆ.

ಹೊಸ 50ಎಂಪಿ ವೈಡ್ ಮತ್ತು 12ಎಂಪಿ ಅಲ್ಟ್ರಾ ವೈಡ್ ಸೆನ್ಸರ್‌ಗಳು ಸ್ಪಷ್ಟವಾದ ಮತ್ತು ಸೊಗಸಾದ ವಿವರಗಳನ್ನು ಕಾಣಿಸುವ ಅಪ್ ಗ್ರೇಡೆಡ್ ಕ್ಯಾಮೆರಾ ಅನುಭವ ಒದಗಿಸುತ್ತದೆ. 50ಎಂಪಿ ಸೆನ್ಸರ್ ನಾಯ್ಸ್ ಫ್ರೀ ಫೋಟೋ ಅಂದ್ರೆ ಸ್ಪಷ್ಟವಾದ ಫೋಟೋಗಾಗಿ 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. ಅತ್ಯಾಧುನಿಕ ಶೂಟಿಂಗ್ ಅನುಭವ ಪಡೆಯಲು 10x ಜೂಮ್‌ ಮೂಲಕ ಎಐ ಜೂಮ್ ಕೂಡ ಲಭ್ಯವಿದೆ.

ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕಾರಣದಿಂದ ಬ್ಯಾಟರಿ ಬಾಳಿಕೆಯ ಬಗ್ಗೆ ಚಿಂತಿಸದೆ ನೀವು ದೀರ್ಘಾವಧಿಯ ಸಮಯದವರೆಗೆ ಈ ಗ್ಯಾಲಕ್ಸಿ ಝಡ್ ಫ್ಲಿಪ್6ನ ಎಲ್ಲಾ ಸೃಜನಾತ್ಮಕ ಮತ್ತು ಕಸ್ಟಮೈಸ್ ಮಾಡಬಹುದಾದ ಫೀಚರ್‌ಗಳನ್ನು ಬಳಸುವುದನ್ನು ಮುಂದುವರಿಸಬಹುದಾಗಿದೆ.

ಇದನ್ನೂ ಓದಿ: KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್

ಗ್ಯಾಲಕ್ಸಿ ಝಡ್ ಫೋಲ್ಡ್‌6 ಮತ್ತು ಫ್ಲಿಪ್6 ಅನ್ನು ಸ್ಯಾಮ್‌ಸಂಗ್ ನಾಕ್ಸ್ ಮೂಲಕ ಸುರಕ್ಷಿತಗೊಳಿಸಲಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿಯ ಡಿಫೆನ್ಸ್-ಗ್ರೇಡ್, ಬಹು- ಪದರದ ಭದ್ರತಾ ಪ್ಲಾಟ್‌ಫಾರ್ಮ್ ಬಹುಮುಖ್ಯ ಮಾಹಿತಿಗಳನ್ನು ರಕ್ಷಿಸಲು ಮತ್ತು ಎಂಡ್-ಟು-ಎಂಡ್ ಹಾರ್ಡ್‌ವೇರ್, ನೈಜ ಸಮಯದ ಥ್ರೆಟ್ ಡಿಟೆಕ್ಷನ್ ಮತ್ತು ಸಹಯೋಗದ ರಕ್ಷಣೆ ಒದಗಿಸುವುದರ ಮೂಲಕ ಎಲ್ಲಾ ರೀತಿಯ ರಕ್ಷಣೆ ಒದಗಿಸುವಂತೆ ನಿರ್ಮಿತಗೊಂಡಿದೆ.

ಗ್ಯಾಲಕ್ಸಿ ಬಡ್ಸ್3 ಸರಣಿ

ಗ್ಯಾಲಕ್ಸಿ ಎಐ ಮೂಲಕ ಕನೆಕ್ಟೆಡ್ ಅನುಭವ ಮತ್ತಷ್ಟು ತೀವ್ರ ಗ್ಯಾಲಕ್ಸಿ ಎಐ ಶಕ್ತಿಯನ್ನು ಹೊಂದಿರುವ ಗ್ಯಾಲಕ್ಸಿ ಬಡ್ಸ್3 ಸರಣಿಯು ಹೊಸ ರೀತಿಯ ಸಂವಹನ ಅನುಭವವನ್ನು ಒದಗಿಸುತ್ತದೆ. ಗ್ಯಾಲಕ್ಸಿ ಬಡ್ಸ್3 ಸರಣಿಯು ಆರಾಮದಾಯಕವಾಗಿ ಫಿಟ್ ಆಗುವ ಸಂತೋಷದಾಯಕವಾದ ಹೊಸ ಕಂಪ್ಯೂಟೇಶನಲ್ ವಿನ್ಯಾಸದೊಂದಿಗೆ ಬರುತ್ತದೆ. ಪ್ರೀಮಿಯಂ ಬ್ಲೇಡ್ ವಿನ್ಯಾಸವು ಬ್ಲೇಡ್ ಲೈಟ್‌ಗಳ ಜತೆಗೆ ಪೂರಕವಾದ ಅಲ್ಟ್ರಾ-ಸ್ಲೀಕ್ ಮತ್ತು ಆಧುನಿಕ ಶೈಲಿಯೊಂದಿಗೆ ಸ್ಟೈಲ್ ಅನ್ನು ಮೆಚ್ಚುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ರೂಪುಗೊಂಡಿದೆ.

Exit mobile version