ಉತ್ತರಪ್ರದೇಶ: ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬಳು(School teacher) ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಪಾರುಲ್ ಶರ್ಮಾ (Parul Sharma) ಎಂಬ ಶಿಕ್ಷಕಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪ್ರಿಯಾ ಗೋಯಲ್ ಎಂಬಾಕೆಯ ಮನೆಯ ಕಾಂಪೌಂಡ್ ಒಳಗೆ ನುಗ್ಗಿ ತಾನು ತಂದಿದ್ದ ಬ್ಯಾಗ್‌ನಿಂದ ಇಟ್ಟಿಗೆ, ಕಲ್ಲುಗಳಿಂದ ಕಾರಿನ ವಿಂಡೋ ಗ್ಲಾಸ್ (Window glass) ಜಖಂಗೊಳಿಸಿದ್ದಾಳೆ. ಆಕ್ರೋಶದಿಂದ ಕಾರಿನ ಮೇಲೆ ಕಲ್ಲು ಎತ್ತಿ ಹಾಕುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಆಕೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳ ವಿಂಡೋ ಗ್ಲಾಸ್‌ಗಳನ್ನು ಪುಡಿಗಟ್ಟಿದ್ದಾಳೆ.
ಆಕೆಯ ಕೃತ್ಯ ಎಸಗುತ್ತಿದ್ದ ವೇಳೆ ಸದ್ದು ಕೇಳಿ ಎಚ್ಚರಗೊಂಡ ಪ್ರಿಯಾ ಗೋಯಲ್ ಹಾಗೂ ಆಕೆಯ ಕುಟುಂಬಸ್ಥರು ಪಾರುಲ್‌ಳನ್ನು ತಡೆಯಲು ಮುಂದಾಗಿದ್ದಾರೆ. ಆದರೂ ಅದನ್ನೂ ಲೆಕ್ಕಿಸದ ಪಾರುಲ್ ಪದೇ ಪದೇ ಕಲ್ಲಿನಿಂದ ಕಾರಿನ ಗ್ಲಾಸ್ ಪುಡಿ ಪುಡಿ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ವಿಡಿಯೋ ಕ್ಲಿಪಿಂಗ್‌ನಲ್ಲಿ ಆಕೆಗೆ ತಾಯಿಯೂ ಜೊತೆಗಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಪಾರುಲ್ ಮನೆಯ ಬಾಗಿಲು ಒಡೆಯಲು ಕೂಡ ಯತ್ನಿಸಿದ್ದಾಳೆ.
ಇದನ್ನೂ ಓದಿ: Lok Sabha election 2024: ದಿಲ್ಲಿಯಲ್ಲಿ ಆಪ್-ಕಾಂಗ್ರೆಸ್ ಮೈತ್ರಿಯಲ್ಲಿ ಒಡಕು; ರಾಜ್ಯಾಧ್ಯಕ್ಷ ರಾಜೀನಾಮೆ
ಇದೀಗ ಪಾರುಲ್ ಕೃತ್ಯದ ವಿರುದ್ಧ ಪ್ರಿಯಾ ಗೋಯಲ್ ಪೊಲೀಸರಿಗೆ ದೂರು ನೀಡಿದ್ದು, ಕಾರಿನ ಗ್ಲಾಸ್ ಪುಡಿ ಮಾಡಿರುವ ಪಾರುಲ್ ಮನೆಯ ಗೇಟ್ ಲಾಕ್ ಒಡೆದು ತಮ್ಮ ಮೂರು ವರ್ಷದ ಮಗು ಸೇರಿದಂತೆ ಇತರೆ ಕುಟುಂಬಸ್ಥರ ಮೇಲೆ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಮಗು ಗಾಯಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ಮೇಲ್ನೋಟಕ್ಕೆ ಎರಡೂ ಕುಟುಂಬಗಳು ಹಲವು ದಿನಗಳಿಂದ ವೈಷಮ್ಯ ಹೊಂದಿದ್ದು, ಅದರ ಪರಿಣಾಮವಾಗಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಪ್ರಸಾದ್ ಮಾಹಿತಿ ಪ್ರಕಾರ ಸದ್ಯ ಬುಲಂದ್‌ಶೆಹರ್‌ನಲ್ಲಿ ಈ ವಿಡಿಯೋ ಬಹಳ ವೈರಲ್ ಆಗುತ್ತಿದ್ದು, ಪಾರುಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆ ವಿರುದ್ಧ ಅತಿಕ್ರಮಣ, ಆಸ್ತಿ-ಪಾಸ್ತಿ ನಾಶ ಮತ್ತು ಹಲ್ಲೆ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗೆ ಲಕ್ನೋದ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯಲ್ಲೇ ಫೇಶಿಯಲ್ ಮಾಡಿಕೊಳ್ಳುತ್ತಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ವಿದ್ಯಾರ್ಥಿಗಳು ಪೋಷಕರು, ಜನಸಾಮಾನ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ವಿಡಿಯೊ ಮಾಡಿದ್ದರು. ಇದರಿಂದ ಕೋಪಗೊಂಡ ಮುಖ್ಯ ಶಿಕ್ಷಕಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದರು.