Site icon Vistara News

Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

Samsung launches 2024 QLED 4K premium TV series

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಇಂದು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಭಾರತದಲ್ಲಿ ರೂ.65990 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. 2024 ಕ್ಯೂಎಲ್ಇಡಿ 4ಕೆ ಟಿವಿ ಉತ್ಪನ್ನ ಶ್ರೇಣಿಯು ಪ್ರೀಮಿಯಂ ಫೀಚರ್‌ಗಳ ಸಮೃದ್ಧಿಯನ್ನು ಹೊಂದಿದೆ.

2024 ಕ್ಯೂಎಲ್ಇಡಿ 4ಕೆ ಟಿವಿಯು 55”, 65” ಮತ್ತು 75” ಈ ಮೂರು ಗಾತ್ರಗಳಲ್ಲಿ ದೊರೆಯಲಿದ್ದು, ಈ ಉತ್ಪನ್ನ ಶ್ರೇಣಿಯು ಇಂದಿನಿಂದ Samsung.com ಮತ್ತು Amazon.in ಸೇರಿದಂತೆ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ವಿಶೇಷತೆ

ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಎಂಬ ಪ್ರೊಸೆಸರ್ ನಿಂದ ಚಾಲಿತವಾಗಿರುವ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಹೊಂದಿದ್ದು, ಜತೆಗೆ 100% ಬಣ್ಣಗಳ ಶ್ರೀಮಂತಿಕೆಯ ಅನುಭವವನ್ನು ಒದಗಿಸುತ್ತದೆ. ಇದಲ್ಲದೇ, ಈ ಸರಣಿಯು 4ಕೆ ಅಪ್‌ಸ್ಕೇಲಿಂಗ್‌ ತಂತ್ರಜ್ಞಾನ ಹೊಂದಿದ್ದು, ಈ ತಂತ್ರಜ್ಞಾನವು ಬಳಕೆದಾರರು ಹೈ ರೆಸಲ್ಯೂಶನ್ 4ಕೆ ಗುಣಮಟ್ಟದಲ್ಲಿ ದೃಶ್ಯಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಕ್ಯೂ-ಸಿಂಫನಿ ಸೌಂಡ್ ಟೆಕ್ನಾಲಜಿ, ಡ್ಯುಯಲ್ ಎಲ್‌ಇಡಿ, ಗೇಮಿಂಗ್‌ಗಾಗಿ ಮೋಷನ್ ಎಕ್ಸಲರೇಟರ್ ಮತ್ತು ಪ್ಯಾಂಟೋನ್ ಮೌಲ್ಯೀಕರಣ, ಅತ್ಯುತ್ತಮ ಬಣ್ಣದ ಸಂಯೋಜನೆ ಇತ್ಯಾದಿ ಹೊಂದಿರುವ ಈ ಟಿವಿಯು ಗ್ರಾಹಕರ ವಿಶ್ವಾಸಾರ್ಹ ಉತ್ಪನ್ನವಾಗಿ ಮೂಡಿಬಂದಿದೆ.

ಇದನ್ನೂ ಓದಿ: Kannada New Movie: ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ ʻಸಂಭವಾಮಿ ಯುಗೇ ಯುಗೇʼ: ಇದೇ ಜೂನ್‌ 21ಕ್ಕೆ ತೆರೆಗೆ!

ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಈ ಕುರಿತು ಮಾತನಾಡಿ, ದೃಶ್ಯ ವೀಕ್ಷಣಾ ಕ್ರಮವು ಕಳೆದ ಎರಡು ವರ್ಷಗಳಲ್ಲಿ ಬಹಳ ವೇಗದ ಬದಲಾವಣೆ ಕಂಡಿದೆ. ಬಳಕೆದಾರರು ಹೆಚ್ಚು ತೀವ್ರ ಅನುಭವ ಒದಗಿಸುವ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವವನ್ನು ಹೊಂದಲು ಬಯಸುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯನ್ನು ಪ್ರಾರಂಭಿಸಿದ್ದೇವೆ. ಈ ಮೂಲಕ ಪ್ರೀಮಿಯಂ ಮತ್ತು ಉನ್ನತ ಮಟ್ಟದ ವೀಕ್ಷಣೆಯ ಅನುಭವ ಒದಗಿಸುವ ನಿಟ್ಟಿನಲ್ಲಿ ಒಂದು ಮೆಟ್ಟಿಲು ಮೇಲೆ ಹೋಗಿದ್ದೇವೆ.

ಈ ಹೊಸ ಟಿವಿ ಸರಣಿಯು 4ಕೆ ಅಪ್‌ಸ್ಕೇಲಿಂಗ್ ಫೀಚರ್ ಹೊಂದಿದ್ದು, ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. ಪರದೆಯ ಮೇಲೆ ಕಾಣಿಸುವ ದೃಶ್ಯಗಳನ್ನು 4ಕೆ ಗುಣಮಟ್ಟಕ್ಕೆ ಬದಲಿಸುತ್ತದೆ. ಈ ಮೂಲಕ ಗ್ರಾಹಕರ ಒಟ್ಟಾರೆ ವೀಕ್ಷಣೆಯ ಅನುಭವವನ್ನು ಹಲವು ಹಂತಗಳಲ್ಲಿ ಉನ್ನತೀಕರಿಸುತ್ತದೆ ಎಂದು ತಿಳಿಸಿದ್ದಾರೆ.

ಕ್ವಾಂಟಮ್ ತಂತ್ರಜ್ಞಾನ

ಉದ್ಯಮದ ಮಾನದಂಡಗಳನ್ನು ಮೀರಿ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಕ್ವಾಂಟಮ್ ಪ್ರೊಸೆಸರ್ ಲೈಟ್ 4ಕೆ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಈ ಪ್ರೊಸೆಸರ್ ವೀಕ್ಷಣೆ ಮತ್ತು ಆಡಿಯೋ ಗುಣಮಟ್ಟವನ್ನು ಉತ್ತಮಗೊಳಿಸುವ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಹೆಚ್ಚುವರಿಯಾಗಿ ಕ್ವಾಂಟಮ್ ಎಚ್‌ಡಿಆರ್‌ ಫೀಚರ್ ಇದ್ದು, ಸಿನಿಮೀಯ ಪ್ರಮಾಣದಲ್ಲಿ ವಿಸ್ತಾರ ವ್ಯಾಪ್ತಿಯ ಕಾಂಟ್ರಾಸ್ಟ್ ಅನ್ನು ಒದಗಿಸುತ್ತದೆ. ಕ್ವಾಂಟಮ್ ಡಾಟ್ ತಂತ್ರಜ್ಞಾನವು ಜೀವನದ ತರಹವೇ ದೃಶ್ಯಗಳನ್ನು ಕಾಣಿಸುವ ಸೌಲಭ್ಯ ಒದಗಿಸುತ್ತಿದ್ದು, ಬಣ್ಣಗಳ ಒಂದು ಬಿಲಿಯನ್ ಶೇಡ್‌ಗಳನ್ನು ಕಾಣಿಸುತ್ತದೆ. ಜತೆಗೆ ವಿವಿಧ ಹಂತದ ಬ್ರೈಟ್‌ನೆಸ್‌ನಲ್ಲಿಯೂ ಬಣ್ಣಗಳನ್ನು ನಿಖರವಾಗಿ ಪ್ರದರ್ಶಿಸುತ್ತದೆ.

ಇದನ್ನೂ ಓದಿ: UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

ಅತ್ಯುತ್ತಮ ದೃಶ್ಯ ಗುಣಮಟ್ಟ

ಅಂತಿಮ 4ಕೆ ಅಪ್‌ಸ್ಕೇಲಿಂಗ್ ಫೀಚರ್ ಗ್ರಾಹಕರಿಗೆ ಉತ್ತಮವಾದ ದೃಶ್ಯ ಅನುಭವವನ್ನು ನೀಡುತ್ತದೆ. ಬಳಕೆದಾರರು ವೀಕ್ಷಿಸುತ್ತಿರುವ ಕಂಟೆಂಟ್‌ನ ರೆಸಲ್ಯೂಶನ್ ಏನೇ ಆಗಿದ್ದರೂ ಟಿವಿಗಳು ಸ್ವಯಂಚಾಲಿತವಾಗಿ ಟೋನಿಯರ್-4ಕೆ ಮಟ್ಟವನ್ನು ಅಪ್‌ಗ್ರೇಡ್ ಮಾಡುವುದರಿಂದ ಅವರು 4ಕೆ ಗುಣಮಟ್ಟದ ದೃಶ್ಯಗಳನ್ನು ಆನಂದಿಸಬಹುದು. ಮೇಲಾಗಿ, ಪ್ಯಾಂಟೋನ್ ಮೌಲ್ಯೀಕರಣವು 2000ಕ್ಕೂ ಬಣ್ಣಗಳನ್ನು ಹೆಚ್ಚು ನಿಖರವಾಗಿ ತೋರಿಸುತ್ತದೆ ಮತ್ತು ಡ್ಯುಯಲ್ ಎಲ್ಇಡಿಯ ನವೀನ ಬ್ಯಾಕ್‌ಲೈಟಿಂಗ್ ತಂತ್ರಜ್ಞಾನವು ವೀಕ್ಷಿಸುತ್ತಿರುವ ದೃಶ್ಯದ ಪ್ರಕಾರಕ್ಕೆ ತಕ್ಕಂತೆ ಬ್ಯಾಕ್‌ಲೈಟ್ ಬಣ್ಣದ ಟೋನ್ ಅನ್ನು ಬದಲಿಸುವ ಮೂಲಕ ಉತ್ತಮ ಕಾಂಟ್ರಾಸ್ಟ್ ನ ದೃಶ್ಯವನ್ನು ವೀಕ್ಷಿಸುವ ಸೌಕರ್ಯ ಒದಗಿಸುತ್ತದೆ.

ಭವಿಷ್ಯಕ್ಕೆ ತಕ್ಕ ವಿನ್ಯಾಸ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಏರ್‌ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸವು ನಿಮ್ಮ ಟಿವಿಯು ಗೋಡೆಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಈ ಟಿವಿಯ ಸ್ಕ್ರೀನ್ ಮತ್ತು ಅಡ್ಜಸ್ಟೇಬಲ್ ಸ್ಟ್ಯಾಂಡ್ ಹೋಮ್ ಎಂಟರ್ಟೈನ್ಮೆಂಟ್ ಸೆಟಪ್ ಅನ್ನು ಬಹಳ ಅದ್ಭುತವಾಗಿ ಕಾಣಿಸುತ್ತದೆ. ಈ ಟಿವಿ ಸರಣಿಯು ಸೋಲಾರ್‌ಸೆಲ್ ರಿಮೋಟ್‌ ಅನ್ನು ಹೊಂದಿದ್ದು, ಸುಸ್ಥಿರತೆಯ ಗುಣವನ್ನು ಹೊಂದಿದೆ. ಈ ರಿಮೋಟ್ ಬ್ಯಾಟರಿಗಳ ಅಗತ್ಯವಿಲ್ಲದೆ ಕಾರ್ಯನಿರ್ವಹಿಸುತ್ತದೆ. ಜತೆಗೆ, ಎಐ ಎನರ್ಜಿ ಮೋಡ್ ವಿದ್ಯುತ್ ಉಳಿತಾಯ ಪ್ರಯೋಜನವನ್ನು ಒದಗಿಸುತ್ತದೆ.

ಅತ್ಯುತ್ತಮ ಧ್ವನಿ ಗುಣಮಟ್ಟ

ತೀವ್ರವಾದ ದೃಶ್ಯ ವೀಕ್ಷಣೆಯ ಅನುಭವ ಒದಗಿಸಲು 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸರಣಿಯು ಕ್ಯೂ-ಸಿಂಫನಿ, ಓಟಿಎಸ್ ಲೈಟ್ ಮತ್ತು ಅಡಾಪ್ಟಿವ್ ಸೌಂಡ್‌ ಫೀಚರ್‌ಗಳನ್ನು ಹೊಂದಿದೆ. ಈ ಫೀಚರ್‌ಗಳು ಬಳಕೆದಾರರಿಗೆ ಆನ್-ಸ್ಕ್ರೀನ್ ವೀಕ್ಷಣೆಯನ್ನು ಉತ್ತಮ ರೀತಿಯಲ್ಲಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ನೈಜ-ಸಮಯದ ದೃಶ್ಯ ವಿಶ್ಲೇಷಣೆ ಮಾಡುವ ಮೂಲಕ 3ಡಿ ಸರೌಂಡ್ ಸೌಂಡ್ ಸೌಕರ್ಯವನ್ನು ಒದಗಿಸುತ್ತದೆ. ಜತೆಗೆ ತೀವ್ರ ರೀತಿಯ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ.

ಅತ್ಯುತ್ತಮ ಗೇಮಿಂಗ್ ಸೌಲಭ್ಯ

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಮೋಷನ್ ಎಕ್ಸಲರೇಟರ್ ಮತ್ತು ಆಟೋ ಲೋ ಲೋಟೆನ್ಸಿ ಮೋಡ್ (ಎಎಲ್ಎಲ್ಎಂ) ತಂತ್ಪಜ್ಞಾನ ಹೊಂದಿದೆ. ಅದರಿಂದಾಗಿ ಗೇಮರ್‌ಗಳು ಉತ್ತಮ ಗೇಮ್ ಆಡಬಹುದಾಗಿದೆ. ಫ್ರೇಮ್‌ಗಳ ನಡುವಿನ ಚಲನೆಯನ್ನು ಮೊದಲೇ ಊಹಿಸಬಹುದಾಗಿದೆ. ಈ ಫೀಚರ್‌ಗಳು ಸ್ಕ್ರೀನ್ ಚಲನೆಯ ಮೃದುತ್ವವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಲೇಟೆನ್ಸಿ ಜತೆಗೆ ಫ್ರೇಮ್ ಬದಲಾವಣೆನ್ನು ವೇಗಗೊಳಿಸುತ್ತದೆ.

ಇದನ್ನೂ ಓದಿ:8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

ಇತರ ಸ್ಮಾರ್ಟ್ ಫೀಚರ್‌ಗಳು

2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿಯು ಸ್ಯಾಮ್‌ಸಂಗ್‌ನ ಟಿವಿ ಪ್ಲಸ್ ಫೀಚರ್ ಹೊಂದಿದ್ದು, 100+ ಉಚಿತ ಚಾನಲ್‌ಗಳನ್ನು ಒದಗಿಸುತ್ತದೆ. ಇದಲ್ಲದೆ, ಅಂತರ್ನಿರ್ಮಿತ ಮಲ್ಟಿ ವಾಯ್ಸ್ ಅಸಿಸ್ಟೆಂಟ್ ಫೀಚರ್ ಗ್ರಾಹಕರಿಗೆ ಉತ್ತಮ ಕನೆಕ್ಟಿವಿಟಿ ಒದಗಿಸುತ್ತದೆ. ಜತೆಗೆ ಉನ್ನತ ಶ್ರೇಣಿಯ ಭದ್ರತಾ ಪರಿಹಾರವಾದ ಸ್ಯಾಮ್‌ಸಂಗ್ ನಾಕ್ಸ್ ಸುರಕ್ಷಿತ ಅನುಭವವನ್ನು ಒದಗಿಸುತ್ತದೆ.

Exit mobile version