ನವದೆಹಲಿ: ಇದೊಂದು ವಿಚಿತ್ರ ಬೆಳವಣಿಗೆ ಅನ್ನಿ, ಮುಂಬೈನಿಂದ ಅಸ್ಸಾಮ್‌ಗೆ (Mumbai to Assam) ಸಾಗಿಸಲಾಗುತ್ತಿದ್ದ ಸ್ಕ್ಯ್ರಾಪ್ ವಿಮಾನವು (Scrap Airplane) ಬಿಹಾರದ ಮೋತಿಹಾರಿ (Bihar Mothihar) ಬಳಿ ಬ್ರಿಡ್ಜ್ (Bridge in Bihar) ಕೆಳಗೆ ಸಿಲುಕಿ ಹಾಕಿಕೊಂಡಿದೆ. ವಿಮಾನವೊಂದು ಬ್ರಿಡ್ಜ್‌ಗೆ ಕೆಳಗೆ ಸಿಲುಕಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ನೂರಾರು ಜನರು ಸ್ಥಳಕ್ಕೆ ಆಗಮಿಸಿ, ಫೋಟೋ ಕ್ಲಿಕ್ಕಿಸುವುದು ಸಾಮಾನ್ಯವಾಗಿತ್ತು. ಈ ಕುರಿತಾದ ವಿಡಿಯೋ ಕೂಡ ವೈರಲ್ ಆಗಿದೆ(Viral Video).
#BIHAR मोतिहारी में हवाई जहाज फ्लाईओवर के नीचे फंसा, देखने को लगी भीड़:
— FirstBiharJharkhand (@firstbiharnews) December 29, 2023
मोतिहारी के लोगों ने सुबह-सुबह देखा अजीब नजारा, पुलिस ने पहुंचकर किया रेस्क्यू pic.twitter.com/ByuoaVLrb9
ಈ ವಿಚಿತ್ರ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಮೋತಿಹಾರಿ ಬಳಿಯ ಪಿಪ್ರಕೋತಿ ಸೇತುವೆಯ ಕೆಳಗೆ ವಿಮಾನದ ಜಾಮ್ ಆಗಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್‌ಗೂ ಕಾರಣವಾಯಿತು. ಸಿಕ್ಕಿಬಿದ್ದ ವಿಮಾನದ ಬಗ್ಗೆ ಗದ್ದಲದ ಉಂಟಾಗುತ್ತಿದ್ದಂತೆ ಕೆಲವು ಟ್ರಕ್ ಚಾಲಕರು ಮತ್ತು ಸ್ಥಳೀಯರು ಸಿಕ್ಕಿಬಿದ್ದಿದ್ದ ವಿಮಾನವನ್ನು ಬಿಡಿಸಲು ಸಹಾಯ ಮಾಡಿದರು. ವಿಮಾನವನ್ನು ಹೊತ್ತ ಟ್ರಕ್ ತನ್ನ ನಿರ್ದಿಷ್ಟ ಸ್ಥಾನಕ್ಕೆ ನಂತರ ವಿಮಾನವು ತನ್ನ ಗಮ್ಯಸ್ಥಾನಕ್ಕೆ ಪ್ರಯಾಣವನ್ನು ಮುಂದುವರಿಸಿತು.
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. 2022ರ ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಸೇತುವೆಯ ಕೆಳಗೆ ಇದೇ ರೀತಿ ಸ್ಕ್ರ್ಯಾಪ್ ವಿಮಾನ ಸಿಕ್ಕಿ ಹಾಕಿಕೊಂಡಿತ್ತು. ಹೈದರಾಬಾದ್ ಮೂಲದ ಜನಪ್ರಿಯ ರೆಸ್ಟೋರೆಂಟ್ ಪಿಸ್ತಾ ಹೌಸ್ ಮಾಲೀಕರು ಆಗ ಕೇರಳದಲ್ಲಿ ಹರಾಜಿನಲ್ಲಿ ವಿಮಾನವನ್ನು ಖರೀದಿಸಿದ್ದರು. ಈ ವೇಳೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಲೂ ವೈರಲ್ ಆಗಿತ್ತು.
2021ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲೂ ಇದೇ ರೀತಿಯಾಗಿತ್ತು. ಕಾರ್ಯಾಚರಣೆಯನ್ನು ನಿಲ್ಲಿಸಿದ್ದ ಏರ್ ಇಂಡಿಯಾ ಎ320 ವಿಮಾನವನ್ನು ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಆಗಲೂ ದಿಲ್ಲಿ ವಿಮಾನ ನಿಲ್ದಾಣ ಬಳಿಯೇ ಈ ಸ್ಕ್ಯ್ರಾಪ್ ವಿಮಾನ ಸಿಲುಕಿಕೊಂಡಿತ್ತು. ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.
Air India A320 fuselage gets stuck underneath a bridge in Andhra Pradesh’s Bapatla district while being transported to a private owner in Hyderabad. https://t.co/yqcepKz0By pic.twitter.com/9WaYbCMHsZ
— Breaking Aviation News & Videos (@aviationbrk) November 14, 2022
ಈ ಸುದ್ದಿಯನ್ನೂ ಓದಿ: Viral Video: ಲಿಫ್ಟ್ನಲ್ಲಿ ಸಿಲುಕಿಕೊಂಡ ಅಂಪೈರ್, ತಡವಾಗಿ ಆರಂಭಗೊಂಡ ಪಂದ್ಯ